ಪ್ರಧಾನಿ ಮೋದಿ ಹೆಸರಲ್ಲಿ ಮತ ಯಾಚಿಸುತ್ತಿರುವ ಜೆಡಿಯು ನಾಯಕ ನಿತೀಶ್‍ಕುಮಾರ್!
ಮೈಸೂರು

ಪ್ರಧಾನಿ ಮೋದಿ ಹೆಸರಲ್ಲಿ ಮತ ಯಾಚಿಸುತ್ತಿರುವ ಜೆಡಿಯು ನಾಯಕ ನಿತೀಶ್‍ಕುಮಾರ್!

May 13, 2019

ಪಾಟ್ನಾ: ಈಗ ನಡೆಯು ತ್ತಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ತಮ್ಮ ಹೆಸರಿನ ಬದಲಾಗಿ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಮತ ಯಾಚಿಸುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಜೆಡಿಯು ನಾಯಕ ಬಿಹಾರ ಮುಖ್ಯ ಮಂತ್ರಿ ನಿತೀಶ್ ಕುಮಾರ್ ಅವರು ಪ್ರಧಾನಿ ಮೋದಿ ಹೆಸರಿನಲ್ಲಿ ಮತ ಯಾಚನೆ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಚುನಾವಣಾ ಭಾಷಣಗಳಲ್ಲಿ ನಿತೀಶ್ ಕುಮಾರ್ ಅವರು, ಪ್ರಧಾನಿ ಮೋದಿ ಬಗ್ಗೆ ಹೊಗಳಿಕೆಯ ಸುರಿಮಳೆಗೈಯ್ಯು ತ್ತಿದ್ದಾರೆ. ಪ್ರತಿ ಭಾಷಣದಲ್ಲೂ ಪಾಕಿ ಸ್ತಾನದ ಮೇಲೆ ನಡೆದ ಸರ್ಜಿಕಲ್ ಸ್ಟ್ರೈಕ್‍ಅನ್ನು ಅವರು ಉಲ್ಲೇಖಿಸುತ್ತಿ ದ್ದಾರೆ. ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿ, ಮೋದಿಯವರು ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸಿದ್ದಾರೆ ಎಂದು ನಿತೀಶ್‍ಕುಮಾರ್ ತಮ್ಮ ಭಾಷಣಗಳಲ್ಲಿ ಹೇಳುತ್ತಿದ್ದಾರೆ. ಪ್ರಧಾನಿ ಮೋದಿ ಅವರ ಕೆಲಸಗಳನ್ನು ಹೋದಲ್ಲೆಲ್ಲಾ ಕೊಂಡಾಡುತ್ತಿರುವ ನಿತೀಶ್ ಕುಮಾರ್, ತಮ್ಮ ಹೆಸರಲ್ಲಿ ಮತಯಾಚನೆ ಮಾಡದೆ ಪ್ರಧಾನಿ ಮೋದಿ ಹೆಸರಲ್ಲಿ ಮತಯಾಚಿಸುತ್ತಿದ್ದಾರೆ ಎಂದು ಪಾಟ್ನಾ ರಾಜಕೀಯ ವಿಶ್ಲೇಷಕ ಅಮಿತ್‍ಕುಮಾರ್ ಹೇಳಿದ್ದಾರೆ.

Translate »