ವಿರಾಜಪೇಟೆಯಲ್ಲಿ ಇಂದು ಪೊಮ್ಮಕಡ ಕೂಟ ಉದ್ಘಾಟನೆ
ಕೊಡಗು

ವಿರಾಜಪೇಟೆಯಲ್ಲಿ ಇಂದು ಪೊಮ್ಮಕಡ ಕೂಟ ಉದ್ಘಾಟನೆ

August 12, 2018

ವಿರಾಜಪೇಟೆ: ಸಾಹಿತ್ಯ ಸಂಸ್ಕೃತಿ ಭಾಷೆ ಆಚಾರ ವಿಚಾರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪೊಮ್ಮಕ್ಕಡ ಪಾತ್ರ ಮಹತ್ವವಾದದ್ದು. ಎಲ್ಲಾ ಕೊಡವ ಸಮಾಜಗಳಲ್ಲಿ ಪೊಮ್ಮಕ್ಕಡ ಕೂಟ ಎಂಬ ಒಕ್ಕೂಟಗಳು ಚಾಲ್ತಿಯಲ್ಲಿದೆ.

ವಿರಾಜಪೇಟೆ ಕೊಡವ ಸಮಾಜದಲ್ಲೂ ಮಹಿಳೆಯರ ಒಕ್ಕೂಟವನ್ನು ಸ್ಥಾಪಿಸಲಾಗಿದ್ದು ಅಧಿಕೃತವಾಗಿ ಆಗಸ್ಟ್ 12 ರಂದು ವಿರಾಜಪೇಟೆ ಕೊಡವ ಸಮಾಜದದಲ್ಲಿ ಚಾಲನೆ ನೀಡಲಾಗುವುದು ಎಂದು ಒಕ್ಕೂಟದ ಅಧ್ಯಕ್ಷೆ ಮನಿಯಪಂಡ ಕಾಂತಿ ಸತೀಶ್ ತಿಳಿಸಿದರು.

ವಿರಾಜಪೇಟೆಯಲ್ಲಿ ಗೋಷ್ಠಿಯನ್ನದ್ದೇಸಿಸಿ ಮಾತನಾಡಿದ ಅವರು, ಕೊಡವ ಸಮಾಜದ ಸಹಯೋಗದಲ್ಲಿ ಪೊಮ್ಮಕ್ಕಡ ಒಕ್ಕೂಟವನ್ನು ಸ್ಥಾಪಿಸುವಂತೆ ಕಳೆದ ಮಹಾಸಭೆಯಲ್ಲಿ ಅಂಗಿಕರಿಸಲಾಗಿತ್ತು. ಈಗಾಗಲೆ 100 ಕ್ಕೂ ಅಧಿಕ ಕೊಡವ ಮಹಿಳೆಯರು ಸದಸ್ಯತ್ವ ಪಡೆದುಕೊಂಡಿದ್ದಾರೆ ಎಂದರು.

ಪೊಮ್ಮಕ್ಕಡ ಕೂಟ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮನಿಯಪಂಡ ಕಾಂತಿ ಸತೀಶ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೊಡವ ಸಮಾಜದ ಅಧ್ಯಕ್ಷ ವಾಂಚಿರ ನಾಣಯ್ಯ, ಮಾಜಿ ಅಧ್ಯಕ್ಷ ನಾಯಡ ವಾಸು ನಂಜಪ್ಪ, ಹಿರಿಯ ಸಾಹಿತಿ ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ ಉಪಸ್ಥಿತಲಿರುವರು. ಗೋಷ್ಠಿಯಲ್ಲಿ ಕಾರ್ಯದರ್ಶಿ ಬಯವಂಡ ಇಂದಿರಾ ಬೆಳ್ಯಪ್ಪ, ಖಜಾಂಜಿ ಪೊಯ್ಯೆಟಿರ ಭಾನು ಭೀಮಯ್ಯ ಇತರರು ಉಪಸ್ಥಿತರಿದ್ದರು.

Translate »