ಪುರಂದರದಾಸರಿಂದ ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ
ಮೈಸೂರು

ಪುರಂದರದಾಸರಿಂದ ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ

February 25, 2019

ಮೈಸೂರು: ಮೈಸೂ ರಿನ ಜೆಎಲ್‍ಬಿ ರಸೆಯಲ್ಲಿರುವ ಶಿವಾನಂದ ಜ್ಞಾನಾಲಯದಲ್ಲಿ ತಿರುಪತಿ ತಿರುಮಲ ದೇವ ಸ್ಥಾನದ ದಾಸ ಸಾಹಿತ್ಯ ಪ್ರಾಜೆಕ್ಟ್ ಹಾಗೂ ಶ್ರೀ ದುರ್ಗಾ ನೃತ್ಯ ಅಕಾಡೆಮಿ ಚಾರಿಟಬಲ್ ಟ್ರಸ್ಟ್ ವತಿಯಿಂದ ‘ಶ್ರೀ ಪುರಂದರ ನಮನ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ದಾಸ ಸಾಹಿತ್ಯ ಪ್ರಾಜೆಕ್ಟ್ ವ್ಯವಸ್ಥಾಪಕಿ ಆರ್. ಶಾಂತಿ ಸರ್ವೋತ್ತಮನ್ ಮಾತನಾಡಿ, ಪುರಂದರ ದಾಸರು 75 ಸಾವಿರ ಹಾಡುಗಳನ್ನು ರಚಿ ಸಿದ್ದು, ಸುಮಾರು 2 ಸಾವಿರ ಹಾಡುಗಳು ನಮಗೆ ದೊರೆತಿವೆ. ಪುರಂದರ ದಾಸರು ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಅವರನ್ನು ಇಂತಹ ಕಾರ್ಯ ಕ್ರಮಗಳ ಮೂಲಕ ನೆನೆಯಬೇಕು. ಹಾಗೆಯೇ ಮುಂದಿನ ಪಿಳಿಗೆಗೆ ಅವರನ್ನು ಪರಿಚಯಿಸಬೇಕು ಎಂದು ಹೇಳಿದರು.

ಸಮಾಜ ಸೇವಕ ಡಾ.ಕೆ. ರಘುರಾಂ ವಾಜಪೇಯಿ ಮಾತನಾಡಿ, ಪುರಂದರ ದಾಸರು ಕರ್ನಾಟಕ ಸಂಗೀತ ಪ್ರವರ್ತಕರು. ಕನ್ನಡದಲ್ಲಿ ಸಂಗೀತ ರಚನೆ ಮಾಡಿದವ ರಲ್ಲಿ ಪುರಂದರದಾಸರೇ ಮುಂದಿದ್ದರು. 12ನೇ ಶತಮಾನದವರೆಗೆ ಸಂಸ್ಕøತ ಹಾಗೂ ತಮಿಳಿನಲ್ಲಿ ದೇವರ ಸೋತ್ರಗಳನ್ನು ರಚನೆ ಮಾಡಲಾಗುತ್ತಿತ್ತು ಎಂದರು.

14ನೇ ಶತಮಾನದಲ್ಲಿ ಜನಪದ ಗೀತೆ ಗಳು, ಚರ್ಮವಾದ್ಯಗಳಲ್ಲಿ ಕನ್ನಡದ ಗೀತೆಗಳ ರಚನೆ ಚಾಲ್ತಿಯಲ್ಲಿತ್ತು. ಬಸವಣ್ಣನವರು ಕನ್ನಡದಲ್ಲಿ ವಚನಗಳ ಮೂಲಕ ದೇವರ ಪೂಜೆಯನ್ನು ಜಾರಿಗೆ ತಂದರು. ಹಾಗೆಯೇ ಪುರಂದರದಾಸರು ಹರಿದಾಸ ಸಾಹಿತ್ಯವನ್ನು ಶುದ್ಧ ಕನ್ನಡದ ಶಿಷ್ಟ ರೂಪದಲ್ಲಿ ಕೀರ್ತನೆ, ಭಜನೆಗಳನ್ನು ನೃತ್ಯಕ್ಕೆ ಹಾಗೂ ಸಂಗೀತಕ್ಕೆ ಅಳವಡಿಸಿ, ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿದರು. ಹರಿದಾಸರ ಸಾಲಿನಲ್ಲಿ ಪುರಂದರದಾಸರು ಶ್ರೇಷ್ಠ ಮಟ್ಟದ ಸಾಹಿತ್ಯ ರಚನೆ ಮಾಡಿ, ಅದನ್ನು ಶುದ್ಧ ಶಾಸ್ತ್ರೀಯ ಸಂಗೀತದಲ್ಲಿ ಹೇಳಿ ನರ್ತಿಸುತ್ತಿದ್ದರು. ಕರ್ನಾಟಕ ಸಂಗೀತ ದಲ್ಲಿ ಪುರಂದರದಾಸರು ಎಂದಿಗೂ ಅಜರಾಮರ ಎಂದು ಬಣ್ಣಿಸಿದರು.

ಇದೇ ವೇಳೆ ಹಿರಿಯ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ರಮಾ ಮಣಿ ಗುರುಪ್ರಸಾದ್, ಪ್ರಸಾದ್ ಸ್ಕೂಲ್‍ನ ಸ್ಥಾಪಕ ಡಾ.ಸಿ.ಆರ್.ರಾಘವೇಂದ್ರ ಅವರಿಗೆ ಪುರಂದರ ರತ್ನ ಪ್ರಶಸ್ತಿ ನೀಡಿ, ಗೌರವಿಸಲಾಯಿತು. ಬಳಿಕ ಬಣ್ಣ ಬಣ್ಣದ ಉಡುಗೆ-ತೊಡುಗೆಗಳಿಂದ ಕಂಗೊಳಿಸು ತ್ತಿದ್ದ ಶ್ರೀ ದುರ್ಗಾ ನೃತ್ಯ ಅಕಾಡೆಮಿ ಚಾರಿಟಬಲ್ ಟ್ರಸ್ಟ್‍ನ ವಿದ್ಯಾರ್ಥಿಗಳು ಭರತ ನಾಟ್ಯ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು

Translate »