ಆರ್‍ಎಸ್‍ಎಸ್ ವ್ಯಕ್ತಿ ಪೂಜೆಗೆ ಒತ್ತು ನೀಡದು
ಮೈಸೂರು

ಆರ್‍ಎಸ್‍ಎಸ್ ವ್ಯಕ್ತಿ ಪೂಜೆಗೆ ಒತ್ತು ನೀಡದು

February 11, 2020

ಮೈಸೂರು,ಫೆ.10(ಎಸ್‍ಪಿಎನ್)-ಆರ್‍ಎಸ್‍ಎಸ್ ಎಂದಿಗೂ ವ್ಯಕ್ತಿ ಪೂಜೆಗೆ ಒತ್ತು ನೀಡುವುದಿಲ್ಲ. ಆದರೆ, ಸಂಘದ ಹಿರಿಯ ಪ್ರಚಾರಕರಾದ ದತ್ತೋಪಂತ್ ಠೇಂಗಡಿ ಅವರ ಸೇವೆಯನ್ನು ಸಂಘ ಎಂದಿಗೂ ಮರೆಯದು ಎಂದು ಕುಟುಂಬ ಪ್ರಬೋದನ್ ಮಾರ್ಗದರ್ಶಿ ಮಂಡಳಿಯ ಸದಸ್ಯ, ಸಂಘದ ಹಿರಿಯ ಪ್ರಚಾರಕ ಸು.ರಾಮಣ್ಣ ಅಭಿಪ್ರಾಯಪಟ್ಟರು.

ಮೈಸೂರು ಜೆಎಲ್‍ಬಿ ರಸ್ತೆಯ ಮಾಧವಕೃಪಾ ಸಭಾಂ ಗಣದಲ್ಲಿ ಸ್ವದೇಶಿ ಜಾಗರಣ ಮಂಚ್ ಮೈಸೂರು ಘಟಕದ ವತಿಯಿಂದ ಆಯೋಜಿಸಿದ್ದ `ರಾಷ್ಟ್ರಋಷಿ ದತ್ತೋಪಂತ್ ಠೇಂಗಡಿ ಜೀವನ ದರ್ಶನ’ ಕುರಿತು ಮಾತನಾಡಿದರು.

ದತ್ತೋಪಂತ್ ಠೇಂಗಡಿ ಪ್ರಖರ ಹಿಂದೂತ್ವವಾದಿ, ಭಾರತೀಯ ಕಾರ್ಮಿಕ ಸಂಘ, ಸ್ವದೇಶಿ ಜಾಗರಣ್ ಮಂಚ್, ಭಾರತೀಯ ಕಿಸಾನ್ ಸಂಘ, ಪರ್ಯಾವರಣ್ ಮಂಚ್, ಸಾಮಾಜಿಕ್ ಸಾಮರಸತಾ ಮಂಚ್, ಸರ್ವ ಪಂಥ್ ಸಮದಾರ್ ಮಂಚ್ ಗಳನ್ನು ಸ್ಥಾಪಿಸಿ, ಬೆಳೆಸಿದ ಕೀರ್ತಿ ಠೇಂಗಡಿ ಅವರಿಗೆ ಸಲ್ಲುತ್ತದೆ. ತಮ್ಮ ಜೀವಿತಾ ವಧಿಯಲ್ಲಿ ಸಂಘದ ಕೆಲಸಗಳಿಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು. ಅವರ ಸೇವೆಯನ್ನು ಸಂಘದ ಇಂದಿನ ಪೀಳಿಗೆ ಮರೆಯಬಾರದು ಎಂದರು.

ದತ್ತೋಪಂತ್ ಠೇಂಗಡಿ ಅವರು ಕಾನೂನು ವಿದ್ಯಾಭ್ಯಾಸ ಮುಗಿಸಿ, ಬಡವರ ಸೇವೆಗೆ ಮುಂದಾದರು. ನಂತರ ಹಿಂದೂ ಧರ್ಮದ ಸಂಘಟನೆಗಾಗಿ ತಮ್ಮ ಜೀವಿತಾ ವಧಿಯವರಿಗೂ ಸಂಘದ ಪ್ರಚಾಕರಾಗಿ ಸೇವೆ ಸಲ್ಲಿಸಿದ್ದರು. ಹೆಚ್‍ಎಸ್‍ಆರ್‍ಎನಲ್ಲಿ ಸದಸ್ಯರಾಗಿ, ಭಾರತ ರಾಷ್ಟ್ರೀಯ ಟ್ರೇಡ್ ಯೂನಿಯನ್‍ಗೆ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಇವರ ಮೇಲೆ ಆರ್‍ಎಸ್‍ಎಸ್‍ನ ಮಾಧವ್‍ರಾವ್ ಸದಾಶಿವರಾವ್ ಗೋಲ್ವಾಲ್ಕರ್ ಮತ್ತು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ್ ಅವರ ಆದರ್ಶ ಸಾಕಷ್ಟು ಪ್ರಭಾವ ಬೀರಿದ್ದವು ಎಂದರು.

ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿ ಸಾಮಾಜಿಕ, ಆರ್ಥಿಕ ರಾಜಕೀಯ ಅಂಶಗಳ ಮೇಲೆ ಅದ್ಭುತ ವಾಕ್ಚಾತುರ್ಯ ಹೊಂದಿದ್ದರು. ಇವರ ಮಾತಿಗೆ ಇತರೆ ಸದಸ್ಯರು ಮಂತ್ರ ಮುಗ್ಧರಾಗುತ್ತಿದ್ದ ಪ್ರಸಂಗವನ್ನು ವಿವರಿಸಿದರು. ಪಾಶ್ಚಿಮಾತ್ಯ ಆರ್ಥಿಕ ನೀತಿ, ಬಂಡವಾಳಶಾಹಿ ನೀತಿಗಳ ಬಗ್ಗೆ ಬೇಸರಗೊಂಡು, ಭಾರತೀಯ ಪರಂಪರೆ ಆಧಾರವಾಗಿ ಸಾಮಾಜಿಕ, ಆರ್ಥಿಕ ನೀತಿಗಳನ್ನು ರೂಪಿಸುವಂತೆ ಪ್ರತಿಪಾದನೆ ಮಾಡಿದ್ದ ಪ್ರಸಂಗವನ್ನು ವಿವರಿಸಿ ದರು. ಈ ವೇಳೆ ಆರ್‍ಎಸ್‍ಎಸ್ ಹಿರಿಯ ಮುಖಂಡ ಮಾ.ವೆಂಕಟರಾಮ್ ಇದ್ದರು.

Translate »