ಬಿಹಾರದಲ್ಲಿ ಮಕ್ಕಳ ಸರಣಿ ಸಾವು ತಡೆಗೆ ಆಗ್ರಹಿಸಿ ಎಸ್‍ಯುಸಿಐ ಪ್ರತಿಭಟನೆ
ಮೈಸೂರು

ಬಿಹಾರದಲ್ಲಿ ಮಕ್ಕಳ ಸರಣಿ ಸಾವು ತಡೆಗೆ ಆಗ್ರಹಿಸಿ ಎಸ್‍ಯುಸಿಐ ಪ್ರತಿಭಟನೆ

June 25, 2019

ಮೈಸೂರು,ಜೂ.24(ಎಂಟಿವೈ)-ಬಿಹಾರದಲ್ಲಿ ಅನಾರೋಗ್ಯ ದಿಂದ ಸಂಭವಿಸುತ್ತಿರುವ ಮಕ್ಕಳ ಸರಣಿ ಸಾವು ತಡೆಗಟ್ಟು ವಂತೆ ಆಗ್ರಹಿಸಿ ಸೋಮವಾರ ಎಸ್‍ಯುಸಿಐ ಕಾರ್ಯಕರ್ತರು ಪ್ರತಿ ಭಟನೆ ನಡೆಸಿದರು.

ಬಿಹಾರದಲ್ಲಿನ ನಡೆಯುತ್ತಿರುವ ಮಕ್ಕಳ ಸಾವಿನ ಪ್ರಕರಣವನ್ನು ಖಂಡಿಸಿ ಎಸ್‍ಯುಸಿಐ ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದ  ಹಿನ್ನೆಲೆಯಲ್ಲಿ ಜಿಲ್ಲಾ ಘಟಕದ ಕಾರ್ಯಕರ್ತರು ಇಂದು ಬೆಳಿಗ್ಗೆ  ಮೈಸೂರಿನ ಚಿಕ್ಕ ಗಡಿಯಾರದ ಮುಂದೆ ಪ್ರತಿಭಟಿಸಿ, ಬಿಹಾರದ ಸರ್ಕಾರದ ಬೇಜವಾಬ್ದಾರಿ ನಿಲುವನ್ನು ಖಂಡಿಸಿದರು.

ಮುಜಾಫರ್ ಜಿಲ್ಲೆಯೊಂದರಲ್ಲೇ 150ಕ್ಕೂ ಹೆಚ್ಚು ಮಕ್ಕಳು ತೀವ್ರವಾದ ಮೆದುಳಿನ ಉರಿಯೂತ ಖಾಯಿಲೆ ಯಿಂದ ಸಾವನ್ನಪ್ಪಿದ್ದಾರೆ. ಇದುವರೆಗೆ 600ಕ್ಕೂ ಹೆಚ್ಚು ಪ್ರಕರಣಗಳು ದಾಖ ಲಾಗಿವೆ. ಅಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.  ಆಸ್ಪತ್ರೆಗಳಲ್ಲಿನ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳದಿರುವುದೇ ಇಂತಹ ದುರಂತಕ್ಕೆ ಕಾರಣ. ಗ್ರಾಮೀಣ ಭಾಗಗಳಲ್ಲಿ ಮೆದು ಳಿನ ಉರಿಯೂತದ ಸಮಸ್ಯೆಗೆ ಸೂಕ್ತ ಪ್ರಾಥಮಿಕ ಚಿಕಿತ್ಸೆ ನೀಡಿ ಜೀವ ಉಳಿಸು ವುದು ಸಾಧ್ಯವಿದೆಯಾದರೂ, ಅಂತಹ ಸೌಲಭ್ಯಗಳನ್ನು ಅಲ್ಲಿನ ಸರ್ಕಾರ ನೀಡಿಲ್ಲ. ಆರೋಗ್ಯ ವ್ಯವಸ್ಥೆ ಹದಗೆಡಲು ಕೇಂದ್ರ ಮತ್ತು ಬಿಹಾರ ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂದು ಪ್ರತಿಭಟ ನಾಕಾರರು ಆರೋಪಿಸಿದರು.

ಮಕ್ಕಳನ್ನು ಕಳೆದುಕೊಂಡ ಪೆÇೀಷ ಕರಿಗೆ ಕನಿಷ್ಠ ಹತ್ತು ಲಕ್ಷ ರೂ.ಪರಿಹಾರ ನೀಡಬೇಕು. ಖಾಯಿಲೆಯ ನಿಯಂತ್ರಣ ಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರಗಳು ತುರ್ತು ಕ್ರಮ ಕೈಗೊಳ್ಳಬೇಕು. ಇಂತಹ ವಿಪತ್ತು ಮರುಕಳಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಗಳಲ್ಲಿ ಕಾಯಿಲೆ ನಿಯಂತ್ರಣಕ್ಕೆ ಅಗತ್ಯ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಡಿ.ರವಿ, ಸದಸ್ಯರಾದ ಉಮಾದೇವಿ, ಚಂದ್ರ ಶೇಖರ್ ಮೇಟಿ, ಜಿ.ಎಸ್.ಸೀಮಾ, ಚಂದ್ರಕಲಾ, ಆಶೀಯ ಇತರರು ಪಾಲ್ಗೊಂಡಿದ್ದರು.

 

Translate »