ಮೈಸೂರು

ಅನಿವಾಸಿ ಭಾರತೀಯ ಕಲಾವಿದರಿಂದ ಕರ್ನಾಟಕ ಸಂಗೀತ, ನೃತ್ಯ ಪ್ರದರ್ಶನ

December 27, 2018

ಮೈಸೂರು: ಭಾರ ತೀಯ ವಿದ್ಯಾ ಭವನದ ವತಿಯಿಂದ ಡಿ.29 ರಂದು ಸಂಜೆ 6 ಗಂಟೆಗೆ ಮೈಸೂರಿನ ಶಾರದಾವಿಲಾಸ ಶತಮಾನೋತ್ಸವ ಭವನ ದಲ್ಲಿ ಅನಿವಾಸಿ ಭಾರತೀಯ ಕಲಾವಿದ ರಿಂದ `ಕಲಾ ದರ್ಪಣ’ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಎ.ಟಿ.ಭಾಷ್ಯಂ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಕಾರ್ಯ ಕ್ರಮದ ವಿವರಗಳನ್ನು ನೀಡಿದ ಅವರು, ಭಾರತೀಯ ವಿದ್ಯಾ ಭವನವು ದೇಶ ವಿದೇಶ ಗಳಲ್ಲಿ ಶಾಖೆಗಳನ್ನು ಹೊಂದಿದ್ದು, ದೇಶದ ಕಲೆಯನ್ನು ಲಂಡನ್‍ನಲ್ಲಿ ಅಭ್ಯಸಿಸಿರುವ ಅನಿವಾಸಿ ಭಾರತೀಯ ಕಲಾವಿದರು ವಿಶೇಷ ವಾಗಿ ಭಾರತೀಯ ಶಾಸ್ತ್ರೀಯ ಸಂಸ್ಕøತಿ ಕಲೆಗಳನ್ನು ಪ್ರಸ್ತುತಪಡಿಸಲಿದ್ದಾರೆ ಎಂದರು.

ಅಂದಿನ ಕಾರ್ಯಕ್ರಮದಲ್ಲಿ ಭಾರತೀಯ ವಿದ್ಯಾಭವನ (ಬಿಬಿಬಿ)ದ ಮೈಸೂರು ಅಧ್ಯಕ್ಷ ಡಾ.ಎ.ವಿ.ನರಸಿಂಹಮೂರ್ತಿ ಅಧ್ಯಕ್ಷತೆ ವಹಿ ಸುವರು. ಉಪಾಧ್ಯಕ್ಷರೂ ಆಗಿರುವ `ಮೈಸೂರು ಮಿತ್ರ’ ಮತ್ತು ಸ್ಟಾರ್ ಆಫ್ ಮೈಸೂರ್ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ, ಬೆಂಗ ಳೂರು ಕೇಂದ್ರದ ಅಧ್ಯಕ್ಷ ಎನ್.ರಾಮಾ ನುಜ, ಬಿವಿಬಿ ಲಂಡನ್ ಕೇಂದ್ರದ ಕಾರ್ಯ ಕಾರಿ ನಿರ್ದೇಶಕ ಡಾ.ಎಂ.ಎನ್.ನಂದ ಕುಮಾರ್ ಭಾಗವಹಿಸಲಿದ್ದಾರೆ ಎಂದರು.
ನಂತರ ಅನಿವಾಸಿ ಭಾರತೀಯ ಕಲಾ ವಿದರಾದ ಅಕ್ಷಯ್ ಪ್ರಕಾಶ್, ಶಿವಾಂಗಿ ಚಂದ್ರಶೇಖರ್, ಲಕ್ಷ್ಮಿ ಕುಹೇಂದ್ರನ್‍ರಿಂದ ಭರತನಾಟ್ಯ, ದಿಯಾ ಅರೋರ ಮತ್ತು ದೀಪಿಕಾ ಕತ್ರಾಣಿ- ಕಥಕ್, ಶಾಂಗ್ರೀ ರಾಜೇಂ ದ್ರನ್- ಕರ್ನಾಟಕ ಸಂಗೀತ, ಧನರಾಜ್ ಪ್ರಸಾದ್- ತಬಲ, ತನುಜೆನ್ ಚಂದ್ರ ಕುಮಾರ್ – ಮೃದಂಗ ಕಾರ್ಯಕ್ರಮ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಇನ್ಫೋಸಿಸ್ ಫೌಂಡೇ ಷನ್, ಆರ್ಟ್ ಕೌನ್ಸಿಲ್ ಇಂಗ್ಲೆಂಡ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಏರ್ ಇಂಡಿಯಾ ಜಂಟಿ ಸಹಯೋಗ ನೀಡಿವೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಿವಿಬಿ ಮೈಸೂರು ಕೇಂದ್ರದ ಡಾ.ಎ.ವಿ.ನರಸಿಂಹಮೂರ್ತಿ, ನಿವೃತ್ತ ವಿಂಗ್ ಕಮಾಂಡರ್ ಡಾ.ಬಾಲ ಸುಬ್ರಹ್ಮಣ್ಯಂ ಉಪಸ್ಥಿತರಿದ್ದರು.

Translate »