ದಸರೆಗೆ ಹೆಚ್ಚುವರಿಯಾಗಿ 190 ಸಿಸಿ ಕ್ಯಾಮರಾ ಅಳವಡಿಕೆ
ಮೈಸೂರು

ದಸರೆಗೆ ಹೆಚ್ಚುವರಿಯಾಗಿ 190 ಸಿಸಿ ಕ್ಯಾಮರಾ ಅಳವಡಿಕೆ

September 7, 2019

ಮೈಸೂರು, ಸೆ. 6(ಆರ್‍ಕೆ)- ಈ ಬಾರಿ ದಸರಾ ಮಹೋತ್ಸವಕ್ಕೆ ಹೆಚ್ಚುವರಿಯಾಗಿ 190 ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಕಟ್ಟೆಚ್ಚರ ವಹಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.

ಮೈಸೂರಿನ ತಮ್ಮ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡು ತ್ತಿದ್ದ ಅವರು, 2019ರ ದಸರಾ ವಿಜಯದಶಮಿ ಮೆರವಣಿಗೆಯಂದು 15 ಲಕ್ಷ ಜನರು ಬರುವ ನಿರೀಕ್ಷೆ ಇದೆ. ಮುಂಜಾಗ್ರತಾ ಕ್ರಮವಾಗಿ ಮೈಸೂರು ನಗರದಾದ್ಯಂತ ವ್ಯಾಪಕ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು ಎಂದು ತಿಳಿಸಿದರು.

ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂ ಸವಾರಿ ಮಾರ್ಗದ ರಸ್ತೆ, ಜಂಕ್ಷನ್‍ಗಳಲ್ಲಿ ಪ್ರಸ್ತುತ 64 ಸಿಸಿ ಕ್ಯಾಮರಾಗಳಿದ್ದು, ಆ ಪೈಕಿ 59 ಕಾರ್ಯ ನಿರ್ವ ಹಿಸುತ್ತಿವೆ. ಅವುಗಳ ಜತೆಗೆ ದಸರೆಗಾಗಿ 10 ದಿನಗಳ ಅವಧಿಗೆ ತಾತ್ಕಾಲಿಕವಾಗಿ 190 ಹೆಚ್ಚುವರಿ ಕ್ಯಾಮರಾಗಳನ್ನು ಅಳವಡಿಸಿ ಕಂಟ್ರೋಲ್ ರೂಂನಲ್ಲಿ ಚಲನ-ವಲನಗಳ ಮೇಲೆ ನಿಗಾ ಇರಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.

ಅರಮನೆ ಒಳ ಹಾಗೂ ಹೊರ ಆವರಣ, ಜಂಬೂ ಸವಾರಿ ಮಾರ್ಗ, ಪಂಜಿನ ಕವಾಯತು ಮೈದಾನ, ಚಾಮುಂಡಿಬೆಟ್ಟ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡುವ ಜೊತೆಗೆ ದಸರಾ ಕಾರ್ಯಕ್ರಮಗಳು ನಡೆಯುವ ಸ್ಥಳಗಳಿಗೆ ಹೆಚ್ಚುವರಿ ಸಿಬ್ಬಂದಿ ಒದಗಿಸಿ, ಸಿಸಿ ಕ್ಯಾಮರಾಗಳನ್ನು ಅಳವಡಿಸ ಲಾಗುವುದು ಎಂದು ತಿಳಿಸಿದರು. ಮಾಲ್‍ಗಳು, ಸಿನೆಮಾ ಥಿಯೇಟರ್‍ಗಳು, ಲಾಡ್ಜ್‍ಗಳು, ವಾಣಿಜ್ಯ ಕೇಂದ್ರಗಳು ಸೇರಿದಂತೆ ದಿನಕ್ಕೆ 500 ಮಂದಿ ಬಂದು-ಹೋಗುವ ಎಲ್ಲಾ ಖಾಸಗಿ ಸೆಂಟರ್‍ಗಳಿಗೆ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಬೇಕೆಂದು ಸೂಚಿಸಿದ ಹಿನ್ನೆಲೆಯಲ್ಲಿ ಮೈಸೂರು ನಗರದಾದ್ಯಂತ 14,500 ಕ್ಯಾಮರಾಗಳನ್ನು ಅಳವಡಿಸಿದ್ದು, ಖಾಸಗಿ ವ್ಯಕ್ತಿಗಳಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ಅವರು ತಿಳಿಸಿದರು.

ಈಗಾಗಲೇ ದಸರಾಗೆ ಬಂದೋಬಸ್ತ್ ಯೋಜನೆ ಸಿದ್ಧಗೊಂಡಿದ್ದು, ಹೊರ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಕರೆಸಿಕೊಳ್ಳುವ ಬಗ್ಗೆ ಶೀಘ್ರ ಪ್ರಸ್ತಾವನೆ ಸಲ್ಲಿಸಿ, ಬರುವ ಸಿಬ್ಬಂದಿಗಳಿಗೆ ಮೈಸೂರಲ್ಲಿ ವಾಸ್ತವ್ಯ ಹಾಗೂ ಊಟ-ತಿಂಡಿ ವ್ಯವಸ್ಥೆ ಮಾಡಲು ತಯಾರಿ ನಡೆಸಲಾಗಿದೆ ಎಂದು ಕೆ.ಟಿ. ಬಾಲಕೃಷ್ಣ ತಿಳಿಸಿದರು.

14 ಐಎಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು: ರಾಜ್ಯ ಸರ್ಕಾರ 14 ಜನ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ನೀಡಿದೆ. ಶುಕ್ರವಾರ ಬೆಳಿಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿ ಹೊರಹೋಗಿದ್ದರು. ವರ್ಗಾ ವಣೆ ಎನ್ನುವುದಕ್ಕಿಂತ ಸ್ಥಳ ನಿಯೋಜನೆಗೆ ಕಾಯುತ್ತಿದ್ದವರಿಗೆ ಸ್ಥಾನ ಕಲ್ಪಿಸಿಕೊಡಲಾಗಿದೆ.

ಡಾ.ರಾಜಕುಮಾರ್ ಕತ್ರಿ-ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಿಕ್ಷಣ ಇಲಾಖೆ, ಅಮ್ಲಾನ್ ಆದಿತ್ಯ ಬಿಸ್ವಾಸ್-ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಆದಿತ್ಯ ಬಿಸ್ವಾಸ್‍ಗೆ ಹೆಚ್ಚುವರಿಯಾಗಿ ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾದೀನ ಆಯುಕ್ತರ ಹೊಣೆ.
ಎ.ಬಿ.ಇಬ್ರಾಹಿಂ- ಕಾರ್ಯದರ್ಶಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಇವರು ಕರ್ನಾಟಕ ಮೂಲಭೂತ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಸಿ.ಶಿಖಾ-ಎಂ.ಡಿ. ಬಿಎಂಟಿಸಿ, ಜತೆಗೆ ಕರ್ನಾಟಕ ಮೂಲ ಭೂತ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹೊಣೆಗಾರಿಕೆ, ಸಲ್ಮಾ ಕೆ ಫಾಹಿಮ್-ಎಂಡಿ ಹಟ್ಟಿ ಗೋಲ್ಡ್ ಮೈನ್ಸ್, ಕೆ.ಜಿ.ಶಾಂತರಾಮ್- ಕಾರ್ಮಿಕ ಇಲಾಖೆ ಆಯುಕ್ತರು ಇವರು ಕರ್ನಾಟಕ ಹೌಸಿಂಗ್ ಬೋರ್ಡ್ ಕಮಿಷನರ್ ಆಗಿದ್ದರು. ಅನಿರುದ್ಧ ಶ್ರವಣ್-ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ, ಹೆಬ್ಸಿಬಾ ರಾಣಿ ಕೊರ್ಲಪಟ್ಟಿ – ಎಂ.ಡಿ, ಬೆಂಗಳೂರು ಸ್ಮಾರ್ಟ್ ಸಿಟಿ ಕಾಪೆರ್Çೀರೇಷನ್. ಕೆ.ಶ್ರೀನಿವಾಸ-ಆಯುಕ್ತರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಕೆ.ಲೀಲಾವತಿ- ನಿರ್ದೇಶಕರು, ವಿಕಲ ಚೇತನರ ಕಲ್ಯಾಣ ಇಲಾಖೆ, ಡಾ.ಅರುಂಧತಿ ಚಂದ್ರಶೇಖರ್-ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಎಂ.ಆರ್.ರವಿಕುಮಾರ್-ಎಂ.ಡಿ., ಕರ್ನಾಟಕ ರೇಷ್ಮೆ ಮಾರುಕಟ್ಟೆ ಮಂಡಳಿ, ಎಂ.ಬಿ.ರಾಜೇಶ್ ಗೌಡ- ಎಂ.ಡಿ. ಬೆಸ್ಕಾಂ

Translate »