ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಟಿಪ್ಪು ಡ್ರಾಪ್ ಇಲ್ಲ
ಮೈಸೂರು

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಟಿಪ್ಪು ಡ್ರಾಪ್ ಇಲ್ಲ

February 11, 2020

ಮೈಸೂರು, ಫೆ.10(ಪಿಎಂ)- ಶಾಲಾ ಪಠ್ಯಕ್ರಮದಿಂದ ಟಿಪ್ಪು ಸುಲ್ತಾನ್ ಇತಿ ಹಾಸ ಕೈಬಿಡುವ ಸಂಬಂಧ ವಿಸ್ತøತ ಚರ್ಚೆ ಅಗತ್ಯವಿದೆ ಎಂದು ಪಠ್ಯ ಪುಸ್ತಕ ಪರಿ ಶೀಲನಾ ಸಮಿತಿ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಯಥಾಸ್ಥಿತಿ ಮುಂದುವರೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ತಿಳಿಸಿದರು.

ಮೈಸೂರಿನ ಮಾನಸಗಂಗೋತ್ರಿ ಆವ ರಣದಲ್ಲಿ ಸೋಮವಾರ ಮಾಧ್ಯಮದವ ರಿಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರತಿ ವರ್ಷ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ವನ್ನು ತಡವಾಗಿ ನೀಡಲಾಗುತ್ತಿತ್ತು. ಈ ಬಾರಿ ತರಗತಿ ಆರಂಭದ ದಿನವೇ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಆರ್. ಕೆ.ನಾರಾಯಣ್ ರಾಜ್ಯಸಭಾ ಸದಸ್ಯರಾ ಗಿದ್ದ ವೇಳೆ ಶಾಲಾ ಮಕ್ಕಳ ಬ್ಯಾಗಿನ ಹೊರೆ ಕಡಿಮೆ ಮಾಡಬೇಕು ಎಂಬ ವಾದ ಮಂಡಿಸಿದ್ದರು. ಅಂದಿ ನಿಂದಲೂ ಈ ಬಗ್ಗೆ ಚರ್ಚೆಗಳು ನಡೆಯು ತ್ತಲೇ ಇವೆ. ಹೀಗಾಗಿ ತಿಂಗಳಲ್ಲಿ 2 ದಿನ ಬ್ಯಾಗ್‍ಲೆಸ್ ಡೇ ಮಾಡ ಲಾಗು ವುದು ಎಂದರು.

ಇಡೀ ರಾಜ್ಯದಲ್ಲಿ ಎಸ್‍ಎಸ್ ಎಲ್‍ಸಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳ ವಡಿಸಲು ನಿರ್ಧರಿಸಲಾಗಿದೆ. ಅಲ್ಲದೆ, 10,500 ಶಿಕ್ಷಕ ನೇಮಕಾತಿ ಸಂಬಂಧ ಪ್ರಕ್ರಿಯೆ ನಡೆಯುತ್ತಿದೆ. ಹನೂರು ತಾಲೂ ಕಿನ ಕಾಡಂಚಿನ ಗ್ರಾಮವಾದ ಪಚ್ಚೇ ದೊಡ್ಡಿ ಸರ್ಕಾರಿ ಶಾಲೆಯಲ್ಲಿ ಇಂದು ವಾಸ್ತವ್ಯ ಹೂಡುತ್ತಿದ್ದು, ಆ ಶಾಲೆಗೆ ಮಕ್ಕಳು 10 ಕಿ.ಮೀ. ದೂರದಿಂದ ನಡೆದು ಕೊಂಡು ಬರುತ್ತಿದ್ದಾರೆ ಎಂದು ತಿಳಿ ಯಿತು. ಅಲ್ಲಿನ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಉದ್ದೇಶ ಹೊಂದಿದ್ದೇನೆ. ಶಾಲಾ ವಾಸ್ತವ್ಯ ಮಾಡುತ್ತಿರುವುದು ಇದೇ ಮೊದಲೇನಲ್ಲ. ನಾನು ಚಾಮರಾಜನಗರ ಜಿಲ್ಲಾ ಉಸ್ತುವಾರಿಯಾದ ಕಾರಣಕ್ಕೆ ಆ ಜಿಲ್ಲೆಗೆ ಮಾತ್ರವೇ ಶಾಲಾ ವಾಸ್ತವ್ಯ ಸೀಮಿತವಲ್ಲ ಎಂದು ಮಾಧ್ಯಮದವರ ಪ್ರಶ್ನೆಗಳಿಗೆ ಸಚಿವರು ಪ್ರತಿಕ್ರಿಯಿಸಿದರು.

ಮಕ್ಕಳ ಉಚ್ಛಾರಣೆ ತಪ್ಪುಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹಾಕುತ್ತಿರುವ ಪ್ರಕರಣಗಳ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಇದು ಕೆಲ ಶಿಕ್ಷಕರ ಮನಸ್ಥಿತಿಯ ಪ್ರಶ್ನೆ. `ಪಕ್ಕೇಲುಬು’ ತಪ್ಪು ಉಚ್ಛಾರಣೆ ವಿಡಿಯೋ ವೈರಲ್ ಮಾಡಿ ಅಮಾನತಿಗೆ ಒಳಗಾಗಿರುವ ಶಿಕ್ಷಕರು ನನ್ನ ಬಳಿ ಬಂದು ಅಮಾನತು ಹಿಂಪಡೆಯಲು ಮನವಿ ಮಾಡಿದರು. ಆಗ `ವಿಡಿಯೋ ಏಕೆ ಮಾಡಿದಿರಿ’ ಎಂದಾಗ `ಅವರ ಪೋಷಕ ರಿಗೆ ತೋರಿಸಲು’ ಎಂದರು. ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದೇಕೆ? ಎಂದು ಪ್ರಶ್ನಿಸಿದರೆ `ನನ್ನ 8 ವರ್ಷದ ಮಗ ಹಾಕಿದ್ದಾನೆ’ ಎಂದು ಉತ್ತರಿಸಿದರು. ಇದೊಂದು ಮನಸ್ಥಿತಿಯ ಪ್ರಶ್ನೆ. ಶಾಲಾ ಅವಧಿಯಲ್ಲಿ ಮೊಬೈಲ್ ಬಳಕೆ ಮಾಡ ದಂತೆ ಸೂಚನೆ ನೀಡಿದ್ದು, ಇಂತಹ ಪ್ರಕರಣ ಗಳಲ್ಲಿ ಮುಲಾಜಿಲ್ಲದೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Translate »