ತನ್ನ ಅಜ್ಜಿ ಸಮಾಧಿ ಪಕ್ಕದಲ್ಲೇ ಸಮಾಧಿಯಾದ ಉನ್ನಾವೋ ಸಂತ್ರಸ್ತೆ
ಮೈಸೂರು

ತನ್ನ ಅಜ್ಜಿ ಸಮಾಧಿ ಪಕ್ಕದಲ್ಲೇ ಸಮಾಧಿಯಾದ ಉನ್ನಾವೋ ಸಂತ್ರಸ್ತೆ

December 9, 2019

ಲಖನೌ: 44 ಗಂಟೆಗಳ ಸತತ ಸಾವು-ಬದುಕಿನ ನಡುವೆ ಹೋರಾಟದ ನಂತರ ನವದೆಹಲಿಯ ಸಫ್ದುರ್ಜಂಗ್ ಆಸ್ಪತ್ರೆಯಲ್ಲಿ ಶುಕ್ರವಾರ ತಡರಾತ್ರಿ ಮೃತಪಟ್ಟ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಮಹಿಳೆಯ ಕುಟುಂ ಬವು ಅವರ ಅಜ್ಜ-ಅಜ್ಜಿಯ ಸಮಾಧಿ ಪಕ್ಕ ದಲ್ಲೇ ಆಕೆಯ ಸಮಾಧಿ ಮಾಡುವ ಮೂಲಕ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದೆ. ಉನ್ನಾವೋನ ಖೇರಾ ಗ್ರಾಮದ ಕೃಷಿಭೂಮಿ ಯಲ್ಲಿ ಈ ಅಂತಿಮ ಕ್ರಿಯಾ ವಿಧಾನಗಳು ನಡೆದಿವೆÉ. 1 ವರ್ಷದ ಹಿಂದೆ 2018ರ ಡಿಸೆಂ ಬರ್‍ನಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳಿಂದ ಗುರುವಾರ ಮುಂಜಾನೆ ಸಂತ್ರಸ್ತೆ ಬೆಂಕಿಗೆ ಆಹುತಿಯಾಗಿದ್ದಳು. ಶೇ.90ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದ ಆಕೆಯನ್ನು ದೆಹಲಿಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಒದಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಳು. ಇನ್ನು ಮೊದಲಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮನದವರೆಗೆ ಸಂತ್ರಸ್ಥೆಯ ಅಂತ್ಯಸಂಸ್ಕಾರ ನಡೆಸುವುದಿಲ್ಲ ಆಕೆಯ ಕುಟುಂಬ ಆಗ್ರಹಿದ್ದರು. ಆದರೆ ಮಂತ್ರಿಗಳಾದ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ಕಮಲ್ ರಾಣಿ ವರುಣ್ ಅವರ ಆಗಮನದ ನಂತರವೇ ಕುಟುಂಬವು ಅಂತಿಮ ವಿಧಿಗಳನ್ನು ಮಾಡಲು ಒಪ್ಪಿಕೊಂಡಿತು.

Translate »