ಮಾ.13, 14ರಂದು ಪ್ರವಾಸೋದ್ಯಮ ಸಂಬಂಧ  ರಾಜ್ಯ ಮಟ್ಟದ ವಿಚಾರ ಸಂಕಿರಣ
ಮೈಸೂರು

ಮಾ.13, 14ರಂದು ಪ್ರವಾಸೋದ್ಯಮ ಸಂಬಂಧ ರಾಜ್ಯ ಮಟ್ಟದ ವಿಚಾರ ಸಂಕಿರಣ

March 12, 2019

ಮೈಸೂರು: ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ 40ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಕಾಲೇಜಿನ ವಾಣಿಜ್ಯ ಶಾಸ್ತ್ರ, ಇತಿಹಾಸ ಹಾಗೂ ಐಕ್ಯೂಎಸಿ ವಿಭಾಗಗಳು ಮತ್ತು ಪ್ರವಾ ಸೋದ್ಯಮ ಇಲಾಖೆ ಜಂಟಿ ಆಶ್ರಯದಲ್ಲಿ ಮಾ.13 ಮತ್ತು 14ರಂದು `ಕರ್ನಾಟಕದಲ್ಲಿ ಪಾರಂಪರಿಕ ಮತ್ತು ಆರೋಗ್ಯ ಪ್ರವಾಸೋದ್ಯಮ’ ಕುರಿತಂತೆ ರಾಜ್ಯ ಮಟ್ಟದ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಮರೀಗೌಡ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜಿನ ಪಿ.ಎಂ.ಚಿಕ್ಕಬೋರಯ್ಯ ಸಭಾಂಗಣದಲ್ಲಿ ಮಾ.13ರಂದು ಬೆಳಿಗ್ಗೆ 9ಕ್ಕೆ ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ವಿಚಾರ ಸಂಕಿರಣ ಉದ್ಘಾಟಿಸಲಿದ್ದಾರೆ. ಪ್ರವಾ ಸೋದ್ಯಮ ಇಲಾಖೆ ನಿವೃತ್ತ ಪ್ರಧಾನ ಕಾರ್ಯದರ್ಶಿ ಐ.ಎಂ.ವಿಠ್ಠಲಮೂರ್ತಿ ದಿಕ್ಸೂಚಿ ಭಾಷಣ ಮಾಡಲಿದ್ದು, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್, ಕೋಶಾಧ್ಯಕ್ಷ ಶ್ರೀಶೈಲರಾಮಣ್ಣವರ್, ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ನಿರ್ವ ಹಣಾ ಮಂಡಳಿ ಅಧ್ಯಕ್ಷ ಟಿ.ನಾಗರಾಜು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ನಂತರ ಬೆಳಿಗ್ಗೆ 11.30ರಿಂದ ಗೋಷ್ಠಿಗಳು ನಡೆಯಲಿದ್ದು, `ಕರ್ನಾಟಕದಲ್ಲಿ ಆರೋಗ್ಯ ಪ್ರವಾಸೋದ್ಯಮಕ್ಕೆ ಅವಕಾಶಗಳು ಮತ್ತು ಸವಾಲುಗಳು’, `ಪಾರಂಪರಿಕ ಪ್ರವಾಸೋ ದ್ಯಮದಲ್ಲಿ ಉದ್ಯಮಶೀಲತೆ ಮತ್ತು ಆವಿಷ್ಕಾರದ ದೃಷ್ಟಿಕೋನಗಳು’ ಹಾಗೂ `ಕರ್ನಾಟಕ ದಲ್ಲಿ ಪಾರಂಪರಿಕ ಪ್ರವಾಸೋದ್ಯಮ ಮತ್ತು ಅದರ ಸವಾಲುಗಳು’ ಕುರಿತಂತೆ ಸಂಪ ನ್ಮೂಲ ವ್ಯಕ್ತಿಗಳು ವಿಚಾರ ಮಂಡನೆ ಮಾಡಲಿದ್ದಾರೆ. ಅದೇ ರೀತಿ ಮಾ.14ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3.45ರವರೆಗೆ `ಆರ್ಥಿಕಾಭಿವೃದ್ಧಿಯಲ್ಲಿ ಪಾರಂಪರಿಕ ಪ್ರವಾಸೋ ದ್ಯಮದ ಪಾತ್ರ’ ಹಾಗೂ `ಆರೋಗ್ಯ, ಪ್ರವಾಸೋದ್ಯಮ ಹಾಗೂ ಆರ್ಥಿಕತೆಯ ಸಂಬಂಧ’ ಕುರಿತಂತೆ ವಿಚಾರ ಮಂಡನೆ ಆಗಲಿವೆ ಎಂದರು. ಬಳಿಕ ಸಂಜೆ 4ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಅಪರ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಬಿ.ಪಿ.ರವಿ ಸಮಾರೋಪ ಭಾಷಣ ಮಾಡಲಿದ್ದಾರೆ. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ವಿಚಾರ ಸಂಕಿರಣದ ಕಾರ್ಯದರ್ಶಿ ಪ್ರೊ.ಬಿ.ಎಂ.ಮಂಜುಳಾ, ಸಂಚಾಲಕಿ ಪ್ರೊ.ಕೆ.ಎಸ್.ಸವಿತಾ ಗೋಷ್ಠಿಯಲ್ಲಿದ್ದರು.

Translate »