ಜ್ಯೋತಿಷ್ಯದ ಬಗೆಗಿನ ತಪ್ಪು ತಿಳಿವಳಿಕೆ ನಿವಾರಿಸಿ
ಮೈಸೂರು

ಜ್ಯೋತಿಷ್ಯದ ಬಗೆಗಿನ ತಪ್ಪು ತಿಳಿವಳಿಕೆ ನಿವಾರಿಸಿ

January 7, 2019

ಮೈಸೂರು: ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಸಮಾಜದಲ್ಲಿರುವ ತಪ್ಪು ತಿಳಿವಳಿಕೆಯನ್ನು ನಿವಾರಿಸುವ ಮಹತ್ವದ ಜವಾಬ್ದಾರಿ ಜ್ಯೋತಿಷ್ಯ ವಲಯದ ಮೇಲಿದೆ ಎಂದು ಕರ್ನಾಟಕ ಸಂಸ್ಕøತ ವಿಶ್ವವಿದ್ಯಾನಿಲಯದ ಉಪಕುಲಸಚಿವ ಮತ್ತು ಹಣಕಾಸು ಅಧಿಕಾರಿ ವಿದ್ವಾನ್ ಪ್ರಕಾಶ್ ಪಾಗೋಜಿ ಹೇಳಿದರು.

ಮೈಸೂರಿನ ಮುಕ್ತ ವಿವಿಯ ಕಾವೇರಿ ಸಭಾಂಗಣದಲ್ಲಿ ಶ್ರೀ ಮಾಯಕಾರ ಗುರು ಕುಲ ಭಾನುವಾರ ಹಮ್ಮಿಕೊಂಡಿದ್ದ 2ನೇ ವೇದಾಂಗ ಜ್ಯೋತಿಷ್ಯ ಸಮ್ಮೇಳನ ಉದ್ಘಾ ಟಿಸಿದ ಅವರು, ಹುಟ್ಟಿನಿಂದ ಹಿಡಿದು ಸಾವಿನವರೆಗೆ ಜ್ಯೋತಿಷ್ಯಶಾಸ್ತ್ರ ಮನುಷ್ಯನ ಜೀವನದಲ್ಲಿ ಅಗಾಧ ಪರಿಣಾಮ ಬೀರ ಲಿದೆ. ಶಾಸ್ತ್ರದ ವಿಷಯ ಅರಿತು ನಡೆದರೆ, ಕಷ್ಟಗಳಿಗೆ ಪರಿಹಾರ ಮಾರ್ಗ ದೊರೆ ಯಲಿದೆ. ಸಂಸ್ಕೃತ ವಿವಿಯಿಂದ ಜ್ಯೋತಿಷ್ಯ ಶಾಸ್ತ್ರದಲ್ಲಿ 4 ಸಾವಿರ ಮಂದಿ ಪದವಿ ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಶ್ರೀರಂಗಪಟ್ಟಣದ ಶಾಶ್ವತಿ ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ಭಾನುಪ್ರಕಾಶ್ ಶರ್ಮ ಮಾತನಾಡಿ, ಸಮಸ್ಯೆಗಳು ಇದ್ದವರಷ್ಟೇ ಜ್ಯೋತಿಷಿಗಳ ಬಳಿಗೆ ಬರುತ್ತಾರೆ. ಶಾಸ್ತ್ರದ ಮೂಲಕ ಅವರಿಗೆ ಒಳಿತಾಗುವಂತೆ ಮಾಡು ವುದು ನಮ್ಮ ಕರ್ತವ್ಯ. ಜ್ಯೋತಿಷ್ಯಶಾಸ್ತ್ರದ ಬೆಳವಣಿಗೆಗೆ ಮೈಸೂರು ಮಹಾರಾಜರ ಕೊಡುಗೆ ಅಪಾರ ಎಂದರು. ಇಡೀ ದಿನ ನಡೆದ ಸಮ್ಮೇಳನದಲ್ಲಿ 100ಕ್ಕೂ ಹೆಚ್ಚು ಜ್ಯೋತಿಷಿಗಳು ಪಾಲ್ಗೊಂಡಿದ್ದರು. ಸುತ್ತೂರು ಶಿವರಾತ್ರೀಶ್ವರ ಪಂಚಾಂಗಕರ್ತರು ಕೆ.ವಿ. ಪುಟ್ಟಹೊನ್ನಯ್ಯ, ಶ್ರೀ ಮಾಯಕಾರ ಗುರುಕುಲ ಸಂಸ್ಥಾಪಕ ಮೂಗೂರು ಮಧು ದೀಕ್ಷಿತ್, ಕೆಎಸ್‍ಎಫ್‍ಎಎಐ ಪ್ರಧಾನ ಕಾರ್ಯ ದರ್ಶಿ ಬಿ.ಗಜೇಂದ್ರ ಮತ್ತಿತರರು ಹಾಜರಿದ್ದರು.

Translate »