ಮನೆಗೆ ನುಗ್ಗಿ ಲಕ್ಷಾಂತರ ರೂ. ಚಿನ್ನಾಭರಣ, ನಗದು ಕಳವು
ಮೈಸೂರು

ಮನೆಗೆ ನುಗ್ಗಿ ಲಕ್ಷಾಂತರ ರೂ. ಚಿನ್ನಾಭರಣ, ನಗದು ಕಳವು

February 3, 2019

ಮೈಸೂರು: ರಾತ್ರಿ ವೇಳೆ ಕಿಟಕಿ ಮೂಲಕ ಬಾಗಿಲ ಬೋಲ್ಟ್ ತೆಗೆದು ಒಳ ನುಗ್ಗಿರುವ ಕಳ್ಳರು ಬ್ಯಾಗ್‍ನಲ್ಲಿ ಟ್ಟಿದ್ದ 64 ಗ್ರಾಂ ತೂಕದ ಚಿನ್ನಾಭರಣ ಹಾಗೂ 10 ಸಾವಿರ ನಗದು ಕಳವು ಮಾಡಿ ರುವ ಘಟನೆ ಶಕ್ತಿನಗರದಲ್ಲಿ ನಡೆದಿದೆ. ಮೈಸೂರಿನ ಶಕ್ತಿನಗರ ನಿವಾಸಿ ಚಂದ್ರಶೇಖರ್ ಅವರ ಮನೆಯಲ್ಲಿ ಕಳ್ಳತನವಾಗಿರುವುದು. ಜ.31ರಂದು ರಾತ್ರಿ ಚಂದ್ರಶೇಖರ್ ಮಲಗುವ ಮುನ್ನ ತಮ್ಮ ಬಳಿಯಿದ್ದ ಒಡವೆ ಮತ್ತು ನಗದನ್ನು ಒಂದು ಬ್ಯಾಗ್‍ನಲ್ಲಿ ಹಾಕಿ ಕಾಟ್ ಮೇಲಿಟ್ಟು ಮಲಗಿದ್ದಾರೆ. ಪುನಃ ಬೆಳಗಿನ ಜಾವ ಚಂದ್ರಶೇಖರ್ ಅವರ ಪತ್ನಿ ಎದ್ದು ಮನೆ ಹೊರಗಡೆ ನೋಡಿದಾಗ ಚಿನ್ನಾಭರಣ ಮತ್ತು ನಗದು ಇಟ್ಟಿದ್ದ ಬ್ಯಾಗ್ ಹೊರಗಡೆ ಖಾಲಿ ಬಿದ್ದಿರುವುದು ಗಮನಕ್ಕೆ ಬಂದಿದೆ. ಇದನ್ನು ಪರಿಶೀಲಿಸಿದಾಗ ಬ್ಯಾಗ್‍ನಲ್ಲಿಟ್ಟಿದ್ದ ಚಿನ್ನಾಭರಣ, ನಗದನ್ನು ಕಳವು ಮಾಡಿ ರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »