ಹುಬ್ಬಳ್ಳಿ, ಫೆ.9- ರೈತರಿಗೆ ಅನುಕೂಲ ಆಗಬೇಕೆಂದು ಪಿಎಲ್‍ಡಿ, ಡಿಸಿಸಿ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳಲ್ಲಿನ ರೈತರ ಸಾಲ ಹಾಗೂ ಸುಸ್ತಿ ಮೇಲಿನ ಬಡ್ಡಿ ಯನ್ನು ಸಂಪೂರ್ಣ ಮನ್ನಾ ಮಾಡಲಾಗುವುದೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದರು.
ಭಾನುವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಮಾ.5ರಂದು ರಾಜ್ಯದ ಆಯವ್ಯಯ ಮಂಡಿ ಸಲಾಗುವುದು. ಇನ್ನು, ಹಲವು ದಿನಗಳಿಂದ ನಾಡಿನ ರೈತರು ಸಾಲದಲ್ಲಿ ಸಿಲುಕಿದ್ದು, ಈ ಸಂಬಂಧ ಬಡ್ಡಿ ಹಾಗೂ ಸುಸ್ತಿ ಬಡ್ಡಿ ಮನ್ನಾ ಮಾಡಲಾಗುತ್ತಿದೆ. ಇದರಿಂದ ಸರ್ಕಾ ರಕ್ಕೆ 400 ಕೋಟಿ ರೂ. ಹೊರೆ ಬೀಳು ವುದು ಎಂದರು. ಅದೇ ರೀತಿ, ಮಾರ್ಚ್ ಅಂತ್ಯದ ಒಳಗಾಗಿ ಸಾಲ ಮರುಪಾವತಿ ಸುವ ರೈತರಿಗೆ ರಿಯಾಯಿತಿಯನ್ನು ಸಹ ನೀಡಲು ಚಿಂತನೆ ನಡೆಸಲಾಗಿದೆ. ಪ್ರಸ್ತುತ ಸಾಲಿನ ಆಯವ್ಯಯ ಮಂಡನೆ ಸಂಬಂಧ ಸಿದ್ಧತೆಗಳು ಪ್ರಾರಂಭವಾಗಿದ್ದು, ರೈತ ಸ್ನೇಹಿ ಬಜೆಟ್ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಚಿವರ ಖಾತೆ ಹಂಚಿಕೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ. ಸೋಮವಾರ ಖಾತೆಗಳನ್ನು ಹಂಚಿಕೆ ಮಾಡಿ ಜವಾಬ್ದಾರಿ ವಹಿಸಲಾಗು ವುದು. ಯಾವುದೇ ನೂತನ ಜಿಲ್ಲೆಯ ರಚನೆ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಮಹಾ ದಾಯಿ ನೀರು ಹಂಚಿಕೆ ವಿಚಾರ ಸುಪ್ರಿಂಕೋರ್ಟಿನಲ್ಲಿದ್ದು, ರಾಜ್ಯದ ಅಡ್ವೋಕೇಟ್ ಜನರಲ್ ಅವರಿಗೆ ಮೇಲ್ಮನವಿ ಸಲ್ಲಿಸಲು ನಿರ್ದೇಶನ ನೀಡಲಾಗಿದೆ. ಶೀಘ್ರದಲ್ಲಿಯೇ ಮಹ ದಾಯಿ ಸಮಸ್ಯೆಯನ್ನು ಬಗೆಹರಿಸಲಾಗುವುದು. ಇನ್ನು, ಬಜೆಟ್‍ನಲ್ಲೂ ಮಹದಾಯಿ ಯೋಜನೆಗೆ ಹಣ ಮೀಸಲಿರಿ ಸಲಾಗುವುದು ಎಂದು ಯಡಿಯೂರಪ್ಪ ನುಡಿದರು.