ಸಿಎಎ, ಎನ್‍ಆರ್‍ಸಿಯಿಂದ ಭಾರತದ ಮುಸ್ಲಿಮರು, ದಲಿತರಿಗೆ ಏನೂ ತೊಂದರೆ ಇಲ್ಲ
ಮೈಸೂರು

ಸಿಎಎ, ಎನ್‍ಆರ್‍ಸಿಯಿಂದ ಭಾರತದ ಮುಸ್ಲಿಮರು, ದಲಿತರಿಗೆ ಏನೂ ತೊಂದರೆ ಇಲ್ಲ

December 28, 2019

ಮೈಸೂರು, ಡಿ.27(ಆರ್‍ಕೆಬಿ)- ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಿಂದ ಭಾರತದ ಮುಸ್ಲಿಮರಿಗಾಗಲೀ, ದಲಿತರಿಗಾಗಲೀ ಯಾವುದೇ ತೊಂದರೆ ಇಲ್ಲ. ಈ ಕಾಯ್ದೆ ಕೇವಲ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಆಫ್ಘಾನಿಸ್ಥಾನದಿಂದ ಭಾರತಕ್ಕೆ ಬಂದಿರುವ ನುಸುಳುಕೋರರಿಗೆ ಮಾತ್ರ ಅನ್ವಯ ಎಂಬುದನ್ನು ಸಿಎಎ, ಎನ್‍ಆರ್‍ಸಿ ವಿರೋಧಿಸುತ್ತಿರುವವರು ಅರ್ಥಮಾಡಿಕೊಳ್ಳಬೇಕು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ವಿ.ಗಿರಿಧರ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೆರಿಕಾ, ಲಂಡನ್, ಆಸ್ಟ್ರೇಲಿಯಾ ಮುಂತಾದ ರಾಷ್ಟ್ರಗಳಲ್ಲಿ ಮುಸ್ಲಿಮರು ಬಾಳುತ್ತಿದ್ದಾರೆ. ಅಲ್ಲಿ ಪೌರತ್ವವನ್ನು ಪಡೆದಿದ್ದಾರೆ. ಅವರನ್ನು ಯಾರೂ ವಾಪಸ್ ಕಳಿಸಿಲ್ಲ. ಅದೇ ರೀತಿಯಲ್ಲಿ ಭಾರತದಲ್ಲಿಯೂ ಮುಸ್ಲಿಮರು ಪೌರತ್ವ ಪಡೆದಿ ದ್ದಾರೆ. ಆದರೆ ಈ ಜನರ ನಡುವೆ ತಪ್ಪು ಸಂದೇಶ ಹರಡಿ ದೇಶದಲ್ಲಿ ಗೊಂದಲ, ಗಲಭೆಗೆ ಕಾರಣರಾದವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ನೆರೆ ರಾಷ್ಟ್ರಗಳಲ್ಲಿ ತುಳಿತಕ್ಕೆ ಒಳಗಾಗಿರುವ ಹಿಂದೂ, ಕ್ರೈಸ್ತ, ಪಾರ್ಸಿ, ಸಿಖ್, ಬೌದ್ಧರಿಗೆ ಆಶ್ರಯ ನೀಡಿ, ಅವರನ್ನು ಮರಳಿ ದೇಶಕ್ಕೆ ಕರೆತರಲು ಅಗತ್ಯವಾದ ಕಾನೂನು ಜಾರಿ ಹಿಂದೆ ಯಾವುದೇ ಷಡ್ಯಂತರವಿಲ್ಲ. ಅಕ್ರಮವಾಗಿ ದೇಶದೊಳಗ ನುಸುಳಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಿ, ದೇಶದ ಕಾನೂನು ಸುವ್ಯವಸ್ಥೆಗೆ ಭಂಗ ತರುತ್ತಿರುವ ಸಮಾಜಘಾತುಕ ಶಕ್ತಿಗಳನ್ನು ನಿಗ್ರಹಿಸಲು ಈ ಕಾನೂನು ಸಹಕಾರಿಯಾಗಲಿದೆ. ಈ ವಿಚಾರವನ್ನು ಭಾರತದ ಮುಸ್ಲಿಮರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

Translate »