ಬದಲಾದ ಜೀವನಶೈಲಿ, ಆಹಾರ   ಪದ್ಧತಿ ದೋಷದಿಂದ ಕ್ಯಾನ್ಸರ್
ಮೈಸೂರು

ಬದಲಾದ ಜೀವನಶೈಲಿ, ಆಹಾರ ಪದ್ಧತಿ ದೋಷದಿಂದ ಕ್ಯಾನ್ಸರ್

January 7, 2019

ಮೈಸೂರು: ಬದಲಾದ ಜೀವನಶೈಲಿ ಹಾಗೂ ಆಹಾರ ಪದ್ಧತಿ ಯಲ್ಲಿನ ದೋಷದಿಂದಾಗಿ ಕ್ಯಾನ್ಸರ್ ಹರಡು ತ್ತಿದ್ದು, ಸುಧಾರಣೆಯಾಗದಿದ್ದರೆ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ಬೆಂಗಳೂರಿನ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ವ್ಯವ ಸ್ಥಾಪಕ ನಿರ್ದೇಶಕ ಡಾ. ಬಿ.ಎಸ್. ಶ್ರೀನಾಥ್ ವಿಷಾದ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ಭಾನು ವಾರ ಮಾಜಿ ಸಚಿವ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ನಡೆದ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಾಗೂ ಜಾಗೃತಿ ಸಭೆ ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಸಮಾಜದಲ್ಲಿ ಕ್ಯಾನ್ಸರ್ ರೋಗಿ ಗಳ ಸಂಖ್ಯೆ ಕಡಿಮೆ ಇರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಕ್ಯಾನ್ಸರ್ ರೋಗಿ ಗಳು ಹೆಚ್ಚಾಗುತ್ತಿದ್ದಾರೆ. ಇದಕ್ಕೆ ಕಾರಣ ಬದಲಾದ ಜೀವನಶೈಲಿ ಹಾಗೂ ಆಹಾರ ಪದಾರ್ಥಗಳ ಸೇವನೆಯೇ ಆಗಿದೆ. ನಾವು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾಗ ಅಪ ರೂಪಕ್ಕೊಮ್ಮೆ ಸಿಗುತ್ತಿದ್ದ ಕ್ಯಾನ್ಸರ್ ರೋಗಿ ಗಳನ್ನು ಕರೆತಂದು ನಮ್ಮ ಮುಂದೆ ನಿಲ್ಲಿಸಿ ಕ್ಯಾನ್ಸರ್ ಬಗ್ಗೆ ನಮಗೆ ಮಾಹಿತಿ ನೀಡುತ್ತಿದ್ದರು. ನಂತರ ಅವರಿಗೆ ಒಂದು ತಿಂಗಳ ಮಟ್ಟಿಗೆ ಔಷಧ ಹಾಗೂ ಹಣ್ಣು-ಹಂಪಲುಗಳನ್ನು ಕಳುಹಿಸಲಾಗುತ್ತಿತ್ತು ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ವಿವಿಧ ಬಗೆಯ ಕ್ಯಾನ್ಸರ್‍ಗಳು ಕಾಣಿಸಿಕೊಳ್ಳುತ್ತಿದೆ. ಅಲ್ಲದೇ ದಿನದಿಂದ ದಿನಕ್ಕೆ ಕ್ಯಾನ್ಸರ್ ರೋಗಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ನಡುವೆ ಚಿಕಿತ್ಸಾ ವಿಧಾನದಲ್ಲಿಯೂ ಸಾಕಷ್ಟು ಪ್ರಗತಿ ಕಂಡಿದೆ. ಕಿಮೋ ಥೆರಪಿ, ರೇಡಿಯೇಷನ್, ಶಸ್ತ್ರ ಚಿಕಿತ್ಸೆ ಸೇರಿದಂತೆ ವಿವಿಧ ವಿಧಾನ ಗಳ ಮೂಲಕ ಚಿಕಿತ್ಸೆಯನ್ನು ನೀಡಲಾಗು ತ್ತಿದೆ. ಜನರು ಇನ್ನಾದರೂ ಎಚ್ಚೆತ್ತುಕೊಂಡು ಕ್ಯಾನ್ಸರ್ ಬರದಂತೆ ಜಾಗೃತಿ ವಹಿಸ ಬೇಕೆಂದು ಅವರು ಸಲಹೆ ನೀಡಿದರು.

ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ ಮುಂದಿನ 10 ವರ್ಷದಲ್ಲಿ ಕ್ಯಾನ್ಸರ್ ರೋಗಿ ಗಳ ಸಂಖ್ಯೆ ದುಪ್ಪಟ್ಟಾಗಲಿದೆ. ಇದರಿಂದ ಕಡಿವಾಣ ಹಾಕುವ ಅಗತ್ಯವಿದೆ. ಈ ಹಿನ್ನೆಲೆ ಯಲ್ಲಿ ಜನರು ವಿಟಮಿನ್ಸ್ ಇರುವ ಆಹಾರ, ಸೊಪ್ಪು, ನಾರು ಇರುವ ಆಹಾರ ಪದಾರ್ಥ ಗಳನ್ನು ಹೆಚ್ಚಾಗಿ ಸೇವಿಸಬೇಕು. ಗುಟ್ಕಾ ಸೇರಿ ದಂತೆ ಮಾದಕ ವಸ್ತುಗಳ ಸೇವನೆಯಿಂದ ಅಂತರ ಕಾಯ್ದುಕೊಳ್ಳಬೇಕು. ಸಿಗರೇಟು, ಬೀಡಿ ಹಾಗೂ ತಂಬಾಕು ಸೇವನೆಯನ್ನು ತ್ಯಜಿಸಬೇಕೆಂದು ಅವರು ಕರೆ ನೀಡಿದರು.

ಇದೇ ವೇಳೆ ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, `ಆರೋಗ್ಯ-ಮೈಸೂರು’ ಯೋಜನೆಯಡಿಯಲ್ಲಿ ಇಂದು ಎರಡನೇ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳ ಲಾಗಿದೆ. ಈ ಶಿಬಿರದಲ್ಲಿ 20 ಆಸ್ಪತ್ರೆಗಳ ಹಲವಾರು ವೈದ್ಯರುಗಳು ಪಾಲ್ಗೊಂಡಿದ್ದಾರೆ. ಸುಮಾರು 3300ಕ್ಕೂ ಹೆಚ್ಚು ಸಾರ್ವಜನಿ ಕರು ಆರೋಗ್ಯದಲ್ಲಿ ನೋಂದಣಿ ಮಾಡಿಸಿ ಕೊಂಡು ಆರೋಗ್ಯ ತಪಾಸಣೆಗೆ ಒಳಗಾಗಿ ದ್ದಾರೆ. ಇದರಲ್ಲಿ ಹೃದಯ ರೋಗ ಸಂಬಂಧಿ 250 ಜನರಿಗೆ, 100 ಜನರಿಗೆ ಚರ್ಮ ರೋಗ, 450 ಮಧುಮೇಹಿಗಳು, 70 ಮಂದಿ ಇಎನ್‍ಟಿ, 70 ಜನರಿಗೆ ಶಸ್ತ್ರ ಚಿಕಿತ್ಸೆ, 430 ಜನರಿಗೆ ಜನರಲ್ ಚೆಕ್‍ಅಪ್, 130 ಜನರಿಗೆ ಇಸಿಜಿ, 350 ಜನರಿಗೆ ರಕ್ತ ಪರೀಕ್ಷೆ, 130 ಜನರಿಗೆ ಆಯುರ್ವೇದ ಚಿಕಿತ್ಸೆ, 70 ಮಂದಿಗೆ ಇನ್ನಿತರೆ ಚಿಕಿತ್ಸೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಈ ಶಿಬಿರವನ್ನು ಮುಂದು ವರೆಸಲಾಗುವುದು. ಬೆಂಗಳೂರಿನ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆಯಿಂದ ತಜ್ಞ ವೈದ್ಯರು ಆಗ ಮಿಸಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಯಂತ್ರವುಳ್ಳ 7 ಕೋಟಿ ರೂ.

ಮೌಲ್ಯದ ಸಂಚಾರ ಪ್ರಯೋಗಾಲಯವನ್ನು ತಂದು ಸ್ಕ್ರೀನಿಂಗ್ ಮಾಡಲಾಗುತ್ತದೆ. ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ದಿ ವಾಕ್ (ವಾರ್ ಎಗೆನೆಸ್ಟ್ ಕ್ಯಾನ್ಸರ್) ಹೆಸರಿನಲ್ಲಿ ಈ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದು, 5 ವರ್ಷಗಳ ಕಾಲ ನಿರಂತರವಾಗಿ ಮುಂದು ವರೆಸುವುದಾಗಿ ತಿಳಿಸಿದರು. ಕಾರ್ಯಕ್ರಮ ದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಚ್.ವಿ. ರಾಜೀವ್, ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಮೈಸೂರು ಮತ್ತು ಚಾಮ ರಾಜನಗರ ಒಕ್ಕಲಿಗರ ಸಂಘದ ಅಧ್ಯಕ್ಷ ಮಹಲಿಂಗು, ಪಾಲಿಕೆ ಸದಸ್ಯ ಬಿ.ವಿ.ಮಂಜು ನಾಥ್, ಮಾಜಿ ಸದಸ್ಯೆ ಎ.ವಿ.ವಿದ್ಯಾ ಅರಸ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಆರೋಗ್ಯ ಶಿಬಿರದಲ್ಲಿ ಡಾ. ಲಕ್ಷ್ಮಿ, ಡಾ. ಶೀಥಲ್, ಡಾ. ಚಂದ್ರಶೇಖರ್, ಡಾ. ಕಾರ್ತೀಕ್ ಉಡುಪ, ಡಾ.ರವಿಕುಮಾರ್, ಡಾ. ಮೋಹನ್, ಡಾ.ಹರಿಣಿ ಶಂಕರ್, ಡಾ. ಷಡಕ್ಷರಸ್ವಾಮಿ, ಡಾ. ಜಾನ್ಹವಿ, ಡಾ. ಸುಬ್ಬರಾವ್ ಸೇರಿದಂತೆ ಇನ್ನಿತರ ರನ್ನು ಸನ್ಮಾನಿಸಲಾಯಿತು.

Translate »