ಮೈಸೂರಿನ ಎಸ್‍ಡಿಎಂಐಎಂಡಿ ಸಂಸ್ಥೆಯಲ್ಲಿ 8ನೇ ಅಂತರರಾಷ್ಟ್ರೀಯ ಆರ್ಥಿಕ ಸಮ್ಮೇಳನದ ಶುಭಾರಂಭ
ಮೈಸೂರು

ಮೈಸೂರಿನ ಎಸ್‍ಡಿಎಂಐಎಂಡಿ ಸಂಸ್ಥೆಯಲ್ಲಿ 8ನೇ ಅಂತರರಾಷ್ಟ್ರೀಯ ಆರ್ಥಿಕ ಸಮ್ಮೇಳನದ ಶುಭಾರಂಭ

September 7, 2019

ಮೈಸೂರು, ಸೆ.6-ಮೈಸೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿ ಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲ ಪ್ಮೆಂಟ್ ಸಂಸ್ಥೆಯವರು ಪ್ರತಿ ವರ್ಷ ಆಯೋ ಜಿಸುವ ಆರ್ಥಿಕ ವಿಷಯದ ಅಂತರ ರಾಷ್ಟ್ರೀಯ ಸಮ್ಮೇಳನದ 8ನೆಯ ಆವೃತ್ತಿ ಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು.

ಸಮ್ಮೇಳನದ ಮುಖ್ಯ ಅತಿಥಿಗಳು ಹಾಗೂ ಮುಖ್ಯ ಭಾಷಣಕಾರ ಟ್ರಿಚಿಯ ಇಂಡಿ ಯನ್ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇ ಜ್ಮೆಂಟ್ ನಿರ್ದೇಶಕ ಡಾ. ಭೀಮರಾಯ ಮೇತ್ರಿ ಅವರು ಮಾತನಾಡುತ್ತ ‘ಕಳೆದ 10 ವರ್ಷಗಳಲ್ಲಿ ಕೈಗಾರಿಕಾ ಕ್ರಾಂತಿಯಲ್ಲಿ ಒಂದು ಅದ್ಭುತ ಬದಲಾವಣೆಯನ್ನು ಕಂಡಿದೆ. ಇಂಡಸ್ಟ್ರಿ 1.0 ಮತ್ತು 2.0 ಉತ್ಪಾ ದನಾ ಹಂತಗಳಿಂದ ಇಂಡಸ್ಟ್ರಿ 4.0 ಮತ್ತು ಅದ ಕ್ಕಿಂತಲೂ ಮೇಲ್ಮಟ್ಟಕ್ಕೆ ಹೋಗಬೇಕಾಗಿದೆ. 4ನೆಯ ಕೈಗಾರಿಕಾ ಕ್ರಾಂತಿಯು ಭಾರ ತೀಯ ಉದ್ಯಮಗಳನ್ನು ಮುಂದಕ್ಕೆ ಕರೆ ದೊಯ್ಯಬೇಕು. ಜೊತೆಜೊತೆಗೆ ನಮ್ಮನ್ನು ನಾವು 5.0 ಕ್ರಾಂತಿಗೆ ಸಿದ್ಧಗೊಳಿಸಿಕೊಳ್ಳ ಬೇಕು’ ಎಂದರು.

ಇಂಡಸ್ಟ್ರಿ 4.0ರ ಕಡೆಗಿನ ನಮ್ಮ ಹೆಜ್ಜೆಗೆ ಹೊಸ ತಂತ್ರಜ್ಞಾನಗಳ ಅಭಿವೃದ್ಧಿಯು ಪ್ರಮುಖ ಕಾರಣ. 20ನೆಯ ಶತಮಾನದ ಕೊನೆಯ ವರ್ಷಗಳಲ್ಲಿ ಅಭಿವೃದ್ಧಿಗೊಂಡ ಕೆಲವು ಕಾರ್ಯಕ್ರಮಗಳು ತಂತ್ರಜ್ಞಾನಗಳ ಕೊರತೆಯಿಂದ ಪೂರ್ಣಮಟ್ಟದಲ್ಲಿ ಅನು ಷ್ಠಾನಗೊಳ್ಳಲು ಸಾಧ್ಯವಾಗಲಿಲ್ಲ. ಈಗ ಇಂಡಸ್ಟ್ರಿ 4.0ರ ಸಹಾಯದಿಂದ ಈ ಕಾರ್ಯಕ್ರಮಗಳು ಪೂರ್ಣ ಹಂತವನ್ನು ತಲುಪಲಿವೆ. ಎಸ್‍ಡಿಎಂಐಎಂಡಿ ಸಂಸ್ಥೆಯ ಅಂತರ ರಾಷ್ಟ್ರೀಕರಣ ಮತ್ತು ನಿರ್ವಹಣಾ ಶಿಕ್ಷಣ ಕ್ಷೇತ್ರದಲ್ಲಿನ ಸಂಶೋ ಧನೆಗೆ ನೀಡಿ ರುವ ಕೊಡುಗೆಯ ಬಗ್ಗೆ ಡಾ.ಮೇತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ಸಂಸ್ಥೆ ನಿರ್ದೇಶಕ ಡಾ.ಎನ್.ಆರ್. ಪರಶು ರಾಮನ್ ಸ್ವಾಗತ ಭಾಷಣ ಮಾಡಿದರು. ಸಮ್ಮೇಳನದ ಮುಖ್ಯಸ್ಥ ಡಾ.ಎಮ್. ಶ್ರೀರಾಮ್ ಸಮ್ಮೇಳನದ ವಿಷಯಗಳನ್ನು ಪ್ರಸ್ತುತಪಡಿಸಿದರು ಹಾಗೂ ಅವುಗಳ ಸಮ ಕಾಲೀನ ಪರಿಸ್ಥಿಯ ಬಗ್ಗೆ ಅವಲೋಕಿಸಿ ದರು. ಸಮ್ಮೇಳನದಲ್ಲಿ ಪ್ರಸ್ತುತಗೊಳ್ಳುವ ಲೇಖನಗಳ ಇ- ಪ್ರಕಾಶನವನ್ನು ಗಣ್ಯರು ಬಿಡುಗಡೆ ಮಾಡಿದರು. ಸಂಸ್ಥೆಯ ಅಧ್ಯಾ ಪಕ ವೃಂದ, ಸಿಬ್ಬಂದಿ ಮತ್ತು ವಿದ್ಯಾರ್ಥಿ ಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Translate »