ಮಾನವೀಯ ನೆಲೆಗಟ್ಟಿನ  ಕಾಯ್ದೆ ಬಗ್ಗೆ ಅಪಪ್ರಚಾರ
ಮೈಸೂರು

ಮಾನವೀಯ ನೆಲೆಗಟ್ಟಿನ  ಕಾಯ್ದೆ ಬಗ್ಗೆ ಅಪಪ್ರಚಾರ

January 6, 2020

ಮೈಸೂರು, ಜ.5(ಎಸ್‍ಬಿಡಿ)-ಮಾನವೀಯ ನೆಲೆಗಟ್ಟಿನ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಕಾಂಗ್ರೆಸ್, ಕಮ್ಯೂನಿಸ್ಟ್ ಪಕ್ಷ ದವರು ಹಾಗೂ ಕೆಲ ಬುದ್ಧಿಜೀವಿಗಳು ಅಪಪ್ರಚಾರ ಮಾಡು ತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆದ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಹೇಳಿದರು.

ಮೈಸೂರಿನ ಚಾಮರಾಜ ಕ್ಷೇತ್ರದ ಹೆಬ್ಬಾಳು ಬಡಾ ವಣೆ, ಕುವೆಂಪು ವೃತ್ತದ ಬಳಿ, `ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)-2019 ಜನಜಾಗೃತಿ ಅಭಿಯಾನ’ಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು,  ಮಾನವೀಯ ನೆಲೆಗಟ್ಟಿನ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಜಮ್ಮು-ಕಾಶ್ಮೀರಕ್ಕಿದ್ದ 370ನೇ ವಿಧಿ ರದ್ದು ಸೇರಿದಂತೆ ದೇಶದ ಹಲವು ಹಳೆಯ ಸಮಸ್ಯೆಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಿಂದ ಪರಿ ಹಾರವಾಗುತ್ತಿವೆ. ಸಿಂಧನೂರಿನಲ್ಲಿರುವ 21 ಸಾವಿರ ಬಾಂಗ್ಲಾ ವಲಸಿಗರು, ಪೌರತ್ವ ತಿದ್ದುಪಡಿ ಕಾಯ್ದೆಯಾದಾಗ ದೀಪಾ ವಳಿ ಆಚರಿಸಿದ್ದಾರೆ. ಈ ಕಾಯ್ದೆಯಿಂದ  ಭಾರತದಲ್ಲಿ ರುವ ಮುಸ್ಲಿಮರಿಗೆ ಯಾವುದೇ ತೊಂದರೆಯಿಲ್ಲ ಎಂದರು.

ಮುಸ್ಲಿಂ ರಾಷ್ಟ್ರಗಳೆಂದು ಘೋಷಿಸಿಕೊಂಡಿರುವ ಪಾಕಿ ಸ್ತಾನ, ಬಾಂಗ್ಲಾ ಹಾಗೂ ಆಫ್ಘಾನಿಸ್ತಾನ ರಾಷ್ಟ್ರಗಳಲ್ಲಿ ಕಿರು ಕುಳ ಸಹಿಸಲಾಗದೆ ಭಾರತಕ್ಕೆ ವಲಸೆ ಬರುವ ಅಲ್ಲಿನ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವುದು ತಪ್ಪಲ್ಲ. ನೆಹರೂ ಪ್ರಧಾನಿಯಾಗಿದ್ದಾಗ ಈ ಕಾಯ್ದೆ ಜಾರಿಗೆ ತಂದರು. ನಂತರದಲ್ಲಿ ಪ್ರಧಾನಿಯಾದ ಇಂದಿರಾಗಾಂಧಿ ಸೇರಿದಂತೆ ಯಾರೂ ಸಮರ್ಪಕವಾಗಿ ಕಾಯ್ದೆ ಜಾರಿಗೆ ತರಲಿಲ್ಲ. ಇದೀಗ ಪ್ರಧಾನಿ ಮೋದಿ ಹಾಗೂ ಗೃಹಮಂತ್ರಿ ಅಮಿತ್‍ಶಾ ಅವರು ಜಾರಿಗೆ ತಂದಿದ್ದಾರೆ. ಭಾರತದಲ್ಲಿರುವಂತೆ ಅಲ್ಪಸಂಖ್ಯಾ ತರ ರಕ್ಷಣೆಗೆ ಪಾಕಿಸ್ತಾನ, ಬಾಂಗ್ಲಾ ಹಾಗೂ ಆಫ್ಘಾನಿಸ್ತಾನ ದಲ್ಲಿ ಕಾನೂನಿದೆಯೇ? ಎಂದು ಸಿದ್ದರಾಮಯ್ಯ, ಸೋನಿಯಾ ಗಾಂಧಿ, ರಾಹುಲ್‍ಗಾಂಧಿ ಅಧ್ಯಯನ ಮಾಡಿ ಬರಲಿ. ಆಗ ಪೌರತ್ವ ತಿದ್ದುಪಡಿ ಕಾಯ್ದೆ ಅವಶ್ಯಕತೆ ತಿಳಿಯುತ್ತದೆ ಎಂದು ವಾಗ್ದಾಳಿ ನಡೆಸಿದರು. ಈ ಮೂರು ಮುಸ್ಲಿಂ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ, ಜೈನ್, ಬೌದ್ಧ, ಸಿಖ್, ಪಾರ್ಸಿ ಹಾಗೂ ಕ್ರಿಶ್ಚಿಯನ್ನರಿಗೆ ಯಾವುದೇ ಸೌಲಭ್ಯವಿಲ್ಲ. ಆಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರ ಲಕ್ಷಾಂತರ ಮಂದಿರಗಳ ನಾಶ ಮಾಡಿದ್ದಲ್ಲದೆ, ಸಾವಿರಾರು ಜನರ ಹತ್ಯೆಯಾಯಿತು. ದೇಶ ವಿಭಜನೆ ಸಂದರ್ಭದಲ್ಲಿ ಆ ರಾಷ್ಟ್ರಗಳಲ್ಲಿ ನೆಲೆಸಿ, ಹಿಂಸೆಪಡುತ್ತಿರುವ ಅವರಿಗೆ ಆಶ್ರಯ ನೀಡಲಾಗುತ್ತಿದೆ. ಅಲ್ಲಿನ ಮುಸ್ಲಿಮರು ಅಲ್ಪಸಂಖ್ಯಾತರಲ್ಲದ ಕಾರಣಕ್ಕೆ ಅವರನ್ನು ಪರಿಗಣಿಸಿಲ್ಲ. ಆದರೆ ಕಾಯ್ದೆ ಬಗ್ಗೆ ಅಪಪ್ರಚಾರ ಮಾಡುವ ಮೂಲಕ ಆತಂಕ ಹುಟ್ಟಿಸುವ ಪ್ರಯತ್ನ ನಡೆದಿದೆ. ಭಾರತದಲ್ಲಿರುವ ಅಲ್ಪಸಂಖ್ಯಾತರೆಲ್ಲಾ ತುಂಬಾ ಒಳ್ಳೆಯವರು. ಆದರೆ ಕಾಂಗ್ರೆಸ್, ಕಮ್ಯೂನಿಸ್ಟ್ ಹಾಗೂ ಕೆಲ ಬುದ್ದಿಜೀವಿಗಳು ದೇಶ ಹಾಳು ಮಾಡಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಜಮ್ಮು-ಕಾಶ್ಮೀರಕ್ಕಿದ್ದ 370ನೇ ವಿಧಿ ರದ್ದಾದಾಗ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವಂತೆ ನ್ಯಾಯಾಲಯ ತೀರ್ಪು ನೀಡಿದಾಗ, ತ್ರಿವಳಿ ತಲಾಖ್ ತೆಗೆದಾಗ ಕಾಂಗ್ರೆಸ್ ನವರು ಕಥೆಕಟ್ಟಿ, ಕೋಲಾಹಲ ಸೃಷ್ಟಿಸಲು ಯತ್ನಿಸಿದರು. ಆದರೆ ಕಾಂಗ್ರೆಸ್ ಭ್ರಮಲೋಕ ವನ್ನು ಮುಸ್ಲಿಂ ಬಾಂಧವರು ಹುಸಿಗೊಳಿಸಿದರು. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸಬೇಕು. ಈಗ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದರೆ ಮುಸ್ಲಿಮರು ದೇಶ ಬಿಡಬೇಕಾಗುತ್ತದೆ ಎಂದು ಸುಳ್ಳು ಹೇಳಿ, ನಂಬಿಸುವ ಯತ್ನ ನಡೆದಿದೆ. ಈ ರೀತಿಯ ಅಪಪ್ರಚಾರದ ವಿರುದ್ಧ ಅಭಿಯಾನ ಆರಂಭವಾಗಿದೆ. ಪ್ರತಿಯೊಬ್ಬ ಕಾರ್ಯಕರ್ತರೂ ಒಂದೊಂದು ಬೂತ್ ಮಟ್ಟದಲ್ಲೂ ಕನಿಷ್ಟ 50 ಮನೆಗಳಿಗೆ ಭೇಟಿ ನೀಡಿ, ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ರಾಜೇಂದ್ರ, ಸಂಘಟನಾ ಪ್ರಧಾನ ಕಾರ್ಯದರ್ಶಿ ಸುರೇಶ್‍ಬಾಬು, ಕಾರ್ಪೊ ರೇಟರ್‍ಗಳಾದ ವೇದಾವತಿ, ಸತೀಶ್, ರಂಗಸ್ವಾಮಿ, ಹೇಮಾ ನಂದೀಶ್, ರಾಜ್ಯ ಕಾರ್ಯ ಕಾರಿಣಿ ಸದಸ್ಯ ಶ್ರೀವತ್ಸ, ಮುಖಂಡ ಸೋಮಶೇಖರ್ ಬಾಬು ಮತ್ತಿತರರು ಉಪಸ್ಥಿತರಿದ್ದರು

 

Translate »