ಮೈಸೂರು, ಜು.19(ಆರ್‍ಕೆಬಿ)- ಮೈಸೂರು ವಿವಿ ಕುಲಪತಿಯಾಗಿದ್ದ ಕುವೆಂಪು ಒಮ್ಮೆ ಆಗಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪರನ್ನು ಕಾಣಲು ಭೇಟಿಯ ಸಮಯ ಕೇಳಿದ್ದರಂತೆ. ಅದಕ್ಕೆ ಪ್ರತಿಕ್ರಿಯಿಸಿದ್ದ ಸಿಎಂ ನಿಜಲಿಂಗಪ್ಪ, ರಾಷ್ಟ್ರ ಕವಿ ಕುವೆಂಪುರಂತಹ ದೊಡ್ಡ ವ್ಯಕ್ತಿ ನನ್ನನ್ನು ಕಾಣಲು ಮೈಸೂರಿನಿಂದ ಬೆಂಗಳೂರಿಗೆ ಬರಬೇಕೆ? ನಾನೇ ಹೋಗಿ ಕುವೆಂಪು ಅವರನ್ನು ಭೇಟಿಯಾಗುತ್ತೇನೆ. ವಿಶ್ವವಿದ್ಯಾನಿಲಯದ ವಿಷಯವಿದ್ದರೆ ಶಿಕ್ಷಣ ಸಚಿವರನ್ನೇ ಅವರ ಬಳಿಗೆ ಕಳುಹಿಸುತ್ತೇನೆ. ನನ್ನನ್ನು ಭೇಟಿಯಾಗಲು ಅಷ್ಟು ದೊಡ್ಡ ವ್ಯಕ್ತಿ ಬೆಂಗಳೂರಿನವರೆಗೆ ಬರು ವುದು ಬೇಡ ಎಂದು ಅಂದಿನ ಸಿಎಂ ಎಸ್.ನಿಜಲಿಂಗಪ್ಪ ಹೇಳಿದ್ದರಂತೆ.
ಮೈಸೂರಿನ ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಮೈಸೂರು ವಿವಿ ಕುವೆಂಪು ಕಾವ್ಯಧ್ಯಯನ ಪೀಠ ಏರ್ಪಡಿಸಿದ್ದ `ಕುವೆಂಪು ವ್ಯಕ್ತಿತ್ವ’ ಕುರಿತ ವಿಚಾರ ಸಂಕಿರಣದಲ್ಲಿ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ.ಎಂ.ಕೃಷ್ಣೇ ಗೌಡ ಈ ವಿಷಯ ತಿಳಿಸಿದರು.
ಇದು ಸಾರ್ವಜನಿಕವಾಗಿ ಕುವೆಂಪು ಅವರಿಗೆ ಸಿಕ್ಕ ಗೌರವ. ಮೈಸೂರಿನಲ್ಲಿದ್ದ ಅವರು ಬೆಳಿಗ್ಗೆ ವಿಹಾರಕ್ಕೆ ಹೊರಟರೆ ಹೆಂಗಳೆಯರು ಮನೆಯ ಮುಂದೆ ನೀರು ಹಾಕಿ, ರಂಗವಲ್ಲಿ ಬಿಡಿಸಿ ಮಧ್ಯೆ ದೀಪವಿಟ್ಟು ಮಕ್ಕಳನ್ನು ನಿಲ್ಲಿಸುತ್ತಿದ್ದರು. ಕುವೆಂಪು ತಾತಾ ಬರುತ್ತಾರೆ ನೋಡುತ್ತಿರಿ ಎಂದು ಅವರು ಬರುವಾಗ ಖಾಲಿಯಾಗಿ ಬಣಬಣ ಎನ್ನ ಬಾರದು ಎನ್ನುವ ದೃಷ್ಟಿಯಿಂದ ಈ ರೀತಿ ಗೌರವಿಸುತ್ತಿದ್ದುದನ್ನು ನಾವೇ ಕಣ್ಣಾರೆ ಕಂಡಿದ್ದೇವೆ ಎಂದು ತಿಳಿಸಿದರು.
ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ಗಿಡಕ್ಕೆ ನೀರುಣಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎನ್.ಎಂ.ತಳವಾರ್ ಅಧ್ಯಕ್ಷತೆ ವಹಿಸಿ ದ್ದರು. ಕಾವ್ಯಾಧ್ಯಯನ ಪೀಠದ ಸಂದ ರ್ಶಕ ಪ್ರಾಧ್ಯಾಪಕ ಪ್ರೊ.ಎನ್.ಬೋರ ಲಿಂಗಯ್ಯ, ಪ್ರೊ.ಸಿ.ನಾಗಣ್ಣ, ಡಾ.ಕುಪ್ಪಳ್ಳಿ ಎಂ.ಬೈರಪ್ಪ, ಡಾ.ಆರ್.ಛಲಪತಿ, ಕೆ.ಗೋವಿಂದರಾಜು, ಡಾ.ನೀಲಗಿರಿ ತಳವಾರ್ ಇನ್ನಿತರರು ಉಪಸ್ಥಿತರಿದ್ದರು