ಜ.13ರಂದು ಮೈಸೂರಲ್ಲಿ ರಾಷ್ಟ್ರ ಮಟ್ಟದ ಶ್ವಾನ ಸ್ಪರ್ಧೆ
ಮೈಸೂರು

ಜ.13ರಂದು ಮೈಸೂರಲ್ಲಿ ರಾಷ್ಟ್ರ ಮಟ್ಟದ ಶ್ವಾನ ಸ್ಪರ್ಧೆ

January 7, 2019

ಮೈಸೂರು: ಕೆನೈನ್ ಕ್ಲಬ್ ಆಫ್ ಮೈಸೂರು ಆಶ್ರಯದಲ್ಲಿ ಜ.13 ರಂದು ರಾಷ್ಟ್ರ ಮಟ್ಟದ ಶ್ವಾನ ಸ್ಪರ್ಧೆ ಆಯೋಜಿಸಲಾಗಿದ್ದು, ದೇಶದ ವಿವಿಧ ಕಡೆಗಳಿಂದ ನಾನಾ ತಳಿಯ 300ಕ್ಕೂ ಹೆಚ್ಚು ಶ್ವಾನಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ ಎಂದು ಕೆನೈನ್ ಕ್ಲಬ್ ಆಫ್ ಮೈಸೂರು ಅಧ್ಯಕ್ಷ ಬಿ.ಪಿ.ಮಂಜುನಾಥ್ ಇಂದಿಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸ್ಪರ್ಧೆ ಕುರಿತ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಶ್ವಾನ ಸ್ಪರ್ಧೆಯ ವಿವರಗಳನ್ನು ನೀಡಿದರು. ಅಂದು ಬೆಳಿಗ್ಗೆ 9.30 ಗಂಟೆಗೆ ಮೈಸೂರು ಜಿಲ್ಲಾಧಿಕಾರಿ ಕಚೇರಿ ಹಿಂಭಾಗದ ಸ್ಕೌಟ್ಸ್ ಅಂಡ್ ಗೈಡ್ಸ್ ಆವರಣದಲ್ಲಿ ಸ್ಪರ್ಧೆಯ ಉದ್ಘಾಟನೆ ನೆರವೇರಲಿದೆ. ಜನಪ್ರತಿನಿಧಿಗಳು, ಗಣ್ಯರು, ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸಂಜೆ 4ರಿಂದ 7 ಗಂಟೆಯವರೆಗೆ ನಡೆಯುವ ಸ್ಪರ್ಧೆಯಲ್ಲಿ ಗೆಲ್ಲುವ ಶ್ವಾನಗಳಿಗೆ ಗ್ರೂಪ್ ವಿನ್ನರ್’ ಮತ್ತುಬೆಸ್ಟ್ ಇನ್ ಷೋ’ ಶ್ವಾನ ಟ್ರೋಫಿ ನೀಡಲಾಗುವುದು. ಗ್ರೂಪ್ ವಿನ್ನರ್ ಎಂದರೆ ಆಯಾ ತಳಿಗಳಿಂದ ಎರಡೆರಡು ಶ್ವಾನಗಳನ್ನು ಆರಿಸಲಾಗುವುದು. ಬೆಸ್ಟ್ ಇನ್ ಷೋ ಎಂದರೆ ಸ್ಪರ್ಧೆಗೆ ಬಂದ ಎಲ್ಲಾ ಶ್ವಾನಗಳಿಂದ 12 ಶ್ವಾನಗಳನ್ನು ಆಯ್ಕೆ ಮಾಡಿ ಎಲ್ಲಾ ಶ್ವಾನಗಳಿಗೂ ಟ್ರೋಫಿಗಳನ್ನು ವಿತರಿಸಲಾಗುತ್ತದೆ ಎಂದರು.

3 ಕೆಜಿ ತೂಕವಿರುವ ಮಿನಿಯೇಚರ್ ಪಿಂಚರ್‍ನಿಂದ 100 ಕೆ.ಜಿಗೂ ಹೆಚ್ಚು ತೂಕ ವಿರುವ ಸೇಂಟ್ ಬರ್ನಾಡ್, ಗ್ರೇಟ್ ಡೇನ್, ಭಾರತಕ್ಕೆ ಹೊಸದಾಗಿ ಬಂದಿರುವ ಹೊಸ ತಳಿಗಳಾದ ತಕಿಟಾ (ಜರ್ಮನಿ), ನ್ಯೂ ಫೌಂಡ್ ಲ್ಯಾಂಡ್ (ಫ್ರಾನ್ಸ್), ರಾಟ್ ವಿಲರ್, ಟಿಬೇಟಿಯನ್ ಮ್ಯಾsಸ್ಥಿಫ್, ನಿಯೋಫೋಲಿಟಿನ್ ಮ್ಯಾಸ್ಥಿಫ್, ಜರ್ಮನ್ ಷೆಫರ್ಡ್, ಲ್ಯಾಬ್ರಡಾರ್ ಡಾಗ್, ಗೋಲ್ಡನ್ ರಿಟ್ರೀವರ್, ಡಾಬರ್ ಮೆನ್, ಪಗ್, ಲ್ಯಾಸಾಪ್ಸ್, ಇಂಗ್ಲಿಷ್ ಮ್ಯಾಸ್ಥಿಫ್, ಕೆಡಮಾಮ್ ಹೀಗೆ ದೇಶದ ಎಲ್ಲಾ ಭಾಗಗಳಿಂದ ಶ್ವಾನಗಳು ಭಾಗವಹಿಸು ತ್ತಿವೆ. ಜೊತೆಗೆ ನಮ್ಮ ದೇಶದ ತಳಿಗಳಾದ ಮುಧೋಳ್, ರಾಜಪಾಳ್ಯಂ, ಚಿಪ್ಪಿಪರಿ, ಪಶ್ಮಿ, ಕನ್ನಿ, ಕ್ಯಾರವಾನ್ ಹೌಲ್ಡ್ ಮುಂತಾದ ಶ್ವಾನಗಳು ಪ್ರದರ್ಶನಗೊಳ್ಳುತ್ತಿವೆ. ನಮ್ಮ ದೇಶದ ತಳಿಗಳಿಗೆ ಯಾವುದೇ ಶುಲ್ಕ ಪಡೆಯದೇ ಪ್ರವೇಶ ನೀಡಲಾಗುತ್ತದೆ ಎಂದು ಹೇಳಿದರು.

ಈ ಬಾರಿ 14 ವರ್ಷದೊಳಗಿನ ಜೂನಿಯರ್ ಹ್ಯಾಂಡ್‍ಲರ್ ಕಾಂಪಿಟೇಶನ್‍ಗೆ ಬಹು ಮಾನ ಇರುತ್ತದೆ. ಅಲ್ಲದೆ ಇದೇ ಮೊದಲ ಬಾರಿಗೆ ವಿಶ್ವದಲ್ಲೇ ಅತಿ ಹೆಚ್ಚು ಪ್ರಸಿದ್ಧಿ ಪಡೆದಿ ರುವ ಭಾರತದ ದೊಡ್ಡ ಮೊತ್ತದ ಕೋರಿಯನ್ ದೋಸಾ ಮ್ಯಾಸ್ಥಿಫ್ ಮತ್ತು ಅಲಸ್ಕನ್ ಮ್ಯಾಲನ್‍ನ್ಯೂಟ್, ಲಯನ್‍ಹೆಡ್ ಟಿಬೇಟಿಯನ್ ಮ್ಯಾಸ್ಥಿಫ್ (ಇವು ಪ್ರಪಂಚದಲ್ಲಿ ಅತಿ ಹೆಚ್ಚು ಬೆಲೆಬಾಳುವ ಅಂದರೆ 18 ಕೋಟಿ) ಈ ತಳಿಗಳನ್ನು ಬೆಂಗಳೂರಿನ ಸೆಲೆಬ್ರಿಟಿ ಡಾಗ್ ಬ್ರೀಡರ್ ಸತೀಶ್ ಕೆಡಬಂಬ್ ಅವರು ಅಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 12ರವರೆಗೆ 1 ಗಂಟೆ ಕಾಲ ಪ್ರದರ್ಶನ ಮಾಡಲಿದ್ದಾರೆ. ಆದರೆ ಇವು ಸ್ಪರ್ಧೆಯಲ್ಲಿ ಭಾಗ ವಹಿಸುವುದಿಲ್ಲ ಎಂದರು. ಮಾಹಿತಿಗೆ ಬಿ.ಪಿ.ಮಂಜುನಾಥ್, ಮೊ- 9844079164, ಡಾ. ಸಂಜೀವಮೂರ್ತಿ, ಮೊ-9448054778 ಸಂಪರ್ಕಿಸಬಹುದು. ಗೋಷ್ಠಿಯಲ್ಲಿ ಕೆನೈನ್ ಕ್ಲಬ್ ಆಫ್ ಮೈಸೂರುವಿನ ಕಾರ್ಯದರ್ಶಿ ಡಾ.ಸಂಜೀವಮೂರ್ತಿ, ಜಂಟಿ ಕಾರ್ಯ ದರ್ಶಿ ಎಂ.ಹೆಚ್.ತೇಜಸ್ವಿ, ಸದಸ್ಯರಾದ ಡಾ.ಸಿ.ಎಸ್.ಅರುಣ್, ಹರ್ಷ ಉಪಸ್ಥಿತರಿದ್ದರು.

Translate »