ಮನೆ ನಿರ್ಮಿಸುವವರಿಗೆ ಮಳೆ ಕೊಯ್ಲು ಕಡ್ಡಾಯ ಮಾಡಿ
ಮೈಸೂರು

ಮನೆ ನಿರ್ಮಿಸುವವರಿಗೆ ಮಳೆ ಕೊಯ್ಲು ಕಡ್ಡಾಯ ಮಾಡಿ

March 12, 2019

ಮೈಸೂರು: ಮನೆ ಕಟ್ಟುವ ಸಂದರ್ಭದಲ್ಲೇ ಮಳೆ ನೀರು ಕೊಯ್ಲು ಸಹ ಅಳವಡಿಸಿಕೊಳ್ಳು ವಂತೆ ಮನೆ ಮತ್ತು ಕಟ್ಟಡ ಕಟ್ಟುವ ಮಾಲೀಕರಿಗೆ ಕಟ್ಟು ನಿಟ್ಟಿನ ಸೂಚನೆ ನೀಡ ಬೇಕು. ಅದನ್ನು ಪಾಲಿಸದೆ ಕಟ್ಟಡ ನಿರ್ಮಿಸಲು ಮುಂದಾಗುವವರಿಗೆ ಮಹಾನಗರಪಾಲಿಕೆ ಅಧಿಕಾರಿಗಳು ಲೈಸೆನ್ಸ್ ನೀಡಬಾರದು ಎಂದು ಚಾಮರಾಜ ಕ್ಷೇತ್ರ ಶಾಸಕ ಎಲ್.ನಾಗೇಂದ್ರ ಅಭಿಪ್ರಾಯಪಟ್ಟರು.

ಮೈಸೂರಿನ ಇಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಸೋಮವಾರ ಸರ್ ಎಂ.ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳ ಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಉಷ್ಣಾಂಶ ದಿನೇ ದಿನೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ನೀರಿನ ಪ್ರಾಮು ಖ್ಯತೆಗೆ ಹೆಚ್ಚು ಒತ್ತು ನೀಡಬೇಕಿದೆ. ಅದಕ್ಕೆ ಅಗತ್ಯವಾದ ಎಲ್ಲಾ ಮುನ್ನೆಚ್ಚರಿಕಾ ಕ್ರಮ ಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ನಾಗೇಂದ್ರ ಹೇಳಿದರು.

ಮೇಯರ್ ಪುಷ್ಪಲತಾ ಜಗನ್ನಾಥ್ ಮಾತನಾಡಿ, ಬೇಸಿಗೆಯಲ್ಲಿ ನೀರಿನ ಕೊರತೆ ಕಂಡು ಬರಲಿದೆ. ಕೊಳವೆ ಬಾವಿಗಳಲ್ಲೂ ನೀರು ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ನಲ್ಲಿ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘ ನೀರು ಉಳಿಸುವ ಕುರಿತು ಹಮ್ಮಿಕೊಂಡಿ ರುವ ಕಾರ್ಯಕ್ರಮ ನಿಜಕ್ಕೂ ಸಂದ ರ್ಭೋಚಿತವಾಗಿದೆ ಎಂದು ಶ್ಲಾಘಿ ಸಿದರು. ಇದೇ ಸಂದರ್ಭದಲ್ಲಿ ರಾಜ್ಯೋ ತ್ಸವ ಪ್ರಶಸ್ತಿ ಪುರಸ್ಕøತ ದಾಸನದೊಡ್ಡಿಯ ಕಾಮೇಗೌಡರು, ಮಳೆ ನೀರಿನ ಶೇಖರಣೆ ಮತ್ತು ಮರು ಬಳಕೆ ತಜ್ಞ ರಮೇಶ್ ಮತ್ತು ಇನ್ನಿತರರನ್ನು ಸನ್ಮಾನಿಸಲಾಯಿತು.

ಸರ್ ಎಂ.ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಸಂಘದ ಅಧ್ಯಕ್ಷ ಚಂದ್ರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯ ದರ್ಶಿ ಎಂ.ಎಸ್‍ಸುರೇಶ್‍ಕುಮಾರ್, ಪದಾಧಿಕಾರಿ ಮಹೇಶ್ ಸೇರಿದಂತೆ ಇನ್ನಿತರರು ಈ ವೇಳೆ ಉಪಸ್ಥಿತರಿದ್ದರು.

Translate »