ಮೈಸೂರು ಪಾಲಿಕೆ, ಮೈಸೂರು ಮೆಡಿಕಲ್ ಕಾಲೇಜಿನಿಂದ ಜೆಕೆ ಮೈದಾನ ಸ್ವಚ್ಛತೆ
ಮೈಸೂರು

ಮೈಸೂರು ಪಾಲಿಕೆ, ಮೈಸೂರು ಮೆಡಿಕಲ್ ಕಾಲೇಜಿನಿಂದ ಜೆಕೆ ಮೈದಾನ ಸ್ವಚ್ಛತೆ

February 3, 2019

ಮೈಸೂರು: ಮೈಸೂ ರಿನ ಹೃದಯ ಭಾಗ ಜೆ.ಕೆ.ಮೈದಾನದಲ್ಲಿ ಬೆಳೆದು ನಿಂತಿದ್ಧ ಗಿಡಗಂಟಿಗಳು ಹಾಗೂ ರಾಶಿ ಬಿದ್ದಿದ್ದ ಕಟ್ಟಡ ಹಾಗೂ ಇತರ ತ್ಯಾಜ್ಯವನ್ನು ಇಂದು ತೆರವುಗೊಳಿಸಿ ಸ್ವಚ್ಛ ಮಾಡಲಾಯಿತು. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಎಂಎಂಸಿ ಅಂಡ್ ಆರ್‍ಐ) ಹಾಗೂ ಮೈಸೂರು ಮಹಾನಗರ ಪಾಲಿಕೆ ಸಂಯು ಕ್ತಾಶ್ರಯದಲ್ಲಿ ಸ್ವಚ್ಛ ಭಾರತ ಅಭಿಯಾನ ದಡಿ ಕೈಗೊಂಡಿದ್ಧ ಸ್ವಚ್ಛತಾ ಕಾರ್ಯದಲ್ಲಿ ಜೆಸಿಬಿ, ಲಾರಿಗಳನ್ನು ಬಳಸಿ ತ್ಯಾಜ್ಯಗಳನ್ನು ತೆರವುಗೊಳಿಸಲಾಯಿತು.

ಮೈಸೂರು ಮೆಡಿಕಲ್ ಕಾಲೇಜು ವಿದ್ಯಾರ್ಥಿ ಗಳು ಪ್ರಾಧ್ಯಾಪಕರು ಹಾಗೂ ಕೆ.ಆರ್. ಆಸ್ಪತ್ರೆ ನರ್ಸಿಂಗ್ ಕಾಲೇಜು ವಿದ್ಯಾರ್ಥಿ ಗಳು ಸಿಬ್ಬಂದಿ ಇಂದು ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆವರೆಗೆ ಗಿಡಗಂಟಿ ತೆರವು ಗೊಳಿಸಿ, ಜೆ.ಕೆ.ಮೈದಾನವನ್ನು ಸ್ವಚ್ಛಗೊಳಿ ಸಲು ನೆರವಾದರು. ಶಾಸಕ ಎಲ್.ನಾಗೇಂದ್ರ, ಮೈಸೂರು ಮೆಡಿಕಲ್ ಕಾಲೇಜು ಡೀನ್ ಅಂಡ್ ಡೈರೆಕ್ಟರ್ ಡಾ.ವಿ.ಸಿ.ನಂಜರಾಜ್, ಮುಖ್ಯ ಆಡಳಿತಾಧಿಕಾರಿ ಕೆ.ಎಂ.ಗಾಯಿತ್ರಿ, ಮೈಸೂರು ಮಹಾನಗರಪಾಲಿಕೆ ಕಮೀ ಷ್ನರ್ ಕೆ.ಹೆಚ್.ಜಗದೀಶ್, ಆರೋಗ್ಯಾಧಿಕಾರಿ ಡಾ.ನಾಗರಾಜ್, ಕೆ.ಆರ್.ಆಸ್ಪತ್ರೆ ವೈದ್ಯ ಕೀಯ ಅಧೀಕ್ಷಕ ಡಾ.ಶ್ರೀನಿವಾಸ, ಸ್ಥಾನಿಕ ವೈದ್ಯಾಧಿಕಾರಿ ಡಾ.ರಾಜೇಶ, ಚೆಲು ವಾಂಬ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾ.ರಾಧಾಮಣಿ ಸೇರಿದಂತೆ ಪಾಲಿಕೆ ಹಾಗೂ ಮೆಡಿಕಲ್ ಕಾಲೇಜು ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Translate »