ಕೊಡವ ಹೆರಿಟೇಜ್ ಸೆಂಟರ್  ಕೊಡಗಿನ ಮಹಿಳೆಯ ಪರಿಕಲ್ಪನೆ
ಕೊಡಗು

ಕೊಡವ ಹೆರಿಟೇಜ್ ಸೆಂಟರ್ ಕೊಡಗಿನ ಮಹಿಳೆಯ ಪರಿಕಲ್ಪನೆ

March 21, 2019

ಮಡಿಕೇರಿ: ಕೊಡಗು ಜಿಲ್ಲೆಯ ಸಂಪ್ರದಾಯಬದ್ದ ಸಂಸ್ಕøತಿ ಮತ್ತು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿರುವ ವಿಚಾರಗಳನ್ನು ಪ್ರವಾಸಿಗರು ಮತ್ತು ಮುಂದಿನ ಯುವ ಪೀಳಿಗೆಗೆ ಪರಿಚÀಯಿಸಬೇಕೆನ್ನುವ ಉದ್ದೇಶದಿಂದ 2009-10ರಲ್ಲಿ ಪ್ರಾರಂಭಿಸಿದ “ಕೊಡವ ಹೆರಿಟೇಜ್ ಸೆಂಟರ್” ಯೋಜ ನೆಯನ್ನು ಜಿಲ್ಲೆಯಲ್ಲಿ ಕೊಡವ ಹೆರಿಟೇಜ್ ಸೆಂಟರ್ ಪರಿಕಲ್ಪನೆಯನ್ನು ಮೊದಲ ಬಾರಿಗೆ ಅನುಷ್ಠಾನಕ್ಕೆ ತಂದದ್ದು, ಕೊಡಗಿನವರೇ ಆದ ಹಿರಿಯ ಮಹಿಳಾ ಐಎಎಸ್ ಅಧಿಕಾರಿ ಕೋದಂಡ ರತಿ ಎಂಬುವರು ಎನ್ನುವ ಮಾಹಿತಿ ದೊರಕಿದೆ. ಈ ಮಹಿಳಾ ಅಧಿಕಾರಿ ದೆಹಲಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಮುಖ್ಯ ಹುದ್ದೆಯನ್ನು ನಿರ್ವಹಿಸುತ್ತಿದ್ದ ಸಂದರ್ಭ ಈ ಮಹತ್ವದ ಯೋಜನೆಯನ್ನು ಕೊಡಗು ಜಿಲ್ಲೆಗೆ ತರುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಮಾತ್ರವಲ್ಲದೇ, ಕೊಡವ ಹೆರಿಟೇಜ್ ಸೆಂಟರ್‍ಗೆ ಪ್ರಾರಂಭಿಕ ರೂಪ ಮತ್ತು ಅದರ ರಚನೆ ಹೇಗಿರಬೇಕೆಂದು ನಿರ್ಣಯಿಸಿದ್ದರು. ಪ್ರಸ್ತುತ ಇವರು ಸರಕಾರೇತರ ಸಂಸ್ಥೆಯೊಂದನ್ನು ಹುಟ್ಟುಹಾಕಿ ಸಮಾಜ ಸೇವೆಯಲ್ಲೂ ತೊಡ ಗಿಸಿಕೊಂಡಿದ್ದಾರೆ ಎಂದೂ ವಿಶ್ವಾಸನೀಯ ಮೂಲಗಳು ಮಾಹಿತಿ ನೀಡಿವೆ.

Translate »