ಮೈಸೂರು,ಜು.20(ಆರ್‍ಕೆಬಿ)- ಮೈಸೂರಿನ ಮಳಲವಾಡಿಯ ನ್ಯಾಯಾಲಯ ಸಂಕೀರ್ಣದಲ್ಲಿ 4 ಅಂತಸ್ತಿನ ಕಟ್ಟಡವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಉದ್ಘಾಟಿಸಿದರು.
ಮೈಸೂರು ಜಿಲ್ಲಾ ನ್ಯಾಯಾಲಯ, ಲೋಕೋಪಯೋಗಿ ಇಲಾಖೆ ಮತ್ತು ಮೈಸೂರು ವಕೀಲರ ಸಂಘ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಳಿಕ ಮಾತನಾಡಿದ ಅವರು, ಮೈಸೂರಿನಲ್ಲಿ ಇಷ್ಟು ಸುಸಜ್ಜಿತ ಕಟ್ಟಡ ಇರುವುದು ಸಂತಸ ದಾಯಕ. ಬರೀ ಕಟ್ಟಡ ಇದ್ದರಷ್ಟೇ ಸಾಲದು, ನ್ಯಾಯ ಅರಸಿ ಬರುವ ಸಾರ್ವಜನಿಕರಿಗೆ ಸೂಕ್ತ ನ್ಯಾಯ ದೊರಕುವುದೂ ಅಷ್ಟೇ ಮುಖ್ಯ ಎಂದು ಹೇಳಿದರು.
ನ್ಯಾಯ ಸಿಗುವುದು ವಿಳಂಬ ಎಂಬ ಭಯ ದಿಂದ ಜನರು ನ್ಯಾಯಾಲಯಗಳತ್ತ ಬರಲು ಹಿಂಜರಿಯುತ್ತಾರೆ. ನ್ಯಾಯಾಲಯದ ವಿಶ್ವಾಸಾರ್ಹತೆ ನಮಗೆ ಮುಖ್ಯ. ಹಾಗಾಗಿ ವಕೀಲರು, ನ್ಯಾಯಾಲಯ ನೌಕರರು, ವಕೀ ಲರ ಸಂಘ ಮತ್ತು ಬೆಂಚ್ ನಡುವಿನ ಸಮ ನ್ವಯ ಉತ್ತಮವಾಗಿದ್ದರೆ ತ್ವರಿತ ನ್ಯಾಯ ವಿತರಣೆಗೆ ಸಹಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
25 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡದಲ್ಲಿ 5 ಕೌಟುಂಬಿಕ ನ್ಯಾಯಾಲಯ, ಪ್ರತಿ ಮಹಡಿಯಲ್ಲಿ ಸಾರ್ವ ಜನಿಕ ಶೌಚಾಲಯ, ಸಮ್ಮೇಳನ ಸಭಾಂ ಗಣ, ವಕೀಲರ ಕ್ಯಾಂಟೀನ್, ಸಾರ್ವಜನಿಕ ಕ್ಯಾಂಟೀನ್, ಗ್ರಂಥಾಲಯ ಇದೆ. ಒಟ್ಟು 20 ನ್ಯಾಯಾಲಯಗಳನ್ನು ಈ ಕಟ್ಟಡ ಒಳಗೊಂ ಡಿದೆ. ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಮೈಸೂರು ಜಿಲ್ಲಾ ನ್ಯಾಯಾಲಯಗಳ ಆಡಳಿತ ನ್ಯಾಯಾಧಿಕಾರಿ ಎಸ್.ಎನ್.ಸತ್ಯನಾರಾ ಯಣ, ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ವಿ.ಶ್ರೀಶಾನಂದ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಕೆ.ವಂಟಿ ಗೋಡಿ, 2ನೇ ಹೆಚ್ಚುವರಿ ಕೌಟುಂಬಿಕ ಜಿಲ್ಲಾ ನ್ಯಾಯಾಧೀಶರಾದ ಎನ್.ಎಸ್.ಪಾಟೀಲ್, ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಸದಸ್ಯ ಬಿ.ಆರ್.ಚಂದ್ರಮೌಳಿ, ಮೈಸೂರು ವಕೀ ಲರ ಸಂಘದ ಅಧ್ಯಕ್ಷ ಎಸ್.ಆನಂದ ಕುಮಾರ್, ಕಾರ್ಯದರ್ಶಿ ಬಿ.ಶಿವಣ್ಣ ಇನ್ನಿತರರು ಸಮಾರಂಭದಲ್ಲಿದ್ದರು.