ಮೈಸೂರು,ಫೆ.9(ಆರ್‍ಕೆ)- ಮೈಸೂರು ಮಹಾನಗರಪಾಲಿಕೆ 18ನೇ ವಾರ್ಡ್‍ನ ಉಪಚುನಾವಣೆ ಮತದಾನ ಸಂಪೂರ್ಣ ಶಾಂತಿಯುತವಾಗಿ ಭಾನುವಾರ ನಡೆಯಿತು.
ವಾರ್ಡಿನ ವ್ಯಾಪ್ತಿಗೆ ಬರುವ ಯಾದವ ಗಿರಿ, ರೈಲ್ವೆ ಕ್ವಾರ್ಟರ್ಸ್, ಮಂಜುನಾಥ ಪುರ ಹಾಗೂ ಮೇದರ್ ಬ್ಲಾಕ್‍ಗಳಲ್ಲಿ 11,877 ಮತದಾರರ ಪೈಕಿ ಶೇ.44.33 ರಷ್ಟು ಮತದಾನವಾಗಿದ್ದು, 2671 ಮಹಿಳೆಯರು ಹಾಗೂ 2594 ಪುರು ಷರು ಸೇರಿ ಒಟ್ಟು 5265 ಮಂದಿ ತಮ್ಮ ಹಕ್ಕು ಚಲಾಯಿಸಿದರು.
ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಆರಂಭ ವಾದ ಮತದಾನ ಪ್ರಕ್ರಿಯೆಯು ವಾರ್ಡ್ ವ್ಯಾಪ್ತಿಯ ಎಲ್ಲಾ 11 ಮತಗಟ್ಟೆಗಳಲ್ಲಿ ಮತದಾರರು ಸಾಲುಗಟ್ಟಿ ನಿಂತು ಉತ್ಸಾಹ ದಿಂದ ಮತ ಚಲಾಯಿಸಿದರು. ಬೆಳಿಗ್ಗೆ 11.45 ಗಂಟೆವರೆಗೆ ಬಿರುಸಿನಿಂದ ಮತ ದಾನವಾಯಿತಾದರೂ, ಬಿಸಿಲು ಜಾಸ್ತಿಯಾದ ಕಾರಣ ಮಧ್ಯಾಹ್ನ 3.30 ಗಂಟೆವರೆಗೂ ನೀರಸ ಪ್ರತಿಕ್ರಿಯೆ ಕಂಡು ಬಂದಿತು.
ಸಂಜೆ 4 ಗಂಟೆ ನಂತರ ಮತ್ತೆ ಬಿರುಸು ಗೊಂಡ ಮತದಾನ ಪ್ರಕ್ರಿಯೆ ಮುಕ್ತಾಯ ವಾಗುವವರೆಗೂ ಜನರು ಬಂದು ತಮ್ಮ ಹಕ್ಕು ಚಲಾಯಿಸಿದರು. ಸಂಜೆ 5 ಗಂಟೆವರೆಗೆ ಮತಗಟ್ಟೆ ಆವರಣ ಪ್ರವೇಶಿಸಿದ ಪ್ರತಿ ಯೊಬ್ಬರಿಗೂ ಮತದಾನ ಮಾಡಲು ಅವ ಕಾಶ ಮಾಡಿಕೊಡಲಾಯಿತು.
ವಾರ್ಡ್ ವ್ಯಾಪ್ತಿಯ ಎಲ್ಲಾ 11 ಮತ ಕೇಂದ್ರಗಳ ವಿದ್ಯುನ್ಮಾನ ಮತಯಂತ್ರ ಗಳಲ್ಲಿ ಯಾವುದೇ ತಾಂತ್ರಿಕ ದೋಷ ಕಂಡು ಬರದ ಕಾರಣ ಗೊಂದಲ, ಗಲಾಟೆ ಇಲ್ಲದೆ ಬೆಳಿಗ್ಗೆ 7ರಿಂದ ಸಂಜೆ 5 ಗಂಟೆ ವರೆಗೂ ಶಾಂತಿಯುತ ಮತದಾನ ನಡೆಯಿತು. ಮತದಾರರ ಗುರುತಿನ ಚೀಟಿ ಅಥವಾ ಭಾವಚಿತ್ರವಿರುವ ಯಾವುದೇ ಸರ್ಕಾರಿ ಸಂಸ್ಥೆ ನೀಡಿದ ಗುರುತಿನ ಚೀಟಿಯೊಂದಿಗೆ ಆಗಮಿಸಿ ದವರಿಗೆ ಮತ ಚಲಾಯಿಸಲು ಅವ ಕಾಶ ಕಲ್ಪಿಸಿ ಕೊಡಲಾಯಿತು.
ಮತದಾರರ ಪಟ್ಟಿಯಲ್ಲಿ ಹೆಸರಿರುವು ದನ್ನು ಖಾತರಿಪಡಿಸಿಕೊಂಡ ಅಧಿಕಾರಿ ಗಳು ಹಾಗೂ ಸಿಬ್ಬಂದಿ ಮತದಾರರ ಎಡಗೈ ಉಂಗುರ ಬೆರಳಿಗೆ ಅಳಿಸಲಾಗದ ಶಾಯಿ ಹಾಕಿದರು. ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲಾಗಿತ್ತು. ಮತ ಗಟ್ಟೆಯಿಂದ 200 ಮೀಟರ್ ದೂರದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಏಜೆಂಟರುಗಳು ಟೇಬಲ್ ಇರಿಸಿ ಕೊಂಡು ಮತದಾರರಿಗೆ ಪಟ್ಟಿಯಲ್ಲಿ ಹೆಸರಿ ರುವ ಬಗ್ಗೆ ಖಾತರಿಪಡಿಸಿ ಕ್ರಮ ಸಂಖ್ಯೆ, ಬ್ಲಾಕ್ ಸಂಖ್ಯೆ, ಕೊಠಡಿ ಸಂಖ್ಯೆ ಬರೆದು ಚೀಟಿ ಕೊಡುತ್ತಿದ್ದುದು ಸಾಮಾನ್ಯವಾಗಿತ್ತು.ಉಪಚುನಾವಣೆಯ ಸ್ಪರ್ಧಾಕಣದಲ್ಲಿ ರುವ ಬಿಜೆಪಿಯ ಬಿ.ವಿ.ರವೀಂದ್ರ, ಯಾದವಗಿರಿಯ ಆಕಾಶವಾಣಿ ಸರ್ಕಲ್ ಬಳಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರೆ, ಜೆಡಿಎಸ್‍ನ ಸ್ವಾಮಿ ಅವರು ಮಂಜುನಾಥಪುರದಲ್ಲಿ ಮತ ಹಾಕಿದರು. ಕಾಂಗ್ರೆಸ್ಸಿನ ಆರ್.ರವೀಂದ್ರ ಕುಮಾರ್ ವಾರ್ಡಿನ ಮತದಾರರಲ್ಲದ ಕಾರಣ ಇಂದು ತಮ್ಮ ಹಕ್ಕು ಚಲಾಯಿಸಲಿಲ್ಲ. ಶಾಸಕ ಎಲ್.ನಾಗೇಂದ್ರ, ಪೆಟ್ರೋಲ್ ವಿತರಕರ ಸಂಘದ ಎಸ್.ಕೆ.ದಿನೇಶ್ ಸೇರಿದಂತೆ ಹಲವು ಬಿಜೆಪಿ ಕಾರ್ಪೊರೇಟರ್‍ಗಳು ಹಾಗೂ ಕಾರ್ಯಕರ್ತರು ವಾರ್ಡಿನಾದ್ಯಂತ ಮತಗಟ್ಟೆ ಬಳಿಗೆ ಧಾವಿಸಿ ತಮ್ಮ ಅಭ್ಯರ್ಥಿ ಪರ ಬೆಂಬಲಿಸಿದರು.
ಮಾಜಿ ಶಾಸಕ ವಾಸು, ಕವೀಶ್ ಗೌಡ, ಮಾಜಿ ಮೇಯರ್ ಬಿ.ಕೆ.ಪ್ರಕಾಶ್ ಸೇರಿದಂತೆ ಇತರರು ಕಾಂಗ್ರೆಸ್ ಅಭ್ಯರ್ಥಿ ಪರ ಹಾಗೂ ನಗರ ಜೆಡಿಎಸ್ ಅಧ್ಯಕ್ಷ ಕೆ.ಟಿ.ಚೆಲುವೇಗೌಡ, ಕಾರ್ಪೊರೇಟರ್ ಎಸ್‍ಬಿಎಂ ಮಂಜು ನೇತೃತ್ವದಲ್ಲಿ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸಲು ಪ್ರಯತ್ನಿಸುತ್ತಿದ್ದುದು ಕಂಡು ಬಂದಿತು.
ಚುನವಣಾಧಿಕಾರಿ ಹೆಚ್.ಎನ್.ಶಿವೇಗೌಡ, ಸಹಾಯಕ ಚುನಾವಣಾಧಿಕಾರಿ ನಿಶ್ಚಯ್ ಅವರು ಮತದಾನ ಕಾರ್ಯದ ಮೇಲ್ವಿಚಾರಣೆ ನಡೆಸಿ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆಸುವಲ್ಲಿ ಯಶಸ್ವಿಯಾದರು. ಪ್ರತೀ ಮತಗಟ್ಟೆಗೆ ಇಬ್ಬರಂತೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಕಟ್ಟುನಿಟ್ಟಿನ ಭದ್ರತೆ ಒದಗಿಸಲಾಗಿತ್ತು. ಫೆ.11ರಂದು ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಸರ್ಕಾರಿ ಸಂಸ್ಕøತ ಪಾಠಶಾಲೆಯಲ್ಲಿ ಮತ ಎಣಿಕೆ ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಪೂರ್ಣ ಪ್ರಮಾಣದ ಫಲಿತಾಂಶ ಹೊರಬೀಳಲಿದೆ ಎಂದು ಚುನಾವಣಾಧಿಕಾರಿ ಹೆಚ್.ಎನ್.ಶಿವೇಗೌಡ ತಿಳಿಸಿದ್ದಾರೆ.
ಬೇಸರ: ಆಕಾಶವಾಣಿ ಸರ್ಕಲ್ ಬಳಿಯ ಸುನಂದ ಅಕಾಡೆಮಿಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಯೊಂದರಲ್ಲಿ ವೋಟ್ ಮಾಡಿದ ತಕ್ಷಣವೇ ತಮ್ಮ ಬೆರಳಿಗೆ ಹಾಕಿದ್ದ ಶಾಹಿ ಅಳಿಸಿ ಹೋಯಿತು ಎಂದು ಹಿರಿಯ ನಾಗರಿಕ ಸತ್ಯನಾರಾಯಣ ರಾವ್ ಬೇಸರ ವ್ಯಕ್ತಪಡಿಸಿದರು. ಗುಣಮಟ್ಟದ ಶಾಹಿ ತರಿಸದೆ ಮತದಾನ ನಡೆಸಿದರೆ, ನಕಲಿ ಮತ ದಾನವಾಗುವ ಸಾಧ್ಯತೆ ಇರುತ್ತದೆ ಹಾಗೂ ನಿಜವಾದ ಮತದಾರರಿಗೆ ಹಕ್ಕು ಚಲಾಯಿ ಸುವುದರಿಂದ ವಂಚಿತರಾಗಬಾರದು ಎಂದೂ ಅವರು ಸಲಹೆ ನೀಡಿದರು.