ರೈತಮಿತ್ರ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ವತಿಯಿಂದ  ಮಾವು, ಬಾಳೆ ಮಾಗಿಸುವ ಘಟಕ ಆರಂಭಿಸಲು ನಿರ್ಧಾರ
ಮೈಸೂರು

ರೈತಮಿತ್ರ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ವತಿಯಿಂದ ಮಾವು, ಬಾಳೆ ಮಾಗಿಸುವ ಘಟಕ ಆರಂಭಿಸಲು ನಿರ್ಧಾರ

March 12, 2019

ಮೈಸೂರು: ರೈತಮಿತ್ರ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ವತಿಯಿಂದ ಸಾವಯವ ವಿಧಾನ ದಲ್ಲಿ ಮಾವು ಮತ್ತು ಬಾಳೆ ಹಣ್ಣು ಮಾಗಿಸುವ ಘಟಕ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಕಂಪನಿ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಆವರಣದ ಶ್ರೀ ರಾಜೇಂದ್ರ ಭವನದಲ್ಲಿ ಕಂಪನಿ ಹಾಗೂ ಮೈಸೂರು ಮತ್ತು ಚಾಮರಾಜ ನಗರ ಜಿಲ್ಲೆಗಳ ಹಣ್ಣು ಮತ್ತು ತರಕಾರಿ ಬೆಳೆಗಾರರ ಸಂಘದ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತರಕಾರಿ ಬೆಳೆಗಾರ ರೈತರ ಸಂವಾದ ಮತ್ತು ಮಣ್ಣು ಪರೀಕ್ಷಾ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವರ್ಷದ ಹಿಂದೆಯಷ್ಟೇ ಆರಂಭಗೊಂಡ ರೈತಮಿತ್ರ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ 190ಕ್ಕೂ ಹೆಚ್ಚು ರೈತ ರಿಂದ ಹಣ್ಣು ಮತ್ತು ತರಕಾರಿ ಖರೀದಿಸುತ್ತಿದ್ದು, ಮಧ್ಯ ವರ್ತಿಗಳ ಹಾವಳಿ ತಪ್ಪಿಸಿ ಮಾರುಕಟ್ಟೆ ದರದಲ್ಲಿ ಖರೀದಿ ಮಾಡಲಾಗುತ್ತಿದೆ. ಕಂಪನಿಗೆ ಬಂದ ಲಾಭಾಂಶದಲ್ಲಿ ಹಣ್ಣು ಮತ್ತು ತರಕಾರಿ ಪೂರೈಸಿದ ರೈತರಿಗೆ 3.84 ಲಕ್ಷ ರೂ. ಮೊತ್ತದ ಬೋನಸ್ ವಿತರಣೆ ಮಾಡಲಾಗುವುದು ಎಂದರು.

ಮಣ್ಣಿನ ಆರೋಗ್ಯದಿಂದ ಮಾತ್ರ ಕೃಷಿ ಜೀವಂತವಾಗಿ ಉಳಿಯಲು ಸಾಧ್ಯ. ಈ ಹಿನ್ನೆಲೆಯಲ್ಲಿ ಸುತ್ತೂರಿನ ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರದ ಮೂಲಕ ನಮ್ಮ ಕಂಪನಿಗೆ ತರ ಕಾರಿ ಪೂರೈಕೆ ಮಾಡುವ 120ಕ್ಕೂ ಹೆಚ್ಚು ರೈತರ ಕೃಷಿ ಭೂಮಿ ಯಲ್ಲಿ ಮಣ್ಣಿನ ಪರೀಕ್ಷೆ ನಡೆಸಲಾಗಿದೆ. ಇಂದು ಮಣ್ಣಿನ ಪರೀಕ್ಷಾ ಕಾರ್ಡ್‍ಗಳನ್ನು ವಿತರಣೆ ಮಾಡುತ್ತಿದ್ದು, ಈ ಕಾರ್ಡ್ ನಲ್ಲಿ ಕೃಷಿ ತಜ್ಞರು ಉಲ್ಲೇಖಿಸಿರುವ ಅಂಶಗಳ ಆಧಾರ ದಲ್ಲಿ ಕೃಷಿ ಚಟುವಟಿಕೆ ನಡೆಸುವಂತೆ ರೈತರಿಗೆ ಸಲಹೆ ನೀಡಿದರು. ರೈತರ ಕಬ್ಬು ಖರೀದಿಗೆ ಸಂಬಂಧಿಸಿದಂತೆ ಸರ್ಕಾರ 4 ಸಾವಿರ ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯ ಈ ಸಂದರ್ಭ ದಲ್ಲಿ ಕಬ್ಬು ಬೆಳೆಗಾರರು ಸಮಾಲೋಚನೆ ನಡೆಸಿ ರಾಜಕೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕಿದೆ. ಚುನಾವಣೆ ವೇಳೆ ಯಲ್ಲಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿ ಮಾತು ತಪ್ಪುವ ರಾಜಕೀಯ ಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಈಗಾಗಲೇ ನಮ್ಮ ಸಂಘಟನೆ ಮೂಲಕ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದರು.

ಇದೇ ವೇಳೆ ಸುತ್ತೂರು ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಜೆ.ಜಿ.ರಾಜಣ್ಣ ರೈತರಿಗೆ ಕೃಷಿ ಭೂಮಿಯ ಮಣ್ಣು ಪರೀಕ್ಷಾ ಕಾರ್ಡ್ ವಿತರಣೆ ಮಾಡಿದರು. ಬಳಿಕ ತರಕಾರಿ ಬೆಳೆಗಳ ಬಗ್ಗೆ ರೈತರೊಂದಿಗೆ ತೋಟಗಾರಿಕಾ ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಬಿ.ಎಸ್. ಹರೀಶ್ ಸಂವಾದ ನಡೆಸಿದರು. ಮಂಡ್ಯ ಜಿಲ್ಲೆ ನಾಗ ಮಂಗಲ ತಾಲೂಕಿನ ಸಾತೇನಹಳ್ಳಿ ಕುಮಾರಸ್ವಾಮಿ, ಗಣ ಗರಹುಂಡಿ ಕೆ.ಎನ್.ನೀಲಕಂಠ, ರೈತಮಿತ್ರ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಉಪನಿರ್ದೇಶಕ ಟಿ.ವಿ.ಗೋಪಿ ನಾಥ್, ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜು 80ಕ್ಕೂ ಹೆಚ್ಚು ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Translate »