ರಸ್ತೆ ಅಪಘಾತದಲ್ಲಿ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಸಾವು
ಕೊಡಗು, ಮೈಸೂರು

ರಸ್ತೆ ಅಪಘಾತದಲ್ಲಿ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಸಾವು

March 20, 2019

ಮಡಿಕೇರಿ: ಲಾರಿ ಹಾಗೂ ಮಾರುತಿ ಓಮ್ನಿ ವ್ಯಾನ್ ನಡುವೆ ಡಿಕ್ಕಿ ಸಂಭವಿಸಿ, ವ್ಯಾನ್‍ನಲ್ಲಿದ್ದ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಪಾ ಜೆಯ ಬಾಲಚಂದ್ರ ಕಳಗಿ(42) ದುರ್ಮರಣ ಕ್ಕೀಡಾಗಿದ್ದಾರೆ. ಈ ದುರಂತ ಇಂದು ಸಂಜೆ ಮಡಿಕೇರಿಯ ತಾಳತ್ತಮನೆ ಬಳಿ ನಡೆದಿದೆ. ಘಟನೆ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಕೈಗೊಂಡಿ ದ್ದಾರೆ. ಬಾಲಚಂದ್ರ ಕಳಗಿ ಅವರು ತಮ್ಮ ಮಾರುತಿ ವ್ಯಾನ್‍ನಲ್ಲಿ ಮೂರ್ನಾಡುವಿ ನಿಂದ ತಾಳತ್ತಮನೆ ಬೈಪಾಸ್ ರಸ್ತೆ ಮೂಲಕ ಸಂಪಾಜೆಗೆ ತೆರಳುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದು, ಈ ದುರ್ಘಟನೆ ಸಂಭವಿಸಿದೆ. ಘಟನೆ ಯಿಂದ ಬಾಲಚಂದ್ರ ಕಳಗಿ ತೀವ್ರವಾಗಿ ಗಾಯಗೊಂಡಿದ್ದರು.

ಅವರನ್ನು ಮಡಿ ಕೇರಿ ಜಿಲ್ಲಾ ಆಸ್ಪತ್ರೆಗೆ ಕರೆತರುವ ವೇಳೆ ಮಾರ್ಗ ಮಧ್ಯದಲ್ಲಿ ಮೃತಪಟ್ಟರೆನ್ನ ಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಜಿಲ್ಲಾಸ್ಪತ್ರೆ ಆವರಣ ದಲ್ಲಿ ಜಮಾಯಿಸಿ ತಮ್ಮ ನೆಚ್ಚಿನ ನಾಯ ಕನ ದುರಂತ ಸಾವಿಗೆ ಕಂಬನಿ ಮಿಡಿ ದರು. ಸಂಘ ಪರಿವಾರದಲ್ಲೂ ಗುರುತಿಸಿ ಕೊಂಡಿದ್ದ ಬಾಲಚಂದ್ರಕಳಗಿ ಅವರು ಸಂಪಾಜೆ ಗ್ರಾ.ಪಂ ಅಧ್ಯಕ್ಷರಾಗಿ ಹಾಗೂ ಸಂಪಾಜೆ ಪಯಸ್ವಿನಿ ಸಹಕಾರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಹಾಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಪ್ರತಾಪ ಸಿಂಹ ಪರ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದರು. ಬಿಜೆಪಿ ಯುವ ಮುಖಂಡ ಬಾಲಚಂದ್ರ ಕಳಗಿ ಅವರ ದುರಂತ ಸಾವಿಗೆ ಜಿಲ್ಲಾ ಬಿಜೆಪಿ ಸಂತಾಪ ಸೂಚಿಸಿದ್ದು, ಮಾ.20ರಂದು ನಡೆಯಬೇಕಿದ್ದ ಪಕ್ಷದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ. ಜಿಲ್ಲೆಯ ಎಲ್ಲೆಡೆ ಸಂತಾಪ ಸೂಚನೆ ನಡೆಸಲಾಗುತ್ತದೆ ಎಂದು ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದ್ದಾರೆ.

ಸಂಸದ, ಶಾಸಕರ ಕಂಬನಿ: ಸುದ್ದಿ ತಿಳಿದು ಸಂಸದ ಪ್ರತಾಪ್ ಸಿಂಹ, ಶಾಸಕರು ಗಳಾದ ಎಂ.ಪಿ. ಅಪ್ಪಚ್ಚುರಂಜನ್, ಕೆ.ಜಿ. ಬೋಪಯ್ಯ, ಸುನಿಲ್ ಸುಬ್ರಹ್ಮಣಿ ಆಸ್ಪತ್ರೆಗೆ ಭೇಟಿ ನೀಡಿ, ಸಂತಾಪ ಸೂಚಿಸಿದರು. ಬಾಲಚಂದ್ರ ಕಳಗಿಯಂತಹ ನಿಷ್ಠಾವಂತ ಕಾರ್ಯಕರ್ತರಿಂದ ಜಿಲ್ಲೆಯಲ್ಲಿ ಪಕ್ಷ ಬಲಿಷ್ಟವಾಗಿ ಬೆಳೆಯುವಂತಾಗಿದೆ. ಸಂಪಾಜೆ ಭಾಗದಲ್ಲಿ ಪ್ರತಿ ಚುನಾವಣೆಯಲ್ಲೂ ಬಾಲಚಂದ್ರ ಕಳಗಿ ವಿಶೇಷ ಆಸ್ಥೆ ವಹಿಸಿ ಪಕ್ಷಕ್ಕಾಗಿ ದುಡಿದಿದ್ದಾರೆ. ಅವರ ದುರಂತ ಸಾವು ಅತೀವ ನೋವು ತಂದಿದೆ. ನಿನ್ನೆ ಪೆರಾಜೆಯಲ್ಲಿ ಲೋಕಸಭಾ ಚುನಾವಣಾ ಸಭೆ ನಡೆಸುವ ಮೊದಲು ನನ್ನನ್ನು ದೇವಾಲಯಕ್ಕೆ ಕರೆದೊಯ್ದು ಪೂಜೆ ಸಲ್ಲಿಸಿ, ನನ್ನ ಗೆಲುವಿಗೆ ಹರಕೆ ಹೊತ್ತಿದ್ದರು. ಇಂದು ಅವರು ನಮ್ಮೊಂದಿಗೆ ಇಲ್ಲದಿರುವುದು ದುರ್ವಿಧಿ ಅಟ್ಟಹಾಸ ಎಂದೇ ಹೇಳಬೇಕು. ಮೃತರ ಕುಟುಂಬಕ್ಕೆ ಇಗ್ಗುತ್ತಪ್ಪ, ತಾಯಿ ಕಾವೇರಿ ಮಾತೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಂಸದ ಪ್ರತಾಪ್ ಸಿಂಹ ಅತೀವ ಶೋಕ ವ್ಯಕ್ತಪಡಿಸಿದ್ದಾರೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಗ್ರಾ.ಪಂ. ಅಧ್ಯಕ್ಷರಾಗುವ ಮೂಲಕ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಪಂಚಾಯಿತಿ ಪ್ರಶಸ್ತಿಯನ್ನು ಬಾಲಚಂದ್ರ ಕಳಗಿ ತಂದು ಕೊಟ್ಟಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಬಾಲಚಂದ್ರ ಕಳಗಿಯೇ ಮುಂದೆ ನಿಂತು ನನ್ನ ಮತ್ತು ಪಕ್ಷದ ಪರ ಕೆಲಸ ಮಾಡಿದ್ದರು.

ಅತ್ಯಂತ ಪ್ರಾಮಾಣಿಕ ಮತ್ತು ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದ ಕಳಗಿಯನ್ನು ಕಳೆದುಕೊಂಡದ್ದು, ಅತೀವ ದುಃಖ ತಂದಿದೆ. ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ತುಂಬಲಿ ಎಂದು ಕೆ.ಜಿ. ಬೋಪಯ್ಯ ಕಂಬನಿ ಮಿಡಿದಿದ್ದಾರೆ. ಮೃತ ಬಾಲಚಂದ್ರ ಕಳಗಿ, ತಂದೆ-ತಾಯಿ, ಪತ್ನಿ, ಅಕ್ಕ-ಭಾವ ಸೇರಿದಂತೆ ಅಪಾರ ಬಂಧು ವರ್ಗ, ಅಭಿಮಾನಿಗಳು, ಸ್ನೇಹಿತರ ಅಗಲಿದ್ದಾರೆ.

Translate »