ಕಾಂಗ್ರೆಸ್‍ನಲ್ಲೇ ಇದ್ದಿದ್ದರೆ ಸಮಾಧಿಯಾಗ್ತಿದ್ದೆ, ಬಿಜೆಪಿಗೆ ಬಂದು ಬಚಾವಾಗಿದ್ದೇನೆ
ಮೈಸೂರು

ಕಾಂಗ್ರೆಸ್‍ನಲ್ಲೇ ಇದ್ದಿದ್ದರೆ ಸಮಾಧಿಯಾಗ್ತಿದ್ದೆ, ಬಿಜೆಪಿಗೆ ಬಂದು ಬಚಾವಾಗಿದ್ದೇನೆ

December 9, 2019

ಬೆಂಗಳೂರು,ಡಿ.8- ಕಾಂಗ್ರೆಸ್ ಪಕ್ಷದಲ್ಲಿ ಈಗಲೂ ಇದ್ದಿದ್ದರೆ ರಾಜ ಕೀಯ ಸಮಾಧಿಯಾಗಿ ಹೋಗುತ್ತಿದ್ದೆ. ಬಿಜೆಪಿ ಪಕ್ಷಕ್ಕೆ ಬಂದು ಬಚಾ ವಾಗಿದ್ದೇನೆ ಎಂದು ಅನರ್ಹ ಶಾಸಕ ಎಸ್‍ಟಿ ಸೋಮಶೇಖರ್ ಹೇಳಿದ್ದಾರೆ. ಬೆಂಗ ಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಯಶವಂತಪುರ ಬಿಜೆಪಿ ಅಭ್ಯರ್ಥಿಯಾಗಿ ರುವ ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ ನಲ್ಲಿದ್ದಾಗ ಸಿದ್ದರಾಮಯ್ಯ ಆಪ್ತ ವಲಯ ದಲ್ಲಿ ಗುರುತಿಸಿಕೊಂಡಿದ್ದರು. ಪಕ್ಷ ಬೆಳೆಸುವ ಅಥವಾ ಮತದಾರರ ಸಂಖ್ಯೆಯನ್ನು ಹೆಚ್ಚಿಸಿ ಕೊಳ್ಳುವ ಉದ್ದೇಶವೇ ಇಲ್ಲ. ಕಾಂಗ್ರೆಸ್ ನಾಯಕರೇ ಪಕ್ಷವನ್ನು ಹಾಳು ಮಾಡಿ ದರು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಅನರ್ಹ ಶಾಸಕರಿಗೆ ಚುನಾ ವಣೆಯಲ್ಲಿ ಗೆದ್ದರೆ ಮಾತ್ರ ಸಚಿವ ಸ್ಥಾನ ಎಂಬ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ್ದು, 17ಜನ ಅನರ್ಹ ಶಾಸ ಕರು ಒಟ್ಟಿಗೆ ಇದ್ದೇವೆ. ಆದರೆ, ನಾವ್ಯಾರೂ ಸಿಎಂ ಯಡಿಯೂರಪ್ಪ ಎದುರು ಸಚಿವ ಸ್ಥಾನದ ಅಥವಾ ವಿಧಾನ ಪರಿಷತ್‍ಗೆ ಕಳು ಹಿಸುವ ಕುರಿತು ಬೇಡಿಕೆ ಇಟ್ಟಿಲ್ಲ. ಚುನಾವಣೆ ಯಲ್ಲಿ ಸೋತವರನ್ನು ವಿಧಾನ ಪರಿಷತ್‍ಗೆ ನಾಮನಿರ್ದೇಶನ ಮಾಡುವ ಕುರಿತು ಯಾರ ಲ್ಲಿಯೂ ಮನವಿ ಮಾಡಿಲ್ಲ ಎಂದಿದ್ದಾರೆ.

ಅನರ್ಹ ಶಾಸಕ ರೋಷನ್ ಬೇಗ್ ತಾವಾ ಗಿಯೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಲ್ಲ. ಸುಪ್ರೀಂಕೋರ್ಟ್ ಆದೇಶದ ಅನ್ವಯ ಸೋತವರಿಗೆ ಸಚಿವ ಸ್ಥಾನ ನೀಡಲು ಸಾಧ್ಯ ವಿಲ್ಲ. ಆದರೆ ನಾವೇನು ಸಚಿವರಾಗುವ ಆಸೆ ಯಿಂದ ಬಿಜೆಪಿಗೆ
ಸೇರ್ಪಡೆಗೊಂಡಿಲ್ಲ. ಸಚಿವ ಸ್ಥಾನ ನೀಡದೇ ಇದ್ದರೂ ಕ್ಷೇತ್ರದ ಅಭಿವೃದ್ದಿಗಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಉಪ ಚುನಾವಣೆ ಫಲಿತಾಂಶದ ಬಳಿಕ ಕ್ಷೇತ್ರದ ವಿವಿಧೆಡೆ ಹೋಗಿ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಗೆದ್ದವರು ಯಾರೂ ಸೋಮವಾರ ಕ್ಷೇತ್ರ ಬಿಟ್ಟು ಬರುವುದಿಲ್ಲ. ಹೀಗಾಗಿ ಮಂಗಳವಾರ ಬೆಳಗ್ಗೆ ಅನರ್ಹ ಶಾಸಕರೆಲ್ಲರೂ ಒಟ್ಟಾಗಿ ಸೇರುತ್ತೇವೆ ಎಂದರು. ಒಕ್ಕಲಿಗ ನಾಯಕನಾಗಲು ಪ್ರಯತ್ನ ಮಾಡುವುದಿಲ್ಲ. ಕಾಂಗ್ರೆಸ್‍ನಲ್ಲಿ ಇದ್ದಾಗಲೂ ನಾನು ಪೈಪೆÇೀಟಿ ಮಾಡಿಲ್ಲ. ಬಿಜೆಪಿ ಪಕ್ಷಕ್ಕೆ ಬಂದಿದ್ದೇನೆ. ಈಗ ಸಚಿವ ಆರ್.ಅಶೋಕ್ ಅವರಿಗೆ ಪೈಪೆÇೀಟಿ ನೀಡಿ ಒಕ್ಕಲಿಗ ನಾಯಕನಾಗುವ ಆಸೆ ನನ್ನಗಿಲ್ಲ. ಬಿಜೆಪಿಗೆ ಬಂದಿದ್ದೇನೆ. ಇಲ್ಲಿ ಇರುವಷ್ಟು ದಿನ ಪ್ರಾಮಾಣಿಕನಾಗಿ ಇರುತ್ತೇನೆ. ಇಲ್ಲಿಂದ ಬೇರೆ ಕಡೆ ಹೋಗುವ ಯೋಚನೆ ಮಾಡಿಲ್ಲ. ಮಂತ್ರಿ ಮಾಡಿ ಎಂದು ಎಂದಿಗೂ ಕೇಳುವುದಿಲ್ಲ. ಇಂತಹ ಖಾತೆ ಬೇಕು ಅಂತ ಕಂಡಿಷನ್ ಹಾಕಿಲ್ಲ. ಮಂತ್ರಿ ಸ್ಥಾನವನ್ನು ಅವರೇ ಕೊಟ್ಟರೆ ಸ್ವೀಕರಿಸುತ್ತೇನೆ ಎಂದು ಹೇಳಿದರು.

Translate »