ನವೆಂಬರ್ 23ರಂದು ಹುತ್ತರಿ ಹಬ್ಬ ಆಚರಣೆ
ಕೊಡಗು

ನವೆಂಬರ್ 23ರಂದು ಹುತ್ತರಿ ಹಬ್ಬ ಆಚರಣೆ

November 10, 2018

ಮಡಿಕೇರಿ:  ಕೊಡಗಿನ ಕುಲದೇವರೆಂದೇ ಪ್ರಸಿದ್ಧವಾಗಿ ರುವ ಪಾಡಿ ಶ್ರೀಇಗ್ಗುತ್ತಪ್ಪ ದೇವಸನ್ನಿಧಿಯಲ್ಲಿ ಹುತ್ತರಿ ಹಬ್ಬದ ದಿನ ಮತ್ತು ಮಹೂರ್ತವನ್ನು ಶ್ರೀ ಇಗ್ಗುತ್ತಪ್ಪ ದೇವಳದ ಪಾರಂಪರಿಕ ಜ್ಯೋತಿಷಿಯಾದ ಅಮ್ಮಂಗೇರಿ ಕಣಿಯರ ಕುಟುಂಬದ ಶಶಿಕುಮಾರ್ ನಿಶ್ಚಯಿಸಿದರು.

ಅದರಂತೆ ನ.23 ರಂದು ಪಾಡಿ ಶ್ರೀ ಇಗ್ಗುತ್ತಪ್ಪ ದೇವಳ ದಲ್ಲಿ ಉತ್ಸವ, ದೇವರು ಮಲ್ಮ ಬೆಟ್ಟಕ್ಕೆ ಸಾಗುವುದು, ಪೂಜೆ ಪುನಸ್ಕಾರ ನಡೆಯಲಿದ್ದು, ಅದೇ ದಿನ ರಾತ್ರಿ ಹುತ್ತರಿ ಹಬ್ಬವು ನಡೆಯಲಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.
ದೇವಪೋದ್: ನ.23 ರಂದು ರೋಹಿಣಿ ನಕ್ಷತ್ರದಲ್ಲಿ ಕದಿರು ತೆಗೆ ಯುವ ಕಾರ್ಯಕ್ರಮವಿದ್ದು, ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ರಾತ್ರಿ 7.15ಕ್ಕೆ ನೆರೆ ಕಟ್ಟುವುದು, 8.15ಕ್ಕೆ ಕದಿರು ತೆಗೆಯುವುದು ಹಾಗೂ 9.15ಕ್ಕೆ ಭೋಜ ನಕ್ಕೆ ಪ್ರಾಶಸ್ತ್ಯ ಸಮಯವಾಗಿದೆ ಎಂದು ಜ್ಯೋತಿಷಿಗಳು ತಿಳಿಸಿದ್ದಾರೆ.

ನಾಡ್‍ಪೋದ್: ಅದರಂತೆ ನಾಡ್ ಪೋದ್ ಅಂದರೆ ಸಾರ್ವ ಜನಿಕವಾಗಿ ಎಲ್ಲಾ ಮನೆಗಳಲ್ಲಿ 9.30ಕ್ಕೆ ಭೋಜನಕ್ಕೆ ಸರಿಯಾದ ಸಮಯ ಎಂದು ಅವರು ತಿಳಿಸಿದ್ದಾರೆ.

ಈ ಸಂದರ್ಭ ಮಾತನಾಡಿದ ದೇವತಕ್ಕರಾದ ಪರದಂಡ ಡಾಲಿ ಹುತ್ತರಿ ಹಬ್ಬಕ್ಕೆ ನ.8 ರಂದು ಕಟ್ಟು ವಿಧಿಸ ಲಾಗಿದ್ದು, ಹುತ್ತರಿ ಹಬ್ಬ ನಡೆಯುವವರೆಗೆ ದೇವಳಕ್ಕೆ ಸಂಬಂಧಿಸಿದ ಎಲ್ಲಾ ತಕ್ಕಮುಖ್ಯಸ್ಥರು, ಭಕ್ತಾದಿಗಳು ಮಧು ಮಾಂಸ, ಶುಭ ಕಾರ್ಯಗಳನ್ನು ನಡೆಸಲು ನಿಷಿದ್ಧವಿದೆ. ಎಲ್ಲರೂ ಇದಕ್ಕೆ ಬದ್ಧರಾಗಿ ನಡೆದುಕೊಳ್ಳು ವಂತೆ ಮನವಿ ಮಾಡಿದರು.

ಈ ಸಂದರ್ಭ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ, ಭಕ್ತಜನ ಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ ಸೇರಿದಂತೆ ವ್ಯವಸ್ಥಾಪನಾ ಸಮಿತಿ, ಭಕ್ತಜನ ಸಂಘದ ಎಲ್ಲಾ ಪದಾಧಿಕಾರಿಗಳು, ದೇವಳಕ್ಕೆ ಸಂಬಂಧಿಸಿದ ಎಲ್ಲಾ ತಕ್ಕ ಮುಖ್ಯಸ್ಥರು, ದೇವಳದ ಪಾರುಪತ್ತೆ ಗಾರ ಪರದಂಡ ಪಿನ್ಸ್ ತಮ್ಮಪ್ಪ, ಭಕ್ತಜನ ಸಂಘದ ವ್ಯವಸ್ಥಾಪಕ ಕಾಳಿಂಗ, ಕಣಿಯರ ಕುಟುಂಬದ ಹಿರಿಯರಾದ ಕಣಿಯರ ನಾಣಯ್ಯ, ಹರೀಶ್, ಜೀವನ್ ಮತ್ತಿತರರು ಹಾಜರಿದ್ದರು.

Translate »