ಹುತಾತ್ಮ ಯೋಧರಿಗೆ ಅವಮಾನ: ಮೈಸೂರಲ್ಲಿ ತ್ರಿಪುರ ಪೊಲೀಸರಿಂದ  ಯುವಕ ಸೆರೆ
ಮೈಸೂರು

ಹುತಾತ್ಮ ಯೋಧರಿಗೆ ಅವಮಾನ: ಮೈಸೂರಲ್ಲಿ ತ್ರಿಪುರ ಪೊಲೀಸರಿಂದ ಯುವಕ ಸೆರೆ

February 25, 2019

ಮೈಸೂರು: ಪುಲ್ವಾಮ ದಾಳಿಯ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿದ್ದ ಯುವಕ ನನ್ನು ತ್ರಿಪುರ ಪೊಲೀಸರು ಮೈಸೂರಲ್ಲಿ ಬಂಧಿಸಿದ್ದಾರೆ.

ಮಂಡಿ ಠಾಣಾ ವ್ಯಾಪ್ತಿಯ ಮೊಘಲ್ ದರ್ಬಾರ್ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದ ಪ್ರಮೇಶ್ ಡೆಬ್ಬಾರ್ಮ(24) ಪುಲ್ವಾಮ ದಾಳಿಯ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿದ್ದ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ಈ ಸಂಬಂಧ ತ್ರಿಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆತನ ಬಗ್ಗೆ ನಿಖರ ಮಾಹಿತಿಯನ್ನು ಪಡೆದ ತ್ರಿಪುರ ಪೊಲೀಸರು, ಮೈಸೂರಿಗೆ ಆಗಮಿಸಿ ಮಂಡಿ ಠಾಣೆ ಇನ್ಸ್‍ಪೆಕ್ಟರ್ ಅರುಣ್ ಅವರ ಸಹಕಾರದೊಂದಿಗೆ ಶನಿವಾರ ಆತನನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಂಗ ಬಂಧನಕ್ಕೊಪ್ಪಿಸಿದ್ದರು. ಇಂದು ಬೆಳಿಗ್ಗೆ ಆತನನ್ನು ತ್ರಿಪುರಕ್ಕೆ ಕರೆದೊಯ್ದರು.

Translate »