ಜ.8, 9 ಕಾರ್ಮಿಕ ಸಂಘಟನೆಗಳ ದೇಶವ್ಯಾಪಿ ಮುಷ್ಕರ
ಮೈಸೂರು

ಜ.8, 9 ಕಾರ್ಮಿಕ ಸಂಘಟನೆಗಳ ದೇಶವ್ಯಾಪಿ ಮುಷ್ಕರ

January 7, 2019

ಬೆಂಗಳೂರು: ಹೊಸ ವರ್ಷದ ಆರಂಭದಲ್ಲೇ ಜನಸಾಮಾನ್ಯರಿಗೆ ಬಂದ್ ಬಿಸಿ ತಟ್ಟಲಿದ್ದು, ಜ.8, 9ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಯಲಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾ ಯಿಸಿ ಜ.8, 9ರಂದು ಕಾರ್ಮಿಕ ಸಂಘ ಟನೆಗಳು ದೇಶವ್ಯಾಪಿ ಬಂದ್‍ಗೆ ಕರೆ ನೀಡಿದ್ದು, ಬೇಡಿಕೆ ಈಡೇರಿಕೆಗೆ ಆಗ್ರ ಹಿಸಿ ಸಾರಿಗೆ ನೌಕರರು ಸಿಡಿದೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಅಂದು ಕೆಎಸ್‍ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್‍ಗಳು ರಸ್ತೆಗಿಳಿಯುವುದಿಲ್ಲ. ಅಂದು ಆಟೋ, ಕ್ಯಾಬ್ ಕೂಡಾ ರಸ್ತೆಗೆ ಇಳಿಯುವು ದಿಲ್ಲ. ಆಸ್ಪತ್ರೆ, ಔಷಧಿ ಅಂಗಡಿ, ಆಂಬುಲೆನ್ಸ್ ಎಂದಿನಂತೆ ಇರಲಿದೆ.

ಬ್ಯಾಂಕ್ ಸೇವೆಯಲ್ಲೂ ವ್ಯತ್ಯಯ: ಇನ್ನು ಅದೇ ಜ.8 ಮತ್ತು 9ರಂದು ಬ್ಯಾಂಕಿಂಗ್ ಸೇವೆಯಲ್ಲೂ ವ್ಯತ್ಯಯ ವಾಗಲಿದ್ದು, ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ಆಲ್ ಇಂಡಿಯಾ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ಮತ್ತು ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಇಂಡಿಯಾ ಮುಷ್ಕರ ನಡೆಸುವುದಾಗಿ ಈಗಾಗಲೇ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (ಐಬಿಎ)ಗೆ ಮಾಹಿತಿ ನೀಡಿದೆ.

Translate »