ಐಎಂಎ ಹಗರಣ: ಜಿಲ್ಲಾಧಿಕಾರಿ ಸೇರಿ ಮೂವರಿಗೆ ಜಾಮೀನು
ಮೈಸೂರು

ಐಎಂಎ ಹಗರಣ: ಜಿಲ್ಲಾಧಿಕಾರಿ ಸೇರಿ ಮೂವರಿಗೆ ಜಾಮೀನು

July 27, 2019

ಬೆಂಗಳೂರು,ಜು.26: ಐಎಂಎ ಹಗರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮೂವರು ಪ್ರಮುಖ ಸರ್ಕಾರಿ ಅಧಿಕಾರಿಗಳಿಗೆ ಇಂದು ಜಾಮೀನು ದೊರೆತಿದೆ. ಇದರಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳೂ ಸೇರಿದ್ದಾರೆ. ಐಎಂಎ ಪ್ರಕರಣದಲ್ಲಿ ಒಂದೂವರೆ ಕೋಟಿ ಲಂಚ ಸ್ವೀಕರಿಸಿದ್ದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ಬೆಂಗಳೂರು ನಗರ ಡಿಸಿ ವಿಜಯ್ ಶಂಕರ್, 4 ಕೋಟಿ ಲಂಚ ಸ್ವೀಕರಿಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ಎಸಿ ನಾಗರಾಜು ಮತ್ತು ಮತ್ತೊಬ್ಬ ಅಧಿಕಾರಿಗೆ ಜಾಮೀನು ದೊರೆತಿದೆ. ಆದರೆ ಜಾಮೀನು ನೀಡುವಂತೆ ಅರ್ಜಿ ಹಾಕಿದ್ದ ಐಎಂಎಯ ಕ್ಲರ್ಕ್ ಹನೀಫ್ ಅಫ್ಜರ್ ಅವರಿಗೆ ಜಾಮೀನು ನೀಡಲು ನ್ಯಾಯಾಲಯವು ನಿರಾಕರಿಸಿದೆ. ಬೆಂಗಳೂರು ನಗರ ಡಿಸಿವಿಜಯ್ ಶಂಕರ್ ಅವರನ್ನು ಜು.8ರಂದು ಎಸ್‍ಐಟಿಯು ಬಂಧಿಸಿತ್ತು. ಅವರಿಗೂ ಕೆಲವೇ ದಿನ ಮುನ್ನಾ ಎಸಿ ನಾಗರಾಜು ಅವರನ್ನು ಎಸ್‍ಐಟಿಯು ಬಂಧಿಸಿತ್ತು. ವಿಜಯಶಂಕರ್ 1.5 ಕೋಟಿ ಲಂಚ ಪಡೆದ ಆರೋಪ ಹೊತ್ತಿದ್ದರೆ, ನಾಗರಾಜು, ಐಎಂಎಯಿಂದ ನಾಲ್ಕೂವರೆ ಕೋಟಿ ಲಂಚ ಪಡೆದ ಆರೋಪವನ್ನು ಹೊತ್ತಿದ್ದಾರೆ. ಕೆಲವು ದಿನಗಳ ಮುಂಚೆಯಷ್ಟೆ ಐಎಂಎ ಹಗರಣದ ಪ್ರಮುಖ ಆರೋಪಿ, ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ ವಿದೇಶದಿಂದ ಭಾರತಕ್ಕೆ ವಾಪಸ್ಸಾಗಿದ್ದು, ಪ್ರಸ್ತುತ ಇಡಿ ವಶದಲ್ಲಿದ್ದಾನೆ. ಇಂದು ಎಸ್‍ಐಟಿಯು ಮನ್ಸೂರ್ ಖಾನ್‍ನನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.

Translate »