ಕೇಂದ್ರ ರೈತ ವಿರೋಧಿ ಎಂದು ಆರೋಪಿಸಿ ಕಾಂಗ್ರೆಸ್ ಪ್ರತಿಭಟನೆ
ಮೈಸೂರು

ಕೇಂದ್ರ ರೈತ ವಿರೋಧಿ ಎಂದು ಆರೋಪಿಸಿ ಕಾಂಗ್ರೆಸ್ ಪ್ರತಿಭಟನೆ

March 12, 2019

ಮೈಸೂರು: ಕೇಂದ್ರ ಸರ್ಕಾರವು ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಮೈಸೂರು ಜಿ¯್ಲÁ ಕಾಂಗ್ರೆಸ್ ಕಾರ್ಯ ಕರ್ತರು ಪ್ರತಿಭಟನೆ ನಡೆಸಿದರು.

ಮೈಸೂರು ರೈಲ್ವೆ ನಿಲ್ದಾಣದ ಮುಂಭಾಗ ವಿರುವ ಡಾ.ಬಾಬು ಜಗಜೀವನರಾಂ ವೃತ್ತದ ಬಳಿ ಸೋಮವಾರ ಜಮಾಯಿ ಸಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಸಮ್ಮಿಶ್ರ ಸರ್ಕಾರವು ರೈತರ ಸಾಲ ಮನ್ನಾ ಮಾಡಿದೆ. ಆದರೆ ಕೇಂದ್ರದ ಆಡಳಿತಾವಧಿ ಮುಗಿಯುತ್ತಾ ಬಂದಿದ್ದರೂ ರೈತರ ಸಾಲ ಮನ್ನಾ ಮಾಡದೆ ರೈತರಿಗೆ ಮೋಸ ಮಾಡುತ್ತಿದೆ. ಬರ ಪರಿಹಾರ ನೀಡುವಲ್ಲಿ ರಾಜ್ಯದ ರೈತರಿಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಮಹಾರಾಷ್ಟ್ರ ರಾಜ್ಯಕ್ಕೆ 4710 ಕೋಟಿ ರೂ. ಬರ ಪರಿ ಹಾರ ಹಣ ಬಿಡುಗಡೆ ಮಾಡಿದೆ. ಆದರೆ ಕರ್ನಾಟಕಕ್ಕೆ 900 ಕೋಟಿ ರೂ ಹಣ ಮಾತ್ರ ನೀಡಿ ತಾರತಮ್ಯ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರೈತರ ಬೆಳೆಗಳಿಗೆ ಶೇ.50ರಷ್ಟು ಬೆಂಬಲ ಬೆಲೆ, ರಾಷ್ಟ್ರದ ಆಹಾರ ಉತ್ಪಾದನೆ ದ್ವಿಗುಣ ಗೊಳಿಸುವುದಾಗಿ ಸುಳ್ಳು ಆಶ್ವಾಸನೆ ನೀಡಿದೆ. ಕೈಗಾರಿಕೆಗಳಿಗೆ ಮಣೆ ಹಾಕಲು ರೈತರ ಜಮೀ ನನ್ನು ಒತ್ತುವರಿ ಮಾಡಿಕೊಳ್ಳಲು ಸುಗ್ರೀ ವಾಜ್ಞೆ ತಂದಿರುವುದು ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ತೋರಿಸುತ್ತದೆ. ರಾಷ್ಟ್ರಾದ್ಯಂತ ರೈತರು ಪ್ರತಿಭಟನೆ ಮಾಡಿ ದರೂ ಮೋದಿಯವರು ರೈತರ ಸಂಕಷ್ಟ ಆಲಿಸಲಿಲ್ಲ. ರೈತರ ಖಾತೆಗಳಿಗೆ 6000 ರೂ. ಜಮಾ ಮಾಡಲು ಮುಂದಾಗಿರು ವುದು ರೈತರನ್ನು ಅವಮಾನಿಸಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿ ಭಟನೆಯಲ್ಲಿ ಕಾಂಗ್ರೆಸ್ ಜಿ¯್ಲÁಧ್ಯP್ಷÀ ಡಾ.ಬಿ. ಜೆ.ವಿಜಯ್‍ಕುಮಾರ್, ಪ್ರಧಾನ ಕಾರ್ಯ ದರ್ಶಿ ಬಸವರಾಜ್ ನಾಯಕ್, ಉಪಾಧ್ಯಕ್ಷ ಆರ್.ಪ್ರಕಾಶ್, ಉಪಾಧ್ಯP್ಷÀ ಹೆಡತಲೆ ಮಂಜು ನಾಥ್, ಜಿಪಂ ಸದಸ್ಯ ಮಂಜುನಾಥ್, ರೈತ ಘಟಕದ ಅಧ್ಯP್ಷÀ ವಸಂತಕುಮಾರ್, ಸೇವಾ ದಳ ಅಧ್ಯಕ್ಷೆ ಗೀತಾ, ಶಿವಪ್ರಸಾದ್, ಮಹೇಶ್, ಉಮಾಶಂಕರ್ ಇತರರು ಪಾಲ್ಗೊಂಡಿದ್ದರು.

Translate »