ಮಡಿಕೇರಿ ದಸರಾಕ್ಕೆ ಅನುದಾನ ನೀಡದಿದ್ದಲ್ಲಿ ಸ್ವತಂತ್ರ ನಿರ್ವಹಣೆ
ಮೈಸೂರು

ಮಡಿಕೇರಿ ದಸರಾಕ್ಕೆ ಅನುದಾನ ನೀಡದಿದ್ದಲ್ಲಿ ಸ್ವತಂತ್ರ ನಿರ್ವಹಣೆ

October 5, 2018

ದಶಮಂಟಪ ಸಮಿತಿ ಅಧ್ಯಕ್ಷ ರವಿಕುಮಾರ್ ಎಚ್ಚರಿಕೆ
ಮಡಿಕೇರಿ:  ಐತಿಹಾಸಿಕ ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆ ಯಾಗಿರುವ ದಶ ಮಂಟಪಗಳಿಗೆ ಸರ ಕಾರದಿಂದ ಅನುದಾನ ಒದಗಿಸುವಲ್ಲಿ ದಸರಾ ಸಮಿತಿ ವಿಫಲವಾದಲ್ಲಿ ದಶ ಮಂಟಪ ಸಮಿತಿ ಮುಂದಿನ ದಿನಗಳಲ್ಲಿ ದಸರಾ ಸಮಿತಿಯಿಂದ ಹೊರಬಂದು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲಿದೆ ಎಂದು ದಶಮಂಟಪ ಸಮಿತಿ ಅಧ್ಯಕ್ಷ ರವಿಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವಿಕುಮಾರ್, ಮುಂಗಾರು ಮಳೆಯ ಆರ್ಭಟದಿಂದ ಪ್ರಾಕೃತಿಕ ವಿಕೋಪ ಸಂಭವಿಸಿದ್ದರೂ ಮುಂಬರುವ ದಿನಗಳಲ್ಲಿ ಹೆಚ್ಚಿನ ಅನಾಹುತಗಳು ಉಂಟಾಗದಂತೆ ಮತ್ತು ಈಗ ಎದು ರಾಗಿರುವ ಆರ್ಥಿಕ ಸಂಕಷ್ಟಗಳಿಗೆ ಪರಿಹಾರವಾಗಿ ಈ ಬಾರಿಯೂ ಮಡಿ ಕೇರಿ ದಸರಾ ಉತ್ಸವದಲ್ಲಿ ದಶಮಂಟಪ ಗಳ ಶೋಭಾಯಾತ್ರೆ ನಡೆಯಲಿದೆ ಎಂದು ತಿಳಿಸಿದರು.

ಮೈಸೂರು ದಸರಾಕ್ಕೆ 25 ಕೋಟಿ ರೂ.ಗಳ ಅನುದಾನ ನೀಡುವ ರಾಜ್ಯ ಸರಕಾರ, ಮಡಿಕೇರಿ ದಸರಾ ಬಗ್ಗೆ ನಿರ್ಲಕ್ಷ್ಯ ತಾಳಿರುವುದು ಸರಿಯಲ್ಲ. ಅಗತ್ಯ ಅನು ದಾನ ಕೋರುವಲ್ಲಿ ದಸರಾ ಸಮಿತಿ ಕೂಡ ವಿಫಲವಾಗಿದೆ ಎಂದು ಆರೋಪಿಸಿದರು. ಪ್ರಸಕ್ತ ಸಾಲಿನ ದಸರಾ ಉತ್ಸವ ಸರಳ ರೀತಿಯಲ್ಲಿ ನಡೆಯಲಿದ್ದು, ವಿಜಯ ದಶ ಮಿಯಂದು ಯಾವುದೇ ಪೈಪೋಟಿಗಳಿಗೆ ಅವಕಾಶವಿಲ್ಲದಂತೆ ಮಂಟಪಗಳ ಮೆರವಣಿಗೆ ಸಾಗಲಿದೆ.

ಸರಕಾರದ ನೆರವಿಗೆ ಎದುರು ನೋಡು ತ್ತಿರುವುದಾಗಿ ತಿಳಿಸಿದ ರವಿಕುಮಾರ್, ಸಾರ್ವಜನಿಕರು ಕೂಡ ಸಮಿತಿಯ ಸದ ಸ್ಯರು ದೇಣಿಗೆ ಸಂಗ್ರಹಿಸುವಾಗ ಪ್ರೀತಿ ಯಿಂದ ಆರ್ಥಿಕ ಸಹಕಾರ ನೀಡ ಬೇಕೆಂದು ಮನವಿ ಮಾಡಿದರು.

ಮಡಿಕೇರಿ ದಸರಾದ ಸಾಂಪ್ರದಾಯಿಕ ಆಚರಣೆಯಾದ ನಾಲ್ಕು ಶಕ್ತಿದೇವತೆಗಳ ಕರಗ ಪೂಜೆಗೆ ಇನ್ನು ಕೇವಲ 4-5 ದಿನ ಗಳು ಮಾತ್ರ ಬಾಕಿ ಉಳಿದಿದ್ದರೂ, ಈ ಬಾರಿ ದಸರಾ ಸಮಿತಿಯಾಗಲಿ, ಸರ ಕಾರವಾಗಲಿ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಅನುದಾನ ಒದಗಿಸುವಂತೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ಪ್ರಯೋ ಜನವಾಗಿಲ್ಲ. ಕರಗಗಳ ನಗರ ಸಂಚಾರಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ರಸ್ತೆ ಗಳ ಗುಂಡಿ ಮುಚ್ಚುವ ಕಾರ್ಯವನ್ನು ಕೂಡ ನಗರಸಭೆ ಮಾಡಿಲ್ಲ. ಹದಗೆಟ್ಟ ರಸ್ತೆ ಮತ್ತು ಅಶುಚಿತ್ವದ ವಾತಾವರಣದಲ್ಲಿ ಕರಗಗಳ ಸಂಚಾರವಾಗಬೇಕೆ ಎಂದು ರವಿಕುಮಾರ್ ಪ್ರಶ್ನಿಸಿದರು.

ಸಮಿತಿಯ ಮಾಜಿ ಅಧ್ಯಕ್ಷ ಆರ್.ಬಿ. ರವಿ ಮಾತನಾಡಿ, ಮಡಿಕೇರಿ ದಸರಾಕ್ಕೆ ಸುಮಾರು 200 ವರ್ಷಗಳ ಇತಿಹಾಸ ವಿದ್ದು, ಇದನ್ನು ಸ್ಥಗಿತಗೊಳಿಸುವುದು ಅಸಾಧ್ಯ ಎಂದರು. ಮಹಾಮಳೆಯಿಂದ ಸಂತ್ರಸ್ತರಾದವರಿಗೆ ಸರಕಾರ ಹಾಗೂ ದಾನಿ ಗಳು ಪರಿಹಾರೋಪಾಯಗಳ ಮೂಲಕ ಸಾಂತ್ವನ ಹೇಳುತ್ತಿದ್ದಾರೆ. ಆದರೆ ಪರೋ ಕ್ಷವಾಗಿ ಸಂತ್ರಸ್ತರಾಗಿರುವ ವರ್ತಕರು ಮತ್ತು ಚಾಲಕರುಗಳು ಸಂಕಷ್ಟಕ್ಕೆ ಸಿಲು ಕಿದ್ದು, ಮತ್ತೆ ಆರ್ಥಿಕ ಚಟುವಟಿಕೆ ಚುರು ಕಾಗಬೇಕಾದರೆ ದಸರಾ ಉತ್ಸವದಂತಹ ಆಚರಣೆ ನಡೆಯಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ದಶಮಂಟಪ ಸಮಿತಿ ಪದಾಧಿಕಾರಿಗಳಾದ ಕೆ.ಆರ್. ರಕ್ಷಿತ್, ಅರೆಯಂಡ ಪ್ರಸನ್ನ, ಸತೀಶ್ ಧರ್ಮಪ್ಪ ಹಾಗೂ ಟಿ.ಎಲ್.ವಿಶ್ವನಾಥ್ ಉಪಸ್ಥಿತರಿದ್ದರು.

Translate »