ಮೈಸೂರು,ಫೆ.10-ಹಿರಿಯ ರಾಜಕಾರಣಿ, ಮಾಜಿ ಉನ್ನತ ಶಿಕ್ಷಣ ಸಚಿವ ಡಿ. ಮಂಜುನಾಥ್ ಅವರ ಸ್ಮರಣಾರ್ಥ ಶ್ರದ್ಧಾಂಜಲಿ ಸಭೆಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವತಿ ಯಿಂದ ಕಾವೇರಿ ಸಭಾಂಗಣ ದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಎನ್.ಮುನಿ ರಾಜು, ಡಿ.ಮಂಜುನಾಥ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಸರಳ, ಸದ್ಗುಣ, ಸಜ್ಜನಿಕೆಯ ವ್ಯಕ್ತಿಯಾಗಿ 90 ವರ್ಷಗಳ ತುಂಬು ಜೀವನ ನಡೆಸಿದ ಡಿ.ಮಂಜುನಾಥ್, ರಾಜಕಾರಣದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿ ಸತತ 3 ಬಾರಿ ಉನ್ನತ ಶಿಕ್ಷಣ ಸಚಿವರಾಗಿ ಸಮರ್ಪಕವಾಗಿ ನಿಭಾಯಿಸಿ ಉನ್ನತ ಶಿಕ್ಷಣಕ್ಕೆ ಹೊಸ ಆಯಾಮ ನೀಡಿದ್ದರು. ಶಿಕ್ಷಕ ವೃತ್ತಿ ಹಾಗೂ ಶಿಕ್ಷಕರ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಇವರು, ಸಮಾಜ ಕಲ್ಯಾಣ ಇಲಾಖೆಯೊಂ ದಿಗೆ ಸತತವಾಗಿ ಸಂಪರ್ಕ ಸಾಧಿಸಿ ಬಾಲಕಿಯರ ವಸತಿ ನಿಲಯ ಮತ್ತು ಕಾಲೇಜುಗಳ ಸ್ವಂತ ಕಟ್ಟಡಗಳನ್ನು ನಿರ್ಮಿಸಲು ಪ್ರಮುಖ ಪಾತ್ರ ವಹಿಸಿದ್ದರು ಎಂದು ಸ್ಮರಿಸಿದರು.
ಕರಾಮುವಿ ಕುಲಪತಿ ಪೆÇ್ರ.ಎಸ್.ವಿದ್ಯಾಶಂಕರ್ ಮಾತನಾಡಿ, ಇತ್ತೀಚಿನ ಒತ್ತಡದ ಬದುಕಿನಲ್ಲಿ ನಾವು ಯಾರನ್ನಾದರು ನೆನಪಿಸಿಕೊಳ್ಳುವುದೇ ಹೆಚ್ಚು, ಅಂಥಹದರಲ್ಲಿ ಇಹಲೋಕ ತ್ಯಜಿಸಿದವರನ್ನು ನೆನೆಸಿಕೊಳ್ಳುತ್ತೇವೆ ಅಂದರೆ ಅವರ ಬಗ್ಗೆ ಅಪಾರ ಗೌರವ ಹೊಂದಿರುತ್ತೇವೆ ಎಂದರ್ಥ. ಸಮಾಜಕ್ಕಾಗಿ ಮಾಡಿದ ತ್ಯಾಗ ಹಾಗೂ ನಿಸ್ವಾರ್ಥ ಸೇವೆಯಿಂದ ಮಾತ್ರ. ಅದಕ್ಕೆ ಈ ರೀತಿಯ ಶ್ರದ್ಧಾಂಜಲಿ ಸಭೆಗಳೇ ಸಾಕ್ಷಿ ಎಂದು ಅಭಿ ಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಡೀನ್ (ಶೈಕ್ಷಣಿಕ) ಡಾ.ತೇಜಸ್ವಿನವಿಲೂರು, ಪರೀ ಕ್ಷಾಂಗ ಕುಲಸಚಿವರಾದ ಡಾ.ಕವಿತಾ ರೈ ಭಾಗವಹಿಸಿದ್ದರು. ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಆರ್.ಎಚ್.ಪವಿತ್ರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.