ಸಂಸದ ಪ್ರತಾಪ್ ಸಿಂಹರ ಪ್ರಗತಿ  ಪುಸ್ತಕದ ಬಗ್ಗೆ ಮಾಜಿ ಎಂಎಲ್‍ಸಿ ಆಕ್ಷೇಪ
ಮೈಸೂರು

ಸಂಸದ ಪ್ರತಾಪ್ ಸಿಂಹರ ಪ್ರಗತಿ ಪುಸ್ತಕದ ಬಗ್ಗೆ ಮಾಜಿ ಎಂಎಲ್‍ಸಿ ಆಕ್ಷೇಪ

March 12, 2019

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಹಾಲಿ ಸಂಸದರು ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಹೊರ ತಂದಿರುವ ಪುಸ್ತಕ ಸುಳ್ಳಿನ ಕಂತೆ ಎಂದು ಆರೋಪಿಸಿರುವ ಕರ್ನಾಟಕ ರಾಜ್ಯ ಪ್ರಗತಿಪರ ಚಿಂತಕರ ವೇದಿಕೆ ಅಧ್ಯಕ್ಷ್ಷ ಕೆ.ಸಿ.ಪುಟ್ಟಸಿದ್ಧಶೆಟ್ಟಿ, ಸಂಸ ದರು ಕ್ಷೇತ್ರದ ಅಭಿವೃದ್ಧಿಗೆ ತಾವು ಕೈಗೊಂಡ ಕೆಲಸ-ಕಾರ್ಯದ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಪ್ರತಾಪ್ ಸಿಂಹ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರದಿಂದ ಎಷ್ಟು ಅನುದಾನ ತಂದಿದ್ದಾರೆ. ಯಾವ ಯೋಜನೆಗೆ ಎಷ್ಟು ಹಣ ಬಿಡುಗಡೆ ಮಾಡಲಾಗಿದೆ. ಸಂಸದರ ನಿಧಿಯ ಖರ್ಚು-ವೆಚ್ಚದ ಬಗ್ಗೆ ಅಂಕಿ ಅಂಶಗಳ ಸಹಿತ ಶ್ವೇತಪತ್ರ ಹೊರಡಿಸಬೇಕು. ಅಲ್ಲದೆ, ಈ ಬಗ್ಗೆ ಅವರು ಬಹಿರಂಗ ಚರ್ಚೆÀ ನಡೆಸುವುದಾದರೆ ನಮ್ಮ ವೇದಿಕೆ ಸಿದ್ಧವಿದೆ ಎಂದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವೇದಿಕೆಯಿಂದ `ಜಾತ್ಯತೀತ ಶಕ್ತಿಗಳಿಗೆ ಮತ ನೀಡಿ’ ಅಭಿಯಾನ ಆರಂಭಿಸಲಾಗುವುದು. `ಬಿಜೆಪಿ ಹಠಾವೋ-ದೇಶ ಬಚಾವೋ’ ಘೋಷಣೆಯೊಂದಿಗೆ ರಾಜ್ಯದ ವಿವಿಧ ಭಾಗಗಳಲ್ಲಿ ಅಭಿಯಾನ ನಡೆಸಿ ಮತದಾರರನ್ನು ಜಾಗೃತಿಗೊಳಿಸಲಾಗುವುದು. ರಾಜ್ಯ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿ ಯಾಗಿ ಸ್ಪರ್ಧಿಸಬೇಕೆಂದು ಇದೇ ವೇಳೆ ಮನವಿ ಮಾಡಿದರು. ಪ್ರಗತಿಪರ ಚಿಂತಕ ಹೆಚ್.ಬಿ.ಸಂಪತ್ತು, ಜಿಲ್ಲಾ ಕಾಯಕ ಸಮಾಜಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬೋರಪ್ಪಶೆಟ್ಟಿ, ಮುಖಂಡರಾದ ಕುಮಾರಶೆಟ್ಟಿ, ನಂದೀಶ್ ಜಿ.ಅರಸ್ ಗೋಷ್ಠಿಯಲ್ಲಿದ್ದರು.

Translate »