ಮಾದಕ ವಸ್ತು ಬಳಕೆ, ಸಾಗಾಟದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜಾಥಾ
ಮೈಸೂರು

ಮಾದಕ ವಸ್ತು ಬಳಕೆ, ಸಾಗಾಟದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜಾಥಾ

June 27, 2019

ಮೈಸೂರು,ಜೂ.26(ವೈಡಿಎಸ್)- ಅಂತಾರಾಷ್ಟ್ರೀಯ ಮಾದಕ ವಸ್ತು ಬಳಕೆ ಮತ್ತು ಕಾನೂನು ಬಾಹಿರ ಕಳ್ಳ ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ಬುಧವಾರ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮ ಕುರಿತು ರೈಲ್ವೆ ನಿಲ್ದಾಣದಲ್ಲಿ ಜಾಥಾ ನಡೆಸಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.

ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗು ವುದನ್ನು ತಡೆಯುವ ನಿಟ್ಟಿನಲ್ಲಿ ಔಷಧ ನಿಯಂತ್ರಣ ಇಲಾಖೆ ಪ್ರಾದೇಶಿಕ ಕಚೇರಿ ಮೈಸೂರು, ರೈಲ್ವೆ ಭದ್ರತಾ ಕಚೇರಿ ಸಹ ಯೋಗದಲ್ಲಿ ನೂರಾರು ಮಂದಿ ಜೆಎಸ್‍ಎಸ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು, ವೈದ್ಯರು, ಔಷಧ ನಿಯಂತ್ರಣ ಇಲಾಖೆ ಸದಸ್ಯರು, ಭದ್ರತಾ ಸಿಬ್ಬಂದಿ ದುಶ್ಚಟಗಳಿಂದ ದೂರವಿರಿ, ಮಾದಕ ವ್ಯಸನ ಮೃತ್ಯುವಿಗೆ ಆಹ್ವಾನ, ಮತ್ತು ಬರುವ ಔಷಧಗಳ ಸೇವನೆ ಮಸಣಕ್ಕೆ ರವಾನೆ, ದುಶ್ಚÀ್ಚಟಗಳ ದಾಸ ರಾಗಬೇಡಿ, ಆರೋಗ್ಯಕ್ಕಾಗಿ ನ್ಯಾಯ-ನ್ಯಾಯ ಕ್ಕಾಗಿ ಆರೋಗ್ಯ ಮತ್ತಿತರೆ ಫಲಕವುಳ್ಳ ಬ್ಯಾನರ್ ಹಿಡಿದು ರೈಲ್ವೆ ನಿಲ್ದಾಣದಲ್ಲಿ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ನಂತರ ರೈಲ್ವೆ ನಿಲ್ದಾಣದಿಂದ ಕೆ.ಆರ್. ಆಸ್ಪತ್ರೆ ವೃತ್ತದವರೆಗೆ ಜಾಥಾ ನಡೆಸಿದರು.

ನಂತರ ಔಷಧ ನಿಯಂತ್ರಣ ಇಲಾಖೆ ವಲಯ 1ರ ಸಹಾಯಕ ಔಷಧ ನಿಯಂ ತ್ರಕ ಎಸ್.ನಾಗರಾಜು ಮಾತನಾಡಿ, ಪ್ರಸ್ತುತ ಯುವ ಸಮೂಹ ಹೆಚ್ಚು ಮಾದಕ ವ್ಯಸನಿ ಗಳಾಗುತ್ತಿದ್ದು, ಇದು ಸಮಾಜ ಮತ್ತು ದೇಶದ ಅಭಿವೃದ್ಧಿಗೆ ತೊಂದರೆಯಾಗಲಿದೆ. ಹಾಗಾಗಿ ಮಾದಕ ವಸ್ತುಗಳು ಯುವಕ ರಿಗೆ ಸುಲಭವಾಗಿ ದೊರೆಯದಂತೆ ತಡೆಗಟ್ಟು ವುದು ಔಷಧ ನಿಯಂತ್ರಣ ಇಲಾಖೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಮಾದಕ ವಸ್ತುಗಳ ಬಳಕೆಯಿಂದ ಸಮಾಜ, ಕುಟುಂಬ ಮತ್ತು ಮಾದಕ ವ್ಯಸನಿಗಳಿಗೆ ಯಾವ ರೀತಿ ತೊಂದರೆಯಾಗುತ್ತದೆ ಎಂಬುದರ ಕುರಿತು ಅರಿವು ಮೂಡಿಸಿ, ಮಾದಕ ವ್ಯಸನ ದಿಂದ ದೂರವಿರಿಸಲಾಗುತ್ತಿದೆ ಎಂದರು. ಜಾಥಾದಲ್ಲಿ ಔಷಧ ನಿಯಂತ್ರಣ ಇಲಾಖೆ ವಲಯ 2ರ ಸಹಾಯಕ ಔಷಧ ನಿಯಂ ತ್ರಕ ರಾದ ನಾಜಿಯಾ, ಮೈಸೂರಿನ ಹೆಸ ರಾಂತ ರಘುಲಾಲ್ ಅಂಡ್ ಕಂಪನಿ ಮಾಲೀಕ ರಾದ ರಾಘವನ್, ಔಷಧ ಪರಿವೀಕ್ಷಕ ರಾದ ಹರೀಶ್, ಆಶಾಲತಾ, ಖಾಲಿದ್, ರಮೇಶ್, ವಶೀಂ ಷರೀಫ್, ಭದ್ರೀಶ್, ನಾಗೇಶ್, ಜೆಎಸ್‍ಎಸ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು, ವೈದ್ಯರು ಪಾಲ್ಗೊಂಡಿದ್ದರು.

Translate »