ರೈತರ ಸಮಸ್ಯೆಗೆ ಸ್ಪಂದಿಸದ ಮಹದೇವಪ್ಪಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ : ಜೆಡಿಎಸ್ ಅಭ್ಯರ್ಥಿ ಅಶ್ವಿನ್‍ಕುಮಾರ್
ಮೈಸೂರು

ರೈತರ ಸಮಸ್ಯೆಗೆ ಸ್ಪಂದಿಸದ ಮಹದೇವಪ್ಪಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ : ಜೆಡಿಎಸ್ ಅಭ್ಯರ್ಥಿ ಅಶ್ವಿನ್‍ಕುಮಾರ್

April 25, 2018

ತಿ.ನರಸೀಪುರ: ಕ್ಷೇತ್ರದಲ್ಲಿನ ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲರಾಗಿರುವ ಸಚಿವ ಡಾ. ಎಚ್.ಸಿ. ಮಹದೇವಪ್ಪನವರಿಗೆ ಈ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಎಂ. ಅಶ್ವಿನ್‍ಕುಮಾರ್ ಹೇಳಿದರು.

ತಾಲೂಕಿನ ತಲಕಾಡು ಹೋಬಳಿಯ ಮಡವಾಡಿ, ಮೇದಿನಿ, ಕಾವೇರಿಪುರ ಗ್ರಾಮಗಳಲ್ಲಿ ಮತ ಯಾಚಿಸಿ ಮತನಾಡಿದ ಅವರು, ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಬರಗಾ¯ ಆವರಿಸಿದ ಪರಿಣಾಮ ಅನ್ನದಾತರು ತಾವು ಬೇಸಾಯಕ್ಕೆ ಪಡೆದ ಸಾಲವನ್ನು ಮರುಪಾವತಿಸಲು ಸಾಧ್ಯವಿಲ್ಲದೆ ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. ಇನ್ನು ಕೆಲವರು ಗ್ರಾಮಗಳನ್ನು ತೊರೆದು ಪಟ್ಟಣದತ್ತ ವಲಸೆ ಹೋಗುತ್ತಿದ್ದಾರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರ ನೆರವಿಗೆ ಬಾರದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳನ್ನು ಮತದಾರರು ಗಣನೆಗೆ ತೆಗೆದುಕೊಳ್ಳದೆ, ರೈತರ ಸಾಲದಿಂದ ಋಣ ಮುಕ್ತರನ್ನಾಗಿ ಮಾಡಲು ಸಿದ್ಧನಿದ್ದೇನೆ ಎಂದು ಹೇಳುತ್ತಿರುವ ಎಚ್.ಡಿ.ಕುಮಾರಸ್ವಾಮಿಯವರನ್ನು ಬೆಂಬಲಿಸುವಂತೆ ಮನವಿ ಮಾಡಿದರು. ರೈತರ ಜಮೀನು ಗಳನ್ನು ಪಾಳು ಬೀಳಿಸಿದ ಮಹದೇವಪ್ಪ ಅವರನ್ನು ತಿ.ನರಸೀಪುರ ಕ್ಷೇತ್ರದ ಮತದಾರರು ಈ ಬಾರಿ ಮನೆಗೆ ಕಳುಹಿಸಲು ನಿರ್ಧರಿಸಿದ್ದಾರೆ. ಈ ಕ್ಷೇತ್ರ ಕಾಂಗ್ರೆಸ್ ಪಕ್ಷದಿಂದ ಮುಕ್ತಿ ಪಡೆಯಲಿದೆ.

ಈ ವೇಳೆ ಕಲಿಯೂರು ಹಾಗೂ ಟಿ.ದೊಡ್ಡಪುರ ಗ್ರಾಮದ ಎಪಿಎಂಸಿ ಸದಸ್ಯ ಬಸವರಾಜು, ತಾಪಂ ಮಾಜಿ ಸದಸ್ಯ ರಾಜಣ್ಣ, ಮಲ್ಲಿಕಾರ್ಜುನ ಮಾದಪ್ಪ, ಪುಟ್ಟಮಾದೇಗೌಡ, ಮೋಹನ್, ಶಿವಣ್ಣ, ಬೀರೇಶ್ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಸಿದ್ಧಾರ್ಥ, ಕ್ಷೇತ್ರಾಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ, ಬೂದಹಳ್ಳಿ ಸಿದ್ದರಾಜು, ತಲಕಾಡು ಹೋಬಳಿ ಅಧ್ಯಕ್ಷ ಸುಂದರನಾಯ್ಕ, ಎಸ್‍ಟಿ ಘಟಕದ ಅಧ್ಯಕ್ಷ ಗಾಡಿ ಮಹದೇವ, ಮಾವಿನಹಳ್ಳಿ ರಾಜೇಶ್, ಇಂದ್ರೇಶ್, ಡೈರಿ ಅಧ್ಯಕ್ಷ ಕುಮಾರಸ್ವಾಮಿ, ಗ್ರಾಪಂ ಸದಸ್ಯ ರವಿ, ಶಂಭುದೇವನಪುರ ರಮೇಶ್, ಗ್ರಾಪಂ ಮಾಜಿ ಅಧ್ಯಕ್ಷ ನಾಗೇಂದ್ರ, ಟೌನ್ ಅಧ್ಯಕ್ಷೆ ರಾಜೇಶ್ವರಿ, ಯಶೋದ ಮತ್ತಿತರರು ಇದ್ದರು.

Translate »