- ಜೂ.1ರಿಂದಲೇ ಜಾರಿಯಾಗಿದೆ
- ವಾರದ ದಿನ 60 ರಿಂದ 80 ರೂ.
- ವಾರಾಂತ್ಯ ದಿನ 80ರಿಂದ 100 ರೂ.
ಮೈಸೂರು,ಜೂ.24(ಎಂಟಿವೈ)- ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸು ವುದರೊಂದಿಗೆ ನಿರ್ವಹಣೆಯ ವೆಚ್ಚ ಸರಿದೂಗಿಸಲು ಮೃಗಾಲಯ ಸಂಪ ನ್ಮೂಲ ಕ್ರೋಢೀಕರಣಕ್ಕೆ ಮುಂದಾಗಿದ್ದು, ಜೂ.1ರಿಂದಲೇ ಪ್ರವೇಶ ದರ ಹೆಚ್ಚಿಸಿದೆ.
ಹೊಸ ಪ್ರಾಣಿಗಳನ್ನು ತರುವುದ ರೊಂದಿಗೆ ಮೃಗಾಲಯದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಸಮ ರೋಪಾದಿಯಲ್ಲಿ ನಡೆಸುತ್ತಿರುವುದ ರಿಂದ ಸಂಪನ್ಮೂಲ ಕ್ರೂಡೀಕರಣಕ್ಕೆ ಕ್ರಮ ಕೈಗೊಂಡಿದೆ. ಇದಕ್ಕಾಗಿ ಪ್ರವೇಶ ದರವನ್ನು ಹೆಚ್ಚಿಸಿದೆ. ಈ ಹಿಂದೆ ವಾರದ ದಿನಗಳಲ್ಲಿ ಜಾರಿಯಲ್ಲಿದ್ದ ವಯಸ್ಕರಿಗೆ 60 ರೂ. ಟಿಕೆಟ್ ದರವನ್ನು 80 ರೂ., ವಾರಾಂತ್ಯದ ದಿನಗಳಲ್ಲಿದ್ದ 80 ರೂ., ಅನ್ನು 100 ರೂ.ಗೆ ಹೆಚ್ಚಳ ಮಾಡಲಾಗಿದೆ. ಮಕ್ಕಳಿಗೆ ಸಾಮಾನ್ಯ ದಿನಗಳಲ್ಲಿ 40 ರೂ, ವಾರಾಂತ್ಯ ದಿನ ಗಳಲ್ಲಿ 50 ರೂ. ಪ್ರವೇಶ ದರ ನಿಗದಿ ಪಡಿಸ ಲಾಗಿದೆ. ಪರಿಷ್ಕøತ ದರವೂ ಜೂ.1ರಿಂದಲೇ ಜಾರಿಗೊಂಡಿದೆ. ಕಳೆದ ವರ್ಷ 10 ರೂ.ಹೆಚ್ಚಳ ಮಾಡಲಾಗಿದ್ದನ್ನು ಸ್ಮರಿಸಬಹುದು.
ಈ ಕುರಿತು `ಮೈಸೂರು ಮಿತ್ರ’ ನೊಂದಿಗೆ ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲ ಕರ್ಣಿ ಮಾತನಾಡಿ, ನಿರ್ವಹಣೆಯ ವೆಚ್ಚ ಹೆಚ್ಚಾಗುತ್ತಿದೆ. ಇದರೊಂದಿಗೆ ಮೃಗಾ ಲಯಕ್ಕೆ ವರ್ಷದಿಂದ ವರ್ಷಕ್ಕೆ ಹೊಸ ಹೊಸ ಪ್ರಾಣಿಗಳನ್ನು ತರಲಾಗುತ್ತಿದೆ. ಅಲ್ಲದೆ ಮೃಗಾಲಯದಲ್ಲಿರುವ ಪ್ರಾಣಿಗಳ ಸಂಖ್ಯೆಯೂ ಹೆಚ್ಚಾಗಿದೆ. ಪ್ರಾಣಿಗಳ ಮನೆ ನವೀಕರಣ, ಕೆಲವು ಅಭಿವೃದ್ಧಿ ಕಾರ್ಯ ಕೈಗೊಂಡು, ಪ್ರವಾಸಿಗರಿಗೆ ಮೂಲ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಸಂಪನ್ಮೂಲ ಕ್ರೂಢೀಕರಣ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.