ಸುತ್ತೂರು ಶ್ರೀ ಕ್ಷೇತ್ರದಲ್ಲಿ ಮಾ.1, 2ರಂದು ಪತ್ರಕರ್ತರ 34ನೇ ರಾಜ್ಯ ಸಮ್ಮೇಳನ
ಮೈಸೂರು

ಸುತ್ತೂರು ಶ್ರೀ ಕ್ಷೇತ್ರದಲ್ಲಿ ಮಾ.1, 2ರಂದು ಪತ್ರಕರ್ತರ 34ನೇ ರಾಜ್ಯ ಸಮ್ಮೇಳನ

February 26, 2019

ಮಾಧ್ಯಮ ಪ್ರಚಾರ ರಥಕ್ಕೆ ಅದ್ಧೂರಿ ಸ್ವಾಗತ
ಭೇರ್ಯ: ಜಿಲ್ಲೆಯ ಸುತ್ತೂರು ಶ್ರೀಕ್ಷೇತ್ರದಲ್ಲಿ ಮಾ.1 ಮತ್ತು 2ರಂದು ನಡೆ ಯುವ ಪತ್ರಕರ್ತರ 34ನೇ ರಾಜ್ಯ ಸಮ್ಮೇ ಳನದ ಮಾಧ್ಯಮ ಪ್ರಚಾರ ರಥವನ್ನು ಭೇರ್ಯ ಗ್ರಾಮದ ಗಾಂಧಿ ವೃತ್ತದಲ್ಲಿ ಪತ್ರಕರ್ತರು ಸೇರಿದಂತೆ ವಿವಿಧ ಸಂಘ-ಸಂಸ್ಥೆ, ಸರ್ಕಾರಿ ಇಲಾಖೆ ಅಧಿಕಾರಿಗಳು ಅದ್ಧೂರಿಯಾಗಿ ಸ್ವಾಗತಿಸಿದರು.

ಈ ವೇಳೆ ಉಪತಹಶೀಲ್ದಾರ್ ಯಧು ಗಿರೀಶ್ ಮಾತನಾಡಿ, ಜಿಲ್ಲೆಯಲ್ಲಿ ಪತ್ರ ಕರ್ತರ ರಾಜ್ಯ ಸಮ್ಮೇಳನ ನಡೆಯುತ್ತಿ ರುವುದು ಸಂತಸದ ವಿಚಾರವಾಗಿದೆ. ಸರ್ಕಾ ರದ ಹಲವಾರು ಯೋಜನೆಗಳ ಮಾಹಿತಿ ಯನ್ನು ಗ್ರಾಮೀಣ ಭಾಗಕ್ಕೆ ತಲುಪಿಸುತ್ತಿ ರುವ ಗ್ರಾಮಾಂತರ ಪ್ರದೇಶದ ಪತ್ರರ್ತರ ಕಾರ್ಯ ಸಾಧನೆಯನ್ನು ಮೆಚ್ಚಬೇಕು. ರಾಜ್ಯ ಸಮೇಳನವು ಸುತ್ತೂರು ಮಠದಲ್ಲಿ ನಡೆಯುತ್ತಿರುವುದು ಶ್ಲಾಘನೀಯ ಎಂದ ಅವರು, ಈ ಒಂದು ಸಮ್ಮೇಳನಕ್ಕೆ ಶ್ರೀಲಂಕಾ, ಮಲೇಷಿಯಾ, ನೇಪಾಳ, ಗೋವಾ, ದೆಹಲಿ ಮುಂತಾದ ಕಡೆಗಳಿಂದ ಆಗಮಿಸುತ್ತಿರುವ ಪತ್ರಕರ್ತರನ್ನು ಆತ್ಮೀಯವಾಗಿ ಸ್ವಾಗತಿ ಸೋಣ ಎಂದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನಕಾರ್ಯದರ್ಶಿ ಹಳೇ ಮಿರ್ಲೆ ಸುನಯ್‍ಗೌಡ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಉಪಾಧ್ಯಕ್ಷ ಭೇರ್ಯ ಮಹೇಶ್ ಅವರು, ಮಾಧ್ಯಮ ಪ್ರಚಾರ ರಥಯಾತ್ರೆಗೆ ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರೆ ಪತ್ರಕರ್ತ ಸಿಸಿ ಮಹದೇವ್ ಎಲ್ಲರನ್ನೂ ಸ್ವಾಗತಿಸಿದರು. ಹೊಸಅಗ್ರಹಾರ ಗ್ರಾಪಂ ಅಧ್ಯಕ್ಷ ಯೋಗೇಶ್, ಪಿಡಿಓ ಕುಮಾರಸ್ವಾಮಿ, ತಾಲೂಕು ವೀರ ಶೈವ ಮಹಾಸಭಾ ಉಪಾಧ್ಯಕ್ಷ ಬಿ.ಎಂ. ಪ್ರಕಾಶ್, ಸಾಲಿಗ್ರಾಮ ಚೆಸ್ಕಾಂ ಎಇಇ ಮಧುಸೂಧನ್, ಗ್ರಾಪಂ ಮಾಜಿ ಸದಸ್ಯ ಸೋಮು, ಭೇರ್ಯ ಉಪಪೊಲೀಸ್ ಠಾಣೆ ಮುಖ್ಯ ಪೇದೆ ಚಂದ್ರಪ್ಪ, ಹಿರಿಯ ಪತ್ರಕರ್ತರಾದ ಕೆ.ಟಿ. ಮಂಜುನಾಥ್, ರಾಮಕೃಷ್ಣೇಗೌಡ, ಮಹ ದೇವಸ್ವಾಮಿ ಮಹದೇವ್ ಮತ್ತಿತರರಿದ್ದರು.

Translate »