ಔಷಧಿ ಸಸ್ಯಗಳ ಸಂಶೋಧನೆ ಫಲ ಪ್ರಯೋಜನಕ್ಕೆ ಬಂದಿಲ್ಲ
ಮೈಸೂರು

ಔಷಧಿ ಸಸ್ಯಗಳ ಸಂಶೋಧನೆ ಫಲ ಪ್ರಯೋಜನಕ್ಕೆ ಬಂದಿಲ್ಲ

December 28, 2019

ಮೈಸೂರು,ಡಿ.27(ಎಂಕೆ)- ಔಷಧೀಯ ಸಸ್ಯಗಳ ಕುರಿತು 20 ವರ್ಷಗಳಿಂದ ಸಂಶೋ ಧನೆ ನಡೆಯುತ್ತಿದ್ದು, ಹಲವಾರು ಸಂಶೋ ಧನಾ ಪ್ರಬಂಧಗಳು ಹೊರಬಂದಿವೆ. ಆದರೆ ಇವುಗಳ ಬಗ್ಗೆ ಸಾಮಾನ್ಯ ಜನರಿಗೆ ಅರಿವು ಮೂಡಿಸುವಲ್ಲಿ ಇಲಾಖೆಗಳು ಹಿಂದೆ ಬಿದ್ದಿವೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್ ತಿಳಿಸಿದರು.

ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಫಾರ್ಮಸಿ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಸಮಾರೋಪ ಸಮಾರಂಭ ದಲ್ಲಿ ಮಾತನಾಡಿದ ಅವರು, ಔಷಧಿ ಸಸ್ಯ ಗಳ ಕುರಿತು ಆಯುರ್ವೇದದಲ್ಲಿ ಮಾತ್ರ ವಲ್ಲದೆ ಸಸ್ಯಶಾಸ್ತ್ರ, ಜೀವಶಾಸ್ತ್ರ, ರಾಸಾಯನ ಶಾಸ್ತ್ರ ವಿಷಯಗಳಲ್ಲಿಯೂ ಸಂಶೋಧನೆ ನಡೆಸಿದಾಗ ಔಷಧಿಗಳ ಸಸ್ಯಗಳ ಅಸ್ತಿತ್ವ ಉಳಿಯುತ್ತದೆ ಎಂದು ಹೇಳಿದರು.

ಔಷಧಿ ಸಸ್ಯಗಳ ಉಪಯುಕ್ತತೆ ಕುರಿತು ಜನರಲ್ಲಿ ಅರಿವು ಮೂಡಿಸಲು ಇಲಾಖೆ ಗಳು ಶ್ರಮಿಸಬೇಕು. ಜತೆಗೆ ಗ್ರಾಮೀಣ ಪ್ರದೇ ಶದ ಜನರನ್ನೇ ಅರಿವು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಮೈಸೂರು ವಿವಿ ವಿಶ್ರಾಂತ ಕುಲಪತಿ ಡಾ.ಎಸ್. ಎನ್.ಹೆಗ್ಡೆ ಮಾತನಾಡಿ, ಸಸ್ಯ ಸಂಕುಲವೆಂಬುದು ಬಹುದೊಡ್ಡ ಸಂಪತ್ತು. ವೈವಿಧ್ಯತೆಯಿಂದ ಕೂಡಿರುವ ಪಶ್ಚಿಮ ಘಟ್ಟಗಳಲ್ಲಿ ವಿವಿಧ ಬಗೆಯ ಔಷಧಿ ಗುಣವುಳ್ಳ ಸಸ್ಯಗಳು ದೊರಕುತ್ತವೆ. ಔಷಧಿ ಸಸ್ಯಗಳ ಬಗೆಗಿನ ಸಂಶೋಧನೆಗೆ ಬೇರೆ ದೇಶಗಳ ನೆರವು ಅಗತ್ಯವಿಲ್ಲ. ನಮ್ಮಲ್ಲಿಯೇ ಹಲವಾರು ಉತ್ತಮ ಸಂಶೋಧಕರಿದ್ದಾರೆ. ಆದರೆ ಅವರೆ ಲ್ಲರಿಗೂ ಅವಕಾಶ ನೀಡುವ ಮಾರ್ಗ ವನ್ನು ಕಂಡುಕೊಳ್ಳಬೇಕಾಗಿದೆ ಎಂದರು.

ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಇಂದು ಒಂದು ಗಿಡದಿಂದ ಸಾವಿರ ಗಿಡ ಗಳನ್ನು ಉತ್ಪತ್ತಿಮಾಡಬಹುದು. ಆದರೆ ಸಸ್ಯ ಸಂಪತ್ತನ್ನು ಹೆಚ್ಚಿಸುವ ಬದಲು ಎಲ್ಲ ವನ್ನು ಕಡಿದು ಹಾಳುಮಾಡಲಾಗುತ್ತಿದೆ. ರೆಸಾರ್ಟ್‍ಗಳ ನಿರ್ಮಾಣ ಮತ್ತು ಗಣಿಗಾ ರಿಕೆಗಾಗಿ ಅರಣ್ಯವನ್ನು ನಾಶಮಾಡಲಾ ಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಉಂಟಾದ ಭೂ ಕುಸಿತಕ್ಕೆ ರೆಸಾರ್ಟ್‍ಗಳ ನಿರ್ಮಾ ಣವೇ ಮುಖ್ಯ ಕಾರಣ ಎಂದು ಹೇಳಿದರು.

ಇದೇ ವೇಳೆ ವಿದ್ಯಾರ್ಥಿಗಳಿಗೆ ಔಷಧಿ ಸಸ್ಯಗಳನ್ನು ಕಾಪಾಡುವಂತೆ ಪ್ರತಿಜ್ಞಾವಿಧಿ ಬೋಧಿಸಿದ ಮಾಜಿ ಸಚಿವ ಸಿ.ಹೆಚ್. ವಿಜಯ್‍ಶಂಕರ್ ಮಾತನಾಡಿ, ಅರಣ್ಯ ಸಚಿವನಾಗಿದ್ದ ವೇಳೆ ಸಸ್ಯಗಳ ಕುರಿತು ಅಂತರರಾಷ್ಟ್ರೀಯ ಮಟ್ಟದ ಕಾರ್ಯಾ ಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಸಸ್ಯ ಶಾಸ್ತ್ರಜ್ಞರಿಂದ ಸಲಹೆಗಳನ್ನು ಪಡೆದು ರಾಶಿವನ, ನಕ್ಷತ್ರವನ, ದೇವವನ ಎಂಬಿತ್ಯಾದಿ ಪರಿಕಲ್ಪನೆಯಲ್ಲಿ ಉದ್ಯಾನವನ ಗಳನ್ನು ಅಭಿವೃದ್ಧಿಪಡಿಸಲಾಗಿತ್ತು ಎಂದು ಸ್ಮರಿಸಿದರು.

ಇಂದು ಜನರಿಗೆ ಸಸ್ಯಗಳ ಕುರಿತು ಅರಿ ವಿದ್ದರೂ ಅವುಗಳನ್ನು ಹೇಗೆ ಸಂರಕ್ಷಣೆ ಮಾಡಬೇಕು ಎಂಬುದರ ತಿಳುವಳಿಕೆ ಕಡಿಮೆಯಿದೆ. ಆದ್ದರಿಂದ ಶಾಲಾ-ಕಾಲೇ ಜುಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯಾಗಾರಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಆಯು ರ್ವೇದ ಸಂಶೋಧನಾ ಕೇಂದ್ರದ ಸಹಾ ಯಕ ನಿರ್ದೇಶಕ ಡಾ.ಎಲ್.ಎನ್.ಶೆಣೈ, ಶಾರದಾ ವಿಲಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಎಸ್.ಪಾರ್ಥಸಾರಥಿ, ಕಾರ್ಯ ದರ್ಶಿ ಹೆಚ್.ಕೆ.ಶ್ರೀನಾಥ್, ಪ್ರಾಂಶುಪಾಲ ಡಾ. ಹನುಮಂತಾಚಾರ್ ಜೋಶಿ ಉಪಸ್ಥಿತರಿದ್ದರು.

Translate »