ಕೆ.ವೆಂಕಟೇಶ್ 5.65, ಕೆ.ಮಹದೇವ್ 4.57, ಎಸ್.ಮಂಜುನಾಥ್ 7.84 ಕೋಟಿ ಆಸ್ತಿ ಒಡೆಯರು
ಮೈಸೂರು

ಕೆ.ವೆಂಕಟೇಶ್ 5.65, ಕೆ.ಮಹದೇವ್ 4.57, ಎಸ್.ಮಂಜುನಾಥ್ 7.84 ಕೋಟಿ ಆಸ್ತಿ ಒಡೆಯರು

April 25, 2018

ಪಿರಿಯಾಪಟ್ಟಣ: ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಕೆ.ವೆಂಕಟೇಶ್ ಒಟ್ಟು ರೂ. 5.64 ಕೋಟಿ ಮೌಲ್ಯದ ಆಸ್ತಿ ಒಡೆಯರಾಗಿದ್ದಾರೆ.

ನಾಮಪತ್ರದೊಂದಿಗೆ ಸಲ್ಲಿಸಿರುವ ಆಸ್ತಿ ವಿವರದಲ್ಲಿ ಕೈಯಲ್ಲಿ ನಗದು ರೂ. 89 ಸಾವಿರ ಹೊಂದಿದ್ದು, ಚರಾಸ್ತಿ 1.23 ಕೋಟಿ ಮೌಲ್ಯದ್ದಾಗಿದ್ದು, ಇದರಲ್ಲಿ 22 ಮೌಲ್ಯದ ಟೊಯೋಟಾ ಫಾಚ್ಯೂನರ್ ಕಾರು, 6 ಲಕ್ಷ ಮೌಲ್ಯದ ಟ್ರಾಕ್ಟರ್ ಇರುವುದಾಗಿ ವಿವರ ನೀಡಿದ್ದಾರೆ. ರೂ. 4.40 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ತಮ್ಮ ಬಳಿ 150 ಗ್ರಾಂ ಚಿನ್ನ ಹಾಗೂ ಪತ್ನಿ ಬಳಿ 500 ಗ್ರಾಂ ಚಿನ್ನ, ಮಗ ನಿತಿನ್ ಬಳಿ 150 ಗ್ರಾಂ ಮತ್ತು ಸೊಸೆ 150 ಗ್ರಾಂ ಚಿನ್ನ ಹೊಂದಿರುವುದಾಗಿ ವಿವರ ನೀಡಿದ್ದಾರೆ. ಈ ಆಸ್ತಿಯಲ್ಲಿ ತಮ್ಮ ಹೆಂಡತಿ ಮತ್ತು ಮಗ ಹಾಗೂ ಸೊಸೆ ಹೆಸರಿನಲ್ಲಿ ಹೊಂದಿರುವ ಒಟ್ಟು ಕುಟುಂಬದ ಆಸ್ತಿಯ ವಿವರ ಮತ್ತು ಮೌಲ್ಯವನ್ನು ವಿವರಿಸಲಾಗಿದೆ

ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಕೆ.ಮಹದೇವ್ ಒಟ್ಟು ರೂ. 4.57 ಕೋಟಿ ಮೌಲ್ಯದ ಆಸ್ತಿ ಒಡೆಯರಾಗಿದ್ದಾರೆ. ನಾಮಪತ್ರದೊಂದಿಗೆ ಸಲ್ಲಿಸಿರುವ ಆಸ್ತಿ ವಿವರದಲ್ಲಿ ಚರಾಸ್ತಿ 1.27 ಕೋಟಿ ಮೌಲ್ಯದ್ದಾಗಿದ್ದು, ರೂ.3.29 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ತಮ್ಮ ಬಳಿ 200 ಗ್ರಾಂ ಚಿನ್ನ ಹಾಗೂ ಪತ್ನಿ ಬಳಿ 500 ಗ್ರಾಂ ಚಿನ್ನ ಹೊಂದಿರುವುದಾಗಿ ವಿವರ ನೀಡಿದ್ದಾರೆ. ಈ ಆಸ್ತಿಯಲ್ಲಿ ತಮ್ಮ ಹೆಂಡತಿ ಮತ್ತು ಇಬ್ಬರು ಮಕ್ಕಳು ಹೆಸರಿನಲ್ಲಿ ಹೊಂದಿರುವ ಆಸ್ತಿಯ ವಿವರ ಮತ್ತು ಮೌಲ್ಯವನ್ನು ಸಹ ವಿವರಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಎಸ್.ಮಂಜುನಾಥ್ 7.84 ಕೋಟಿ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಅವರು ಚುನಾವಣಾಧಿಕಾರಿಗೆ ಸಲ್ಲಿಸಿರುವ ಅಸ್ತಿ ವಿವರದ ಪ್ರಮಾಣ ಪತ್ರದಲ್ಲಿ ಸ್ಥಿರಾಸ್ತಿ 7.75 ಕೋಟಿ ಹೊಂದಿರುವುದಾಗಿ ತಿಳಿಸಿದ್ದು ಚರಾಸ್ತಿ ರೂ.9.5 ಲಕ್ಷವಿರುವುದಾಗಿ ಘೋಷಿಸಿಕೊಂಡಿದ್ದಾರೆ. ನಗದು ಕೇವಲ 20 ಸಾವಿರವಿದ್ದು ಚಿನ್ನಾಭರಣ 250 ಗ್ರಾಂ ಮತ್ತು ಬೆಳ್ಳಿ 5 ಕೆ.ಜಿ ಇರುವುದಾಗಿ ತಿಳಿಸಿದ್ದಾರೆ. ಇವರು ಅವಿವಾಹಿತರಾಗಿದ್ದು ಅವಲಂಬಿತರಾಗಿ ಯಾರೂ ಇಲ್ಲ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಪಿ.ಎಂ.ಪ್ರಸನ್ನ: ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಮಹದೇವ್ ಪುತ್ರ ಪಿ.ಎಂ.ಪ್ರಸನ್ನ ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದು ರೂ.1.71 ಕೋಟಿ ಆಸ್ತಿ ಒಡೆಯ ಎಂದು ಘೋಷಿಸಿದ್ದಾರೆ. ಇದರಲ್ಲಿ ಸ್ತಿರಾಸ್ತಿ 1.30 ಕೋಟಿ ಚರಾಸ್ತಿ ರೂ.41 ಲಕ್ಷ ಎಂದು ಪ್ರಮಾಣ ೀಕರಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿ ಶ್ರೀನಿವಾಸ್ ಯಾವುದೇ ಆಸ್ತಿ ಹೊಂದಿಲ್ಲ ಎಂದು ಘೋಷಿಸಿ ಕೊಂಡಿದ್ದಾರೆ. ಭಾರತೀಯ ರಿಪಬ್ಲಿಕನ್ ಪಾರ್ಟಿ ಅಭ್ಯರ್ಥಿ ಎಚ್.ಪಿ.ದೇವರಾಜು ಒಟ್ಟು ರೂ. 39.25 ಲಕ್ಷ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

Translate »