ಮೈಸೂರು,ಜೂ.24(ಆರ್‍ಕೆಬಿ)- ಜೀವ ತೆಗೆಯುವ ಸಾಮಾಜಿಕ ಜಾಲ ತಾಣದ ಆಟಗಳನ್ನು ಬಿಟ್ಟು, ದೇಸೀ ಆಟ ಗಳನ್ನು ಆಡುವಂತೆ ಕರಪತ್ರಗಳನ್ನು ಹಂಚುವ ಮೂಲಕ ಮೈಸೂರಿನ ಸತ್ಯ ಮೇವ ಜಯತೆ ಸಂಘಟನೆ ಕಾರ್ಯ ಕರ್ತರು ಜನಜಾಗೃತಿಯಲ್ಲಿ ತೊಡಗಿದ್ದಾರೆ.
ಮೈಸೂರು ನಗರ ಸಾರಿಗೆ ಬಸ್ ನಿಲ್ದಾಣ ದಲ್ಲಿ ಪ್ರಯಾಣಿಕರು ಹಾಗೂ ಕಾಲೇಜು ಯುವಕ-ಯುವತಿಯರಿಗೆ ಕರಪತ್ರಗಳನ್ನು ನೀಡಿ ಸಾಮಾಜಿಕ ಜಾಲತಾಣದ ಆಟಗಳಿಗೆ ಶರಣಾಗಿ ಜೀವ ಕಳೆದುಕೊಳ್ಳಬೇಡಿ. ಅದರ ಬದಲಿಗೆ ದೇಸೀಯ ಆಟಗಳನ್ನು ಆಡುವ ಮೂಲಕ ದೇಸೀಯ ಆಟಗಳ ಉಳಿವಿಗೆ ಮನಸ್ಸು ಮಾಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಶ್ರೀನಿವಾಸ್, ಟಿಕ್ ಟಾಕ್ ನಿಷೇಧವಿದ್ದರೂ, ಅದು ಪ್ಲೇ ಸ್ಟೋರ್‍ನಲ್ಲೇಕಿದೆ? ಈ ಆಟದ ಗೀಳಿಗೆ ಮಕ್ಕಳು, ಯುವಕರ ಭವಿಷ್ಯ ಹಾಳಾಗು ತ್ತಿದೆ. ಸರ್ಕಾರ ತಕ್ಷಣವೇ ಜೀವ ತೆಗೆ ಯುವ ಈ ಆಟಗಳನ್ನು ಪ್ಲೇ ಸ್ಟೋರ್‍ನಿಂದ ಕಿತ್ತೊಗೆಯಬೇಕು ಎಂದು ಒತ್ತಾಯಿಸಿದರು.
ಇಂತಹ ಜೀವ ತೆಗೆಯುವ ಸಾಮಾ ಜಿಕ ಜಾಲತಾಣದಲ್ಲಿನ ಆಟಗಳಿಂದ ವಿದ್ಯಾರ್ಥಿಗಳು ಮಾನಸಿಕ ಹಾಗೂ ದೈಹಿಕ ಚಟುವಟಿಕೆಗಳಿಂದ ದೂರ ಉಳಿದು ಆರೋಗ್ಯ ಹಾಳು ಮಾಡಿಕೊಳ್ಳು ತ್ತಿದ್ದಾರೆ. ಇವುಗಳ ಬದಲಿಗೆ ನಮ್ಮ ದೇಸೀ ಆಟಗಳಾದ ಸಾಂಪ್ರದಾಯಿಕ ಶೈಲಿಯ ಗೋಲಿ, ಕಬಡ್ಡಿ, ಬುಗುರಿ, ಜೂಟಾಟ ಇನ್ನಿತರ ಆಟಗಳನ್ನು ಆಡುವುದರಿಂದ ಮಾನಸಿಕ ಶಕ್ತಿ ಹಿಗ್ಗುತ್ತದೆ. ದೈಹಿಕ ವ್ಯಾಯಾಮವೂ ಆಗುತ್ತದೆ. ಇದು ಯುವಕರ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಸಹಕಾರಿಯಾಗುತ್ತವೆ. ಇದರ ಬಗ್ಗೆ ಪೋಷಕರು, ಶಿಕ್ಷಕರು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಸಂದೇಶ್, ಸುಚೇಂದ್ರ , ವಿನಯಕುಮಾರ್, ಸುಜಯ್, ಚಂದ್ರು, ತೇಜಸ್, ಶಂಕರ್ ಇನ್ನಿತರರು ಉಪಸ್ಥಿತರಿದ್ದರು.