ಹುಣಸೂರು ನಗರಸಭೆ ಚುನಾವಣೆ ಶೇ.75.02 ಮತದಾನ
ಮೈಸೂರು

ಹುಣಸೂರು ನಗರಸಭೆ ಚುನಾವಣೆ ಶೇ.75.02 ಮತದಾನ

February 10, 2020

ಹುಣಸೂರು, ಫೆ.9(ಕೆಕೆ)-ಹುಣಸೂರು ನಗರಸಭೆ ಚುನಾವಣೆ ಭಾನುವಾರ ಶಾಂತಿ ಯುತವಾಗಿ ನಡೆದು ಶೇ.75.02ರಷ್ಟು ಮತದಾನ ದಾಖಲಾಯಿತು.

ಹುಣಸೂರು ಪುರಸಭೆಯಿಂದ ನಗರ ಸಭೆಯಾಗಿ ಮೇಲ್ದರ್ಜೆಗೊಂಡ ಬಳಿಕ ಇದೇ ಮೊದಲ ಬಾರಿಗೆ ಭಾನುವಾರ ಚುನಾ ವಣೆ ನಡೆಯಿತು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್‍ನ ಘಟಾನುಘಟಿಗಳೊಂದಿಗೆ ಇತರೆ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳು ಭಾರೀ ಪೈಪೆÇೀಟಿ ನೀಡಿದ್ದು, ನಗರದ ಮತದಾರರು ಭಾರೀ ಉತ್ಸು ಕತೆಯಿಂದ ಮತದಾನ ಮಾಡಿದರು.

ಭಾನುವಾರ ಬೆಳಿಗ್ಗೆ 7 ಗಂಟೆಗೆ ಪ್ರಾರಂಭ ವಾದ ಮತದಾನ ಪ್ರಕ್ರಿಯೆ ಬಿರುಸಿನಿಂದ ನಡೆದು, ಮಧ್ಯಾಹ್ನದ ವೇಳೆಗೆ ಮಂದಗತಿ ಯಲ್ಲಿ ಸಾಗಿತು. ಮತ್ತೆ ಸಂಜೆ ವೇಳೆಗೆ ಮತ ದಾನ ಚುರುಕುಗೊಂಡು ಶೇ.75.02ರಷ್ಟು ಮತದಾನ ದಾಖಲಾಯಿತು.

ನಗರಸಭೆಯ 31 ವಾರ್ಡ್‍ಗಳ ಪೈಕಿ ಶಬ್ಬೀರ್‍ನಗರದ 31ನೇ ವಾರ್ಡ್‍ನ ಮತ ಗಟ್ಟೆ 39ರಲ್ಲಿ ಅತೀ ಹೆಚ್ಚು(1,518) ಮತ ದಾರರಿದ್ದು, ಕಾರ್ಖಾನೆ ರಸ್ತೆಯ ಮುಸ್ಲಿಂ ಬ್ಲಾಕ್‍ನ 13ನೇ ವಾರ್ಡ್‍ನ ಮತಗಟ್ಟೆ 16ರಲ್ಲಿ ಅತೀ ಕಡಿಮೆ(779) ಮತದಾರರಿದ್ದಾರೆ. 20,689 ಪುರುಷರು, 21,264 ಮಹಿಳೆ ಯರು ಇತರೆ 2 ಸೇರಿದಂತೆ 41,955 ಮತ ದಾರರಿದ್ದಾರೆ. ಚುನಾವಣೆಯಲ್ಲಿ ಪುರು ಷರು 15,672 (75.75), ಮಹಿಳೆಯರು 15,800(74.30), ಇತರರು 1 (ಶೇ.50) ಸೇರಿದಂತೆ ಒಟ್ಟು 31,473 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

31 ವಾರ್ಡ್‍ಗಳಿಗೆ ಅನುಕೂಲವಾಗು ವಂತೆ ಚುನಾವಣಾಧಿಕಾರಿಗಳು 39 ಮತ ಗಟ್ಟೆಗಳನ್ನು ಸ್ಥಾಪಿಸಿದ್ದರು. ಮತದಾನದ ವೇಳೆ ಯಾವುದೇ ಅಹಿತಕರ ಘಟನೆ ಸಂಭ ವಿಸದಂತೆ ಭಾರೀ ಬಿಗಿ ಭದ್ರತೆ ಕೈಗೊಂಡಿ ದ್ದರಿಂದ ಶಾಂತಿಯುತವಾಗಿ ಮತದಾನ ಮುಕ್ತಾಯವಾಯಿತು. ಆಯಾಯ ವಾರ್ಡ್‍ಗಳಿಗೆ ಸಂಬಂಧಪಟ್ಟ ಅಭ್ಯರ್ಥಿಗಳು ತಮ್ಮ ಮತ ಚಲಾಯಿಸಿದರು.

ಶಾಸಕ, ಮಾಜಿ ಸಚಿವರ ಮತದಾನ: ನಗರದ ಸೇತುವೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆ 11ರಲ್ಲಿ ಬೆಳಿಗ್ಗೆ ಶಾಸಕ ಹೆಚ್.ಪಿ.ಮಂಜುನಾಥ್ ತಮ್ಮ ತಂದೆ ಹೆಚ್.ಎನ್.ಪ್ರೇಮ್‍ಕುಮಾರ್, ತಾಯಿ ರತ್ನಾ ಪ್ರೇಮ್‍ಕುಮಾರ್ ಸೇರಿದಂತೆ ತಮ್ಮ ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದರು. ಅದೇ ರೀತಿ ಮಾಜಿ ಸಚಿವ ಎ.ಹೆಚ್.ವಿಶ್ವನಾಥ್ 26ನೇ ವಾರ್ಡ್‍ನ ಕರೀಗೌಡರ ಬೀದಿಯ ಸರ್ಕಾರಿ ಶಾಲೆಯಲ್ಲಿನ ಮತಗಟ್ಟೆ 33ರಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಮತ ಚಲಾಯಿಸಿದರು.

ವಯೋವೃದ್ಧರ ಉತ್ಸಾಹ: ನಗರಸಭೆ ಚುನಾವಣೆಯಲ್ಲಿ ವಯೋವೃದ್ಧರು ಮೊಮ್ಮ ಕ್ಕಳು, ಸಂಬಂಧಿಕ ಸಹಾಯದೊಂದಿಗೆ ಮತಗಟ್ಟೆಗೆ ತೆರಳಿ ಉತ್ಸಾಹದಿಂದ ಮತದಾನ ಮಾಡಿದರು. ವಾರ್ಡ್ ನಂ.5ರಲ್ಲಿ ಮಲ್ಲಾಡಿ ಚನ್ನಯ್ಯತಮ್ಮ(88) ಮೊಮ್ಮಗನ ಸಹಾಯ ದಿಂದ ಮತಗಟ್ಟೆ 6ರಕ್ಕೆ ಆಗಮಿಸಿ ಮತದಾನ ಮಾಡಿದರು. ಕರೀಗೌಡರ ಬೀದಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆ 29ರಲ್ಲಿ 88ರ ವಯೋವೃದ್ಧ ವ್ಹೀಲ್‍ಚೇರ್‍ನಲ್ಲಿ ಆಪ್ತರ ಸಹಾಯದೊಂದಿಗೆ ಮತದಾನ ಮಾಡಿದರು. ಅದೇ ರೀತಿ ಇದೇ ಮತಗಟ್ಟೆಯಲ್ಲಿ ಮರಿಯಮ್ಮ, ಜಯಮ್ಮ, ಚಲುವಮ್ಮ ಅವರು ತಮ್ಮ ಮೊಮ್ಮಕ್ಕಳ ಸಹಾಯದೊಂದಿಗೆ ವ್ಹೀಲ್‍ಚೇರ್‍ನಲ್ಲಿ ಬಂದು ಮತದಾನ ಮಾಡಿದರು. ವಾರ್ಡ್ ನಂ. 24ರ ವಿ.ಪಿ.ಬೋರೆಯ ಸರ್ಕಾರಿ ಶಾಲೆಯಲ್ಲಿನ ಮತಗಟ್ಟೆ 30ರಲ್ಲಿ ಪಾಪೇಗೌಡರ ಮಹದೇವ್ ಆಪ್ತರ ಸಹಾಯದೊಂದಿಗೆ ಬಂದು ಮತದಾನ ಮಾಡಿದರು. ಇದೇ ಮತಗಟ್ಟೆಯಲ್ಲಿ ಶಿವಮ್ಮ(105) ಸ್ವಾಮಿ ಎಂಬುವವರ ಸಹಾಯದೊಂ ದಿಗೆ ಮತದಾನ ಮಾಡಿದರು. ಪೌರಕಾರ್ಮಿಕರ ಕಾಲೋನಿಯ 21ನೇ ವಾರ್ಡ್‍ನ ಮತಗಟ್ಟೆ 27ರಲ್ಲಿ ಮುರುಗೇಶ್(88) ಮೇಸ್ತ್ರಿ ವಿನೋದ್ ಅವರ ಸಹಾಯದೊಂದಿಗೆ ವ್ಹೀಲ್‍ಚೇರ್‍ನಲ್ಲಿ ಬಂದು ಮತದಾನ ಮಾಡಿದರು. ತಾಪಂ ಕಚೇರಿ ಕಟ್ಟಡದಲ್ಲಿನ ವಾರ್ಡ್ ನಂ.12ರ ಮತಗಟ್ಟೆ 15ರಲ್ಲಿ ಜುಲೈಖಾಬಿ(85) ಫಯಾಜ್‍ಅಹಮ್ಮದ್ ಸಹಾಯದೊಂದಿಗೆ ವ್ಹೀಲ್‍ಚೇರ್‍ನಲ್ಲಿ ಬಂದು ಮತದಾನ ಮಾಡಿದರೆ, ನಯಾಜ್‍ಬೇಗ್(83) ಅಲ್ಲಾ ಬಸೀರ್ ಅವರ ಸಹಾಯದೊಂದಿಗೆ ವ್ಹೀಲ್‍ಚೇರ್‍ನಲ್ಲಿ ಬಂದು ಮತದಾನ ಮಾಡಿದರು.

Translate »