ಲೋಕಸಭಾ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ
ಕೊಡಗು

ಲೋಕಸಭಾ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ

April 17, 2019

ಮಡಿಕೇರಿ: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾ ವಣೆ ಏ.18 ರಂದು ನಡೆಯಲಿದ್ದು, ಮುಕ್ತ ಹಾಗೂ ನ್ಯಾಯಸಮ್ಮತ ಮತದಾನಕ್ಕಾಗಿ ಜಿಲ್ಲಾಡಳಿತವು ಸಜ್ಜುಗೊಂಡಿದೆ ಎಂದು ಡಿಸಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 269 ಮತಗಟ್ಟೆಗಳು ಅದರಲ್ಲಿ 109,294 ಪುರುಷ ಮತದಾ ರರು, 1,11,853 ಮಹಿಳಾ ಮತದಾರರು, 10 ಇತರ ಮತದಾರರು ಒಟ್ಟು 2,21,157 ಮತದಾರರಿದ್ದಾರೆ. ಹಾಗೆಯೇ ವಿರಾಜ ಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 274 ಮತಗಟ್ಟೆಗಳಿದ್ದು, ಅದರಲ್ಲಿ 1,09,573 ಪುರುಷ ಮತದಾರರು, 1,09, 985 ಮಹಿಳಾ ಮತದಾರರು, 15 ಇತರ ಮತದಾರರು ಒಟ್ಟು 2,19,573 ಮತದಾರ ರಿದ್ದಾರೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಜಿಲ್ಲೆಯಲ್ಲಿ ಒಟ್ಟು 543 ಮತಗಟ್ಟೆಗಳಿದ್ದು, 2,18,867 ಪುರುಷ ಮತದಾರರು, 2,21, 838 ಮಹಿಳಾ ಮತದಾರರು, 25 ಇತರೆ ಒಟ್ಟು 4,40,730 ಮತದಾರರಿದ್ದಾರೆ ಎಂದು ಅನೀಸ್ ಕಣ್ಮಣಿ ಜಾಯ್ ವಿವರಿಸಿದರು.

ಮತದಾನ ಸಿಬ್ಬಂದಿ: ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 543 ಮತಗಟ್ಟೆ ಗಳಿಗೆ ಒಟ್ಟು 571 ಮತಗಟ್ಟೆ ಅಧ್ಯಕ್ಷಾಧಿ ಕಾರಿಗಳು, 571 ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ ಹಾಗೂ 1142 ಮತದಾ ನಾಧಿಕಾರಿಗಳನ್ನು ನೇಮಕ ಮಾಡಲಾಗಿ ರುತ್ತದೆ. (ಮೀಸಲು ಸೇರಿ) ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ಎರಡು ಹಂತದಲ್ಲಿ ತರ ಬೇತಿಯನ್ನು ನೀಡಲಾಗಿದೆ ಎಂದರು.
ಪ್ರತಿ ಮತಗಟ್ಟೆಗೆ ಒಬ್ಬರು ಮತಗಟ್ಟೆ ಅಧ್ಯ ಕ್ಷಾಧಿಕಾರಿ, ಒಬ್ಬರು ಸಹಾಯಕ ಅಧ್ಯಕ್ಷಾಧಿಕಾರಿ ಮತ್ತು ಇಬ್ಬರು ಮತ ದಾನಾ ಧಿಕಾರಿಗಳನ್ನು ನೇಮಿಸಲಾಗಿದೆ. ಇವ ರೊಂದಿಗೆ ಸ್ಥಳೀಯವಾಗಿ ಒಬ್ಬರು ಗ್ರೂಪ್ ಡಿ ಮತ್ತು ಮತದಾರರನ್ನು ಗುರುತಿಸಲು ಪ್ರತಿ ಮತಗಟ್ಟೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಅವರು ತಿಳಿಸಿದರು.

ಮತದಾನಾಧಿಕಾರಿಗಳು ತಾವು ಕರ್ತವ್ಯ ನಿರ್ವಹಿಸುತ್ತಿರುವ ಕ್ಷೇತ್ರದಿಂದ ಹೊರಗಡೆ ನಿಯೋಜಿಸಲ್ಪಟ್ಟಿದಲ್ಲಿ, ಆ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಕೇಂದ್ರಕ್ಕೆ ತಲುಪಲು ಸಾರಿಗೆ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದರು.

ಮಸ್ಟರಿಂಗ್ ಡಿಮಸ್ಟರಿಂಗ್ ಕೇಂದ್ರಗಳು: ಮಡಿಕೇರಿ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕಾರ್ಯವು ನಗರದ ಸೆಂಟ್ ಜೋಸೆಫ್ ಕಾನ್ವೆಂಟ್‍ನಲ್ಲಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಸ್ಟ ರಿಂಗ್ ಮತ್ತು ಡಿ ಮಸ್ಟರಿಂಗ್ ಕಾರ್ಯವು ವಿರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇ ಜಿನಲ್ಲಿ ನಡೆಯಲಿದೆ. ಮತದಾನವು ಏ.18 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ.

ಅಭ್ಯರ್ಥಿಗಳ ಬೂತ್‍ಗಳು: ಸ್ಪರ್ಧಿಸಿರುವ ಅಭ್ಯರ್ಥಿಗಳು ಮತಗಟ್ಟೆ ಸ್ಥಳದಿಂದ ಕನಿಷ್ಠ 200 ಮೀಟರ್ ದೂರದಲ್ಲಿ ತಮ್ಮ ಬೂತ್ ಸ್ಥಾಪಿಸಲು ಮಾತ್ರ ಅವಕಾಶವಿದೆ. ಯಾವುದೇ ರೀತಿಯ ಪ್ರಚಾರದ ಪೋಸ್ಟರ್ ಅಥವಾ ಬ್ಯಾನರ್‍ಗಳನ್ನು ಮತಗಟ್ಟೆಯ 100 ಮೀಟರ್ ದೂರದಲ್ಲಿ ಹಾಕುವಂತಿಲ್ಲ. ಮತದಾರರಿಗೆ ನೀಡುವ ಸ್ಲಿಪ್ ಬಿಳಿ ಬಣ್ಣದಿಂದ ಕೂಡಿದ್ದು, ಅವರು ಮತದಾರರ ಭಾಗ ಸಂಖ್ಯೆ, ಕ್ರಮ ಸಂಖ್ಯೆ ಮತ್ತು ಹೆಸರನ್ನು ಮಾತ್ರ ಬರೆಯ ಬಹುದಾಗಿದ್ದು ಯಾವುದೇ ರೀತಿಯ ಚಿಹ್ನೆ ಗಳು, ಅಭ್ಯರ್ಥಿಗಳ ಭಾವಚಿತ್ರಗಳು ಇರ ದಂತೆ ಎಚ್ಚರ ವಹಿಸಲು ಸೂಚಿಸಿದೆ. 2 ಚೇರ್, 1 ಮೇಜು, 3×1.5 ಅಳತೆ ಬ್ಯಾನರ್ ಗಳನ್ನು ಹಾಕಿಕೊಳ್ಳಲು ಅವಕಾಶವಿದ್ದು ಸ್ಥಳೀಯ ಪ್ರಾಧಿಕಾರದ ಅನುಮತಿ ಪಡೆಯಬೇಕು.
ಪೋಲಿಂಗ್ ಏಜೆಂಟ್: ಅಭ್ಯರ್ಥಿ ಅಥವಾ ಅವರ ಚುನಾವಣಾ ಏಜೆಂಟ್ ಪ್ರತಿ ಮತ ಗಟ್ಟೆಗೆ ಒಬ್ಬರು ಪೋಲಿಂಗ್ ಏಜೆಂಟ್ ರನ್ನು ಅಥವಾ ಪರ್ಯಾಯವಾಗಿ ಇಬ್ಬರು ಪೋಲಿಂಗ್ ಏಜೆಂಟರುಗಳನ್ನು ನೇಮಕ ಮಾಡಬಹುದು. ಇಬ್ಬರು ಏಜೆಂಟರುಗಳ ಪೈಕಿ ಯಾರಾದರು ಒಬ್ಬರು ಮಾತ್ರ ಮತ ಗಟ್ಟೆಯ ಒಳಗೆ ಇರಲು ಅವಕಾಶ ಇರು ತ್ತದೆ. ಒಂದೇ ಸಮಯದಲ್ಲಿ ಇಬ್ಬರು ಮತ ಗಟ್ಟೆಯ ಒಳಗೆ ಇರಲು ಅನುಮತಿ ಇರು ವುದಿಲ್ಲ. ಪೋಲಿಂಗ್ ಏಜೆಂಟ್ ಆ ಮತ ಗಟ್ಟೆಯ ಅಥವಾ ಪಕ್ಕದ ಮತಗಟ್ಟೆಯ ಮತದಾರರಾಗಿರಬಹುದು. ಪೋಲಿಂಗ್ ಏಜೆಂಟ್ ಚುನಾವಣಾ ಆಯೋಗ ಅನು ಮತಿಸಿರುವ ಭಾವಚಿತ್ರವಿರುವ ಮತದಾ ರರ ಗುರುತಿನ ಚೀಟಿಯನ್ನು (ಎಪಿಕ್ ಕಾರ್ಡ್) ಅಥವಾ ಇತರೆ ದಾಖಲೆಗಳನ್ನು ಕಡ್ಡಾ ಯವಾಗಿ ತೆಗೆದುಕೊಂಡು ಹೋಗುವುದು.

ಚುನಾವಣೆ ಅಧಿಸೂಚನೆ ಪ್ರಕಟವಾದ ನಂತರ ಇಲ್ಲಿಯವರೆಗೆ 1,98,260 ನಗದು ಹಣ ಮುಟ್ಟುಗೋಲು ಮಾಡಲಾಗಿದೆ. ರೂ. 83,39,153 ಮೌಲ್ಯದ 14,448.16 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ. ಹಾಗೆಯೇ 10 ಸಾವಿರ ಮೌಲ್ಯದ ಗಾಂಜಾ, 10 ವಾಹನ ವಶಪಡಿಸಿಕೊಳ್ಳಲಾಗಿದೆ. ಎಸ್‍ಎಸ್‍ಟಿಯಿಂದ 1, ಎಫ್‍ಎಸ್‍ಟಿಯಿಂದ 9 ಮತ್ತು ಪೊಲೀಸ್ ಇಲಾಖೆಯಿಂದ 20 ಪ್ರಕರಣಗಳು ದಾಖ ಲಾಗಿದೆ. ಹಾಗೆಯೇ 410 ಪ್ರಕರಣಗಳಿಗೆ ಎಫ್‍ಐಆರ್ ದಾಖಲಾಗಿದೆ ಎಂದರು.

ಮಾದರಿ ನೀತಿ ಸಂಹಿತೆ: ಚುನಾವಣಾ ಬಹಿರಂಗ ಪ್ರಚಾರ ಅಂತ್ಯ: ಏ.18 ರಂದು ನಡೆಯಲಿರುವ ಲೋಕಸಭಾ ಚುನಾವಣೆ ಸಂಬಂಧ ಮತದಾನ ಅಂತ್ಯಗೊಳ್ಳುವುದಕ್ಕೆ ನಿಗದಿಯಾಗಿರುವ ಸಮಯದ 48 ಗಂಟೆಗಳ ಮೊದಲು ಎಲ್ಲ ರೀತಿಯ ಬಹಿ ರಂಗ ಪ್ರಚಾರ ನಿಷೇಧಿಸಿರುವುದರಿಂದ ಬಹಿರಂಗ ಪ್ರಚಾರ ಏ.16ರ ಸಂಜೆ 6 ಗಂಟೆಗೆ ಅಂತ್ಯಗೊಳ್ಳಲಿದೆ.
ಈ 48 ಗಂಟೆಗಳ ಅವಧಿಯಲ್ಲಿ ಚುನಾ ವಣೆ ಫಲಿತಾಂಶದ ಮೇಲೆ ಪರಿಣಾಮ ಬೀರುವ ಎಲ್ಲ ರೀತಿಯ ಬಹಿರಂಗ ಪ್ರಚಾರ ಟೆಲಿವಿಷನ್/ ರೇಡಿಯೋ ಹಾಗೂ ಕೇಬಲ್ ನೆಟ್‍ವರ್ಕ್ ಇಂತಹ ಇತರೆ ಮಾಧ್ಯಮ ದಲ್ಲಿ ಚುನಾವಣಾ ವಿಷಯ ಚರ್ಚೆ, ಪ್ರಚಾರ, ಸಂದರ್ಶನ, ಜಾಹೀರಾತು ಹಾಗೂ ಚುನಾ ವಣೆ ಸಂಬಂಧಿತ ಅಭಿಪ್ರಾಯಗಳ ಪ್ರಸಾರ ಗಳು ಈ ನಿಷೇಧಕ್ಕೆ ಒಳಪಡಲಿವೆ.

ಏ.17 ಮತ್ತು 18 ರಂದು ಪತ್ರಿಕಾ ಮಾಧ್ಯ ಮದಲ್ಲಿ ಪ್ರಕಟವಾಗುವ ಯಾವುದೇ ರೀತಿಯ ರಾಜಕೀಯ ಜಾಹೀರಾತುಗಳನ್ನು ಪ್ರಕಟಿಸಬೇಕಿದ್ದಲ್ಲಿ, ಮಾಧ್ಯಮ ಪ್ರಮಾಣೀ ಕರಣ ಹಾಗೂ ಕಣ್ಗಾವಲು ಸಮಿತಿ (ಎಂಸಿ ಎಂಸಿ) ತಂಡದಿಂದ ಕಡ್ಡಾಯವಾಗಿ ಅನು ಮತಿ ಪಡೆಯಬೇಕಾಗಿದೆ ಎಂದರು.

ಭದ್ರತಾ ವ್ಯವಸ್ಥೆಗಳು: ಮತದಾನದ ದಿನ ದಂದು ಸಿಎಪಿಎಫ್, ಪೊಲೀಸ್ ಸಿಬ್ಬಂದಿ, ಹೋಮ್ ಗಾಡ್ರ್ಸ್‍ಗಳನ್ನು ಭದ್ರತಾ ದೃಷ್ಟಿ ಯಿಂದ ನೇಮಕ ಮಾಡಲಾಗುತ್ತಿದ್ದು, ಆಯ್ದ ಮತಗಟ್ಟೆಗಳಲ್ಲಿ ಮೈಕ್ರೊ ಅಬ್ಸರ್ವರ್‍ಗಳ ನೇಮಕ ಹಾಗೂ ವೆಬ್‍ಕಾಸ್ಟಿಂಗ್ ಮತ್ತು ವಿಡಿಯೋ ಕ್ಯಾಮರಾಗಳ ವ್ಯವಸ್ಥೆ ಮಾಡಲಾ ಗುತ್ತಿದೆ. ಮತದಾನ ಪೂರ್ಣಗೊಳ್ಳುವ ಸಮ ಯಕ್ಕೆ 48 ಗಂಟೆಯು ಮುಂಚಿತವಾಗಿ ಕ್ಷೇತ್ರದ ಮತದಾರರರಲ್ಲದವರು ಬಹಿರಂಗ ಪ್ರಚಾ ರದಲ್ಲಿ ತೊಡಗುವಂತಿಲ್ಲ. ಆದ್ದರಿಂದ ಕ್ಷೇತ್ರದ ಮತದಾರರಲ್ಲದವರು ತಮ್ಮ ಕ್ಷೇತ್ರಕ್ಕೆ ತೆರಳ ತಕ್ಕದ್ದು. ಕಲ್ಯಾಣ ಮಂಟಪ, ಸಮುದಾಯ ಭವನ, ವಸತಿ ಗೃಹಗಳು, ಅತಿಥಿ ಗೃಹ ಗಳಲ್ಲಿ (ಖಾಸಗಿ), ಈ ಕ್ಷೇತ್ರದ ಮತದಾರ ರಲ್ಲದವರು ವಾಸ್ತವ್ಯ ಮಾಡಿರುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಮತದಾನ ಮುಗಿಯುವ ಸಮಯದ ಹಿಂದಿನ 48 ಗಂಟೆಯ ಅವಧಿಯಲ್ಲಿ ಲೌಡ್ ಸ್ಪೀಕರ್‍ನ್ನು ಯಾವುದೇ ಕಾರಣಕ್ಕೂ ಬಳಕೆಗೆ ಅನುಮತಿ ಇರುವುದಿಲ್ಲ. ಮತದಾನದ ದಿನದಂದು ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ವಿಚಾರಣೆ, ದೂರುಗಳನ್ನು ದೂ. ಸಂಖ್ಯೆ 1950ಗೆ ಕರೆ ಮಾಡಬಹುದಾಗಿದೆ. ಜಿಪಂ ಸಿಇಒ ಕೆ.ಲಕ್ಷ್ಮಿಪ್ರಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಅಬಕಾರಿ ಇಲಾಖೆಯ ಅಧಿಕಾರಿ ವೀರಣ್ಣ ಇದ್ದರು.

ಮತಗಟ್ಟೆಗಳಲ್ಲಿ ಮೊಬೈಲ್, ಕ್ಯಾಮರಾ ನಿಷೇಧ
ಏ.18 ರಂದು ನಡೆಯಲಿರುವ ಮತದಾನದ ದಿನದಂದು ಮತದಾರರು ಮೊಬೈಲ್ ಫೋನ್‍ಗಳನ್ನಾಗಲೀ ಅಥವಾ ಕ್ಯಾಮರಾಗಳನ್ನಾಗಲೀ ಮತಗಟ್ಟೆಗಳಿಗೆ ತೆಗೆದುಕೊಂಡು ಹೋಗುವಂತಿಲ್ಲ. ಪ್ರಜಾಪ್ರಾತಿನಿಧ್ಯ ಅಧಿನಿಯಮ 1951 ರ ಸೆಕ್ಷನ್ 128 ಮತ್ತು ಚುನಾವಣೆ ನಡೆಸುವ ನಿಯಮ 39 ರಂತೆ ಮೊಬೈಲ್ ಫೋನ್‍ಗಳನ್ನು ಮತ್ತು ಕ್ಯಾಮರಾಗಳನ್ನು ತೆಗೆದುಕೊಂಡು ಛಾಯಾಚಿತ್ರಗಳನ್ನು ತೆಗೆಯುವುದು ಮತದಾನದ ರಹಸ್ಯ ಉಲ್ಲಂಘಿಸಿದಂತಾಗುತ್ತದೆ. ಆದ್ದರಿಂದ ಮತದಾರರು ಮತಗಟ್ಟೆಗಳಿಗೆ ಮೊಬೈಲ್ ಫೋನ್ ಅಥವಾ ಕ್ಯಾಮರಾಗಳನ್ನು ತೆಗೆದುಕೊಂಡು ಹೋದಲ್ಲಿ ಇವುಗಳನ್ನು ಅಧ್ಯಕ್ಷಾಧಿಕಾರಿಗಳು ಪರಿಶೀಲಿಸಿ ವಶಪಡಿಸಿಕೊಳ್ಳುವರು.

ಉಪಯೋಗಿಸಲಾಗುತ್ತಿರುವ ವಾಹನಗಳು
ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳ ಮತ ದಾನಾಧಿಕಾರಿಗಳು ಮತಗಟ್ಟೆಗೆ ತಲುಪಲು ಒಟ್ಟು 90 ಕೆಎಸ್‍ಆರ್‍ಟಿಸಿ ಬಸ್ಸುಗಳು, 87 ಜೀಪ್‍ಗಳು ಹಾಗೂ 51 ಮಿನಿ ಬಸ್ ಮತ್ತು 13 ಮ್ಯಾಕ್ಸಿಕ್ಯಾಬ್ ಉಪ ಯೋಗಿಸಲಾಗುತ್ತಿದೆ. ವಿಶೇಷಚೇತನ ಮತದಾರರನ್ನು ಅವರ ಮನೆಯಿಂದ ಮತ ಗಟ್ಟೆಗೆ ಕರೆದುಕೊಂಡು ಹೋಗಲು ಮತ್ತು ಅವರು ಮತದಾನ ಮಾಡಿದ ನಂತರ ವಾಪಸ್ಸು ಮನೆಗೆ ಬಿಡುವ ಕಾರ್ಯಕ್ಕೆ ಒಟ್ಟು 176 ವಾಹನಗಳನ್ನು ಉಪ ಯೋಗಿಸಲಾಗುತ್ತಿದೆ ಎಂದು ಅನೀಸ್ ಕಣ್ಮಣಿ ಜಾಯ್ ವಿವರಿಸಿದರು.

Translate »