ಕರ್ನಾಟಕ ಮುಕ್ತ ವಿವಿ ಕುಲಪತಿ  ಪ್ರೊ. ಡಿ.ಶಿವಲಿಂಗಯ್ಯ ಅವಧಿ ವಿಸ್ತರಣೆ
ಮೈಸೂರು

ಕರ್ನಾಟಕ ಮುಕ್ತ ವಿವಿ ಕುಲಪತಿ ಪ್ರೊ. ಡಿ.ಶಿವಲಿಂಗಯ್ಯ ಅವಧಿ ವಿಸ್ತರಣೆ

March 12, 2019

ಮೈಸೂರು: ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯದ ಕುಲಪತಿ ಪ್ರೊ. ಡಿ. ಶಿವಲಿಂಗಯ್ಯ ಅವರ ಅವಧಿಯನ್ನು ಮೇ 31 ರವರೆಗೆ ವಿಸ್ತರಿಸಲಾಗಿದೆ. ರಾಜ್ಯ ಪಾಲ ವಜುಭಾಯಿ ವಾಲಾ ಅವರು ಪ್ರೊ. ಡಿ. ಶಿವಲಿಂಗ ಯ್ಯರ ಮನವಿ ಮೇರೆಗೆ ಅವಧಿ ವಿಸ್ತರಿಸಿದ್ದು, ಸರ್ಕಾರ ಇಂದು ಈ ಸಂಬಂಧ ಆದೇಶ ಹೊರಡಿಸಿದೆ. ಪ್ರೊ. ಶಿವಲಿಂಗಯ್ಯರ 3 ವರ್ಷಗಳ ಅವಧಿ ಮಾರ್ಚ್ 10ಕ್ಕೆ ಮುಕ್ತಾಯಗೊಂಡಿತ್ತು. ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವರಾಗಿದ್ದ ಅವರನ್ನು 2016ರ ಮಾರ್ಚ್ 10 ರಂದು ಮುಕ್ತ ವಿವಿ ಕುಲಪತಿಯಾಗಿ ನೇಮಕ ಮಾಡಲಾಗಿತ್ತು.

ಅವಧಿ ಅಂತ್ಯವಾಗುತ್ತಿದ್ದ ಕಾರಣ ನೂತನ ಕುಲಪತಿ ನೇಮಕ ಪ್ರಕ್ರಿಯೆ ಆರಂಭಗೊಂಡು ಶೋಧನಾ ಸಮಿತಿಯನ್ನೂ ನೇಮಕ ಮಾಡಲಾಗಿತ್ತು. ಸಮಿತಿ ಶಿಫಾರಸ್ಸು ಮಾಡಿದ್ದ ಅಭ್ಯರ್ಥಿಯನ್ನು ನೇಮಿಸಿ ಆದೇಶ ಹೊರ ಬೀಳಬೇಕಿ ತ್ತಾದರೂ, ಅಷ್ಟರಲ್ಲಿ ಲೋಕಸಭಾ ಚುನಾವಣೆ ಅಧಿಸೂಚನೆ ಹೊರಬಿದ್ದು, ನೀತಿ ಸಂಹಿತೆ ಅಡ್ಡಿ ಬಂದ ಹಿನ್ನೆಲೆಯಲ್ಲಿ ಅವಧಿ ಮುಂದೂಡುವ ನಿರ್ಧಾರ ಕೈಗೊಳ್ಳಲಾಗಿದೆ.

Translate »