ಅಂತರ ರಾಷ್ಟ್ರೀಯ ಸಮ್ಮೇಳನದಲ್ಲಿ ಕ್ಯಾನ್ಸರ್ ಔಷಧೀಯ ಗುಣಗಳ ಬಗ್ಗೆ ಪ್ರೊ. ಕೆ.ಎಸ್.ರಂಗಪ್ಪ ಉಪನ್ಯಾಸ
ಮೈಸೂರು

ಅಂತರ ರಾಷ್ಟ್ರೀಯ ಸಮ್ಮೇಳನದಲ್ಲಿ ಕ್ಯಾನ್ಸರ್ ಔಷಧೀಯ ಗುಣಗಳ ಬಗ್ಗೆ ಪ್ರೊ. ಕೆ.ಎಸ್.ರಂಗಪ್ಪ ಉಪನ್ಯಾಸ

September 7, 2019

ಮೈಸೂರು, ಸೆ.6-ಮೈಸೂರು ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ ಅವರು ಸೆಪ್ಟೆಂಬರ್ 5 ಮತ್ತು 6ರಂದು ನವದೆಹಲಿಯಲ್ಲಿ ನಡೆದ ಎರಡು ದಿನಗಳ ಅಂತರ ರಾಷ್ಟ್ರೀಯ ಸಮ್ಮೇಳನದಲ್ಲಿ ಕ್ಯಾನ್ಸರ್ ವಿರುದ್ಧ ಔಷ ಧೀಯ ಗುಣ ಲಕ್ಷಣಗಳನ್ನು ಹೊಂದಿ ರುವ ರಾಸಾಯನಿಕಗಳ ಬಗ್ಗೆ ಸಮಗ್ರ ಉಪನ್ಯಾಸ ನೀಡಿದರು.

ಈ ಅಂತರ ರಾಷ್ಟ್ರೀಯ ಸಮ್ಮೇಳನ ವನ್ನು ಭಾರತೀಯ ಜಪಾನ್ ಸೊಸೈಟಿ ಫಾರ್ ದಿ ಪ್ರಮೋಷನ್ ಸೈನ್ಸ್ (ಎSPS) ಅಲುಮ್ನಿ ಅಸೋಸಿಯೇಷನ್ (ಐಜೆ ಎಎ) ಮತ್ತು ಸಾಲಿಡ್ ಸ್ಟೇಟ್ ಫಿಸಿಕ್ಸ್ ಲ್ಯಾಬೊರೇಟರಿ, ಡಿಆರ್‍ಡಿಒ, ದೆಹಲಿ ಆಯೋಜಿಸಿದ್ದವು. ಎSPS ಜಪಾನ್‍ನ ಸ್ವತಂತ್ರ ಆಡಳಿತ ಸಂಸ್ಥೆಯಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ವಿಜ್ಞಾನದ ಪ್ರಗತಿಗೆ ಕೊಡುಗೆ ನೀಡುವ ಉದ್ದೇಶದಿಂದ ರಾಷ್ಟ್ರೀಯ ಕಾನೂನಿನ ಮೂಲಕ ಸ್ಥಾಪಿಸಲಾಗಿದೆ.

ಪ್ರೊ. ಕೆ.ಎಸ್.ರಂಗಪ್ಪ ಅವರು 1999 ಮತ್ತು 2005-2010ರಲ್ಲಿ ಎSPS ವಿಸಿ ಟಿಂಗ್‍ಪ್ರೊಫೆಸರ್ ಆಗಿ ಕಾರ್ಯ ನಿರ್ವ ಹಿಸಿದ್ದರು. ಸಮ್ಮೇಳನವು ಇಂಡೋ-ಜಪಾನ್ ದ್ವಿಪಕ್ಷೀಯ ಸಹಯೋಗ, ಜಪಾ ನೀಸ್ ಮತ್ತು ಭಾರತೀಯ ತಜ್ಞರೊಂದಿಗೆ ವೈಜ್ಞಾನಿಕ ಪ್ರಗತಿ ಮತ್ತು ಸಂಶೋಧನಾ ಧನ ಸಹಾಯದ ಅವಕಾಶಗಳ ಕುರಿತು ಚರ್ಚಿಸಲು ಒಂದು ಅಂತರ್ರಾಷ್ಟ್ರೀಯ ಮಟ್ಟದ ಉತ್ತಮ ವೇದಿಕೆಯಾಗಿದೆ.

Translate »