ನಕ್ಸಲ್ ಚಟುವಟಿಕೆಗೆ ಕೆಲ ಪರಿಸರವಾದಿಗಳ ಪರೋಕ್ಷ ಬೆಂಬಲ
ಕೊಡಗು

ನಕ್ಸಲ್ ಚಟುವಟಿಕೆಗೆ ಕೆಲ ಪರಿಸರವಾದಿಗಳ ಪರೋಕ್ಷ ಬೆಂಬಲ

February 26, 2019

ಶಾಸಕ ಕೆ.ಜಿ. ಬೋಪಯ್ಯ ಗಂಭೀರ ಆರೋಪ
ಗೋಣಿಕೊಪ್ಪಲು: ಅಭಿವೃದ್ಧಿ ಕಾರ್ಯಗಳಿಗೆ ವಿರೋಧ ವ್ಯಕ್ತಪಡಿಸುವ ಕೆಲವು ಪರಿಸರವಾದಿಗಳು ಪರೋಕ್ಷವಾಗಿ ನಕ್ಸಲ್ ಚಟುವಟಿಕೆಯನ್ನು ಪ್ರೋತ್ಸಾಹಿಸಿ ದಂತಾಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಗಂಭೀರ ಆರೋಪ ಮಾಡಿದರು.

ಸೇವ್ ಕೊಡಗು ಸಂಘಟನೆ ವತಿಯಿಂದ ನಕಲಿ ಪರಿಸರವಾದಿಗಳ ವಿರುದ್ದ ಪಟ್ಟಣ ದಲ್ಲಿ ಆಯೋಜಿಸಿದ್ದ ಪ್ರತಿಭಟನಾ ರ್ಯಾಲಿ ಯಲ್ಲಿ ಮಾತನಾಡಿದ ಅವರು, ಪರಿಸರ ವಾದಿಗಳಿಂದ ಜಿಲ್ಲೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ವಾಹನ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಇದರಿಂದ ರಸ್ತೆ ಅಭಿವೃಧ್ಧಿ ಅವಶ್ಯಕವಾಗಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸುವ ಮೂಲಕ ಅಭಿವೃದ್ಧಿ ಕಾರ್ಯಕ್ಕೂ ವಿರೋಧಿಸುವುದರಲ್ಲಿ ತೊಡ ಗಿಸಿ ಕೊಂಡಿದ್ದಾರೆ ಎಂದು ದೂರಿದರು.

ಕಳೆದೆರಡು ವರ್ಷಗಳ ಹಿಂದೆ ಆನೆ ಚೌಕೂರು ಅರಣ್ಯ ಬೆಂಕಿಗಾಹುತಿಯಾಗಲು ಪರಿಸರವಾದಿಗಳ ಕೈವಾಡವಿದೆ. ಈ ಬಗ್ಗೆ ವಿಧಾನಸಭೆಯಲ್ಲೂ ಧ್ವನಿ ಎತ್ತಿ ತನಿಖೆಗೆ ಆಗ್ರಹಿಸಿದ್ದೆ. ನ್ಯಾಯಯುತ ತನಿಖೆಯಾಗ ಲಿಲ್ಲ ಎಂದರು. ಸುಪ್ರೀಂ ಕೋರ್ಟ್‍ನಲ್ಲಿ ವಾದಿ, ಪ್ರತಿವಾದಿಗಳು ಎರಡು ಕಡೆಗಳಲ್ಲಿ ಪರಿಸರವಾದಿಗಳು ವಾದ ಮಂಡಿಸುವುದ ರಿಂದ ನ್ಯಾಯ ದೊರಕುತ್ತಿಲ್ಲ ಎಂದರು.

ಹಿರಿಯ ರಾಜಕೀಯ ಮುಖಂಡ ಎ.ಕೆ. ಸುಬ್ಬಯ್ಯ ಮಾತನಾಡಿ, ಪಕ್ಷಗಳ ಹೈಕಮಾಂಡ್ ಮಟ್ಟದಲ್ಲಿ ವಿರೋಧ ವ್ಯಕ್ತವಾದರೂ ಜಿಲ್ಲಾ ಮಟ್ಟದಲ್ಲಿ ಒಂದಾ ಗಿರುವುದು ಮೆಚ್ಚಬೇಕಾದ ವಿಚಾರವಾ ಗಿದೆ. ಕೊಡಗು ರಕ್ಷಣೆಗೆ ನಕಲಿ ಪರಿಸರವಾದಿ ಗಳ ವಿರುದ್ಧ ಜಾಗೃತಿ ಮೂಡಿಸಲು ಮೂರು ಪಕ್ಷಗಳು ಮುಂದಾಗಿರುವುದು ಸ್ವಾಗತಾರ್ಹ. ಪಕ್ಷಗಳು ಒಂದಕ್ಕೊಂದು ಎದುರಾಳಿಗಳು ಮಾತ್ರ. ಶತ್ರುಗಳಾಗಲು ಸಾಧ್ಯವಿಲ್ಲ. ರಾಜಕೀಯದಿಂದ ಹೊರ ಬಂದು ಪರಿಸರವಾದಿಗಳ ವಿರುದ್ಧ ನಿರಂ ತರ ಹೋರಾಟ ಮಾಡುವ ಮೂಲಕ ಜನಜಾಗೃತಿ ಮೂಡಿಸಬೇಕಿದೆ ಎಂದರು.

ನಿವೃತ್ತ ಸೇನಾಧಿಕಾರಿ ಕರ್ನಲ್ ಮುತ್ತಣ್ಣ ಪರಿಸರವಾದಿ ಹೆಸರಿನಲ್ಲಿ ಕೊಡಗಿನ ಅಭಿವೃದ್ಧಿಗೆ ವಿರುದ್ಧವಾಗಿ ತೊಡಗಿಸಿ ಕೊಂಡಿದ್ದಾರೆ ಎಂದು ಆರೋಪಿಸಿ, ಸೇನಾಧಿಕಾರಿಗಳು ಪರಿಸರ ತಜ್ಞರಾಗಲು ಸಾಧ್ಯವಿಲ್ಲ. ಇವರ ನಡೆಯಿಂದ ಸೇನೆಗೂ ಅಗೌರವ, ಸೇನಾಧಿಕಾರಿ ಸ್ಥಾನ ಕೂಡ ದುರುಪಯೋಗವಾಗಿದೆ. ಇವರು ಮಾಜಿ ಸೈನಿಕರ ಹಾಗೂ ಕೃಷಿಕರ ಪರವಾಗಿ ಧ್ವನಿ ಎತ್ತಬೇಕಿದೆ ಎಂದರು. ಯುದ್ಧದಲ್ಲಿ ಪರಿಸರ ನಾಶವಾಗಲಿದೆ ಎಂದು ಯುದ್ಧಕ್ಕೆ ಹೋಗದೇ ಇದ್ದರೆ, ದೇಶ ರಕ್ಷಣೆ ಅಸಾಧ್ಯ. ಅಭಿವೃದ್ಧಿಯ ದೃಷ್ಠಿಯಲ್ಲಿ ಪರಿಸರ ನೆಪ ಹೇಳುವುದನ್ನು ನಿಲ್ಲಿಸಬೇಕು ಎಂದರು.

ಕೊಡಗಿನ ಕೃಷಿಗೆ ಪೂರಕವಾದ ಮೂಲಭೂತ ಸೌಲಭ್ಯ ಅವಶ್ಯಕವಾಗಿದೆ. ಕೃಷಿಗೆ ರಸ್ತೆ, ವಿದ್ಯುತ್, ಆಸ್ಪತ್ರೆ, ಶಾಲೆ, ಕೃಷಿ ಪೂರಕ ಕೈಗಾರಿಕೆಗಳು ನಿರ್ಮಾಣ ವಾಗಬೇಕಿದೆ. ಪರಿಸರ ನಾಶ ಎಂದು ಇದಕ್ಕೆಲ್ಲಾ ವಿರೋಧ ವ್ಯಕ್ತಪಡಿಸಿದಾಗ ಅಭಿವೃಧ್ಧಿ ಅಸಾಧ್ಯ. ಇದರಿಂದಾಗಿ ಜನರು ಒಂದಾಗುವ ಮೂಲಕ ನಕಲಿ ಪರಿಸರವಾದಿಗಳನ್ನು ಶಮನ ಮಾಡುವ ಪ್ರಯತ್ನ ಸಾಗಬೇಕು ಎಂದರು.

ಸೇವ್ ಕೊಡಗು ಸಂಘಟನೆ ಸಂಚಾಲಕ ಮಧು ಬೋಪಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಕೊಡಗಿನ ಹಿತ ಕಾಪಾಡಲು ಎಲ್ಲಾ ಪಕ್ಷದ ಪ್ರಮುಖರನ್ನು ಸೇರಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಬಾಣೆ ಸಮಸ್ಯೆ ಪರಿಹಾರದ ಬಗ್ಗೆ ಮುಖ್ಯಮಂತ್ರಿ ಅವರಿಗೆ ನಿಯೋಗದ ಮೂಲಕ ಮನವಿ ಮಾಡಿಕೊಳ್ಳಲಾಗುವುದು ಎಂದರು.

ಜೆಡಿಎಸ್ ಪ್ರಮುಖ ಪಾಣತ್ತಲೆ ವಿಶ್ವ ನಾಥ್ ಮಾತನಾಡಿ, ಕಾನೂನು ಹೋರಾಟದ ಮೂಲಕ ಕಸ್ತೂರಿ ರಂಗನ್ ವರದಿ ಜಾರಿಯಾಗದಂತೆ ತಡೆ ಮಾಡಲು ಮುಂದಾಗಬೇಕು. ನಾವು ಭೂಮಿ ಕಳೆದು ಕೊಳ್ಳುವ ಮುನ್ನ ಜಾಗೃತರಾಗಬೇಕು ಎಂದರು. ಕಾಂಗ್ರೆಸ್ ಮುಖಂಡ ತೀತೀರ ಧರ್ಮಜ ಮಾತನಾಡಿ, ಇಂತಹ ಹೋರಾಟ ದಲ್ಲಿ ಸಾರ್ವಜನಿಕರು ಸ್ವಯಂಪ್ರೇರಿತ ವಾಗಿ ಪಾಲ್ಗೊಳ್ಳಬೇಕು. ಆಗ ಮಾತ್ರ ನ್ಯಾಯ ದಕ್ಕಿಸಿಕೊಳ್ಳಲು ಸಾಧ್ಯವಿದೆ ಎಂದರು.

ಹರಿಶ್ಚಂದ್ರಪುರ ಅರ್‍ಎಂಸಿ ಆವರಣ ದಿಂದ ಮೆರವಣಿಗೆ ಮೂಲಕ ಆಗಮಿಸಿದ ಕಾರ್ಯಕರ್ತರು ಬಸ್ ನಿಲ್ದಾಣದಲ್ಲಿ ಜಮಾ ಯಿಸಿ ಪ್ರತಿಭಟನಾ ಸಭೆ ನಡೆಸಿ, ಪರಿಸರವಾದಿ ಗಳ ವಿರುದ್ದ ಕಿಡಿಕಾರಿದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ಪ್ರಮುಖರುಗಳು ಪಾಲ್ಗೊಂಡು ಕೊಡಗು ರಕ್ಷಣೆಗೆ ಪರಿಸರವಾದಿ ಗಳ ವಿರುದ್ದ ಜಾಗೃತರಾಗುವುದೇ ಉತ್ತಮ ಮಾರ್ಗ ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಬಿಜೆಪಿ ವಿರಾಜಪೇಟೆ ಮಂಡಲ ಅಧ್ಯಕ್ಷ ಅರುಣ್ ಭೀಮಯ್ಯ, ಹಿರಿಯ ಮುಖಂಡ ಬೊಟ್ಟಂಗಡ ರಾಜು, ಮನು ಮುತ್ತಪ್ಪ, ಸಿ.ಕೆ ಬೋಪಣ್ಣ, ಕಾಂಗ್ರೆಸ್ ಮುಖಂಡ ಟಾಟು ಮೊಣ್ಣಪ್ಪ, ಬಾನಂಡ ಪ್ರತ್ಯು, ಜಿ.ಪಂ. ಅಧ್ಯಕ್ಷ ಹರೀಶ್ ಹಾಗೂ ಕೆ.ಜೆ. ಭರತ್ ಉಪಸ್ಥಿತರಿದ್ದರು.

Translate »