ಪಿ.ಚಿದಂಬರಂ ಜಾಮೀನು ಅರ್ಜಿ ತಿರಸ್ಕರಿಸಿದ್ದ ನ್ಯಾಯಾಧೀಶರಿಗೆ ನ್ಯಾಯಮಂಡಳಿ ಅಧ್ಯಕ್ಷ ಸ್ಥಾನ!
ಮೈಸೂರು

ಪಿ.ಚಿದಂಬರಂ ಜಾಮೀನು ಅರ್ಜಿ ತಿರಸ್ಕರಿಸಿದ್ದ ನ್ಯಾಯಾಧೀಶರಿಗೆ ನ್ಯಾಯಮಂಡಳಿ ಅಧ್ಯಕ್ಷ ಸ್ಥಾನ!

August 29, 2019

ನವದೆಹಲಿ, ಆ.28- ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐ ತನಿಖೆ ಎದುರಿಸು ತ್ತಿರುವ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದ ದೆಹಲಿ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಸುನಿಲ್ ಗೌರ್ ಅವರನ್ನು ನ್ಯಾಯಮಂಡಳಿ ಅಧ್ಯಕ್ಷ ರನ್ನಾಗಿ ಆಯ್ಕೆ ಮಾಡಲಾಗಿದೆ. ದೆಹಲಿ ಹೈಕೋರ್ಟ್ ನ್ಯಾಯಾಧೀಶ ಸುನಿಲ್ ಗೌರ್ ಅವರು ಪಿಎಂಎಲ್‍ಎನ್ ಟ್ರಿಬ್ಯೂನಲ್ ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಚಿದಂಬರಂ ಅರ್ಜಿ ತಿರಸ್ಕರಿಸಿದ ಎರಡೇ ದಿನದಲ್ಲಿ ಅಂದರೆ, ಆಗಸ್ಟ್ 23 ರಂದು ಸುನಿಲ್ ಗೌರ್ ಅವರು ನಿವೃತ್ತರಾದರು.

ಈ ಹಿಂದೆ ನ್ಯಾಯಮೂರ್ತಿ ಸುನಿಲ್ ಗೌರ್ ಹಲವಾರು ಉನ್ನತ ಪ್ರಕರಣಗಳ ವಿಚಾರಣೆ ನಡೆಸಿದ್ದರು. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್‍ನ ಉನ್ನತ ನಾಯಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅವರು ಡೆಕ್‍ಗಳನ್ನು ತೆರವುಗೊಳಿಸುವ ಆದೇಶವನ್ನೂ ನೀಡಿದ್ದರು. ಅಗಸ್ಟಾ ವೆಸ್ಟ್‍ಲ್ಯಾಂಡ್ ಚಾಪರ್ ಹಗರಣದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರ ಸೋದರಳಿಯ ಉದ್ಯಮಿ ರತುಲ್ ಪುರಿಗೆ ಕಳೆದ ವಾರ ಅವರು ಜಾಮೀನು ನಿರಾಕರಿಸಿದ್ದರು.

 

Translate »