ಇಗ್ಗುತಪ್ಪ ದೇವರ ಸಂಭ್ರಮದ ಉತ್ಸವ
ಕೊಡಗು

ಇಗ್ಗುತಪ್ಪ ದೇವರ ಸಂಭ್ರಮದ ಉತ್ಸವ

March 21, 2019

ನಾಪೋಕ್ಲು: ಕೊಡಗಿನ ಆರಾಧ್ಯ ದೈವ ಪಾಡಿ ಶ್ರೀ ಇಗ್ಗುತಪ್ಪ ದೇವರ ವಾರ್ಷಿಕ ಉತ್ಸವ ಕುಂಬ್ಯಾರ್ ಕಲ್ಲಾಡ್ಚ ಉತ್ಸವ ಸಂಭ್ರ ಮದಿಂದ ಜರುಗಿತು. ಬೆಳಿಗ್ಗೆ ದೇವತಕ್ಕರಾದ ಪರದಂಡ ಕುಟುಂಬಸ್ಥರ ಎತ್ತು ಪೋರಾಟ ಹಾಗೂ ಬಲಿವಾಡಿನೊಂದಿಗೆ ಸನ್ನಿಧಿಗೆ ಬಂದ ಬಳಿಕ ದೇವಾಲಯದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡವು.

ಪೇರಿಯಂಡ, ಕೋಡಿಮಣಿಯಂಡ, ಅಲ್ಲಾ ರಂಡ, ಮಾದಂಡ ಹಾಗೂ ಚೌರೀರ ಕುಟುಂ ಬಸ್ಥರ ಸಾಂಪ್ರದಾಯಿಕ ಎತ್ತು ಪೋರಾಟದ ಬಳಿಕ ತುಲಾಭಾರ ಸೇವೆ ಭಕ್ತರು ಹರಕೆ ಸಲ್ಲಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು. ನೆರೆ ದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ಅಪರಾಹ್ನ ದೇವರ ಉತ್ಸವ ಮೂರ್ತಿ ಯೊಂದಿಗೆ ಮಲ್ಮಬೆಟ್ಟಕ್ಕೆ ತೆರಳಲಾಯಿತು. ಈ ಸಂದರ್ಭ ಭಕ್ತರು, ನೆಲಜಿ ಹಾಗೂ ಪೇರೂರು ಗ್ರಾಮಗಳ ತಕ್ಕಮುಖ್ಯಸ್ಥರು ಪಾಲ್ಗೊಂಡಿದ್ದರು. ಮಲ್ಮ ಬೆಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನೆರವೇರಿಸಿದ ಬಳಿಕ ಹಬ್ಬದ ಕಟ್ಟನ್ನು ಸಡಿಲಿಸಲಾಯಿತು. ಬಳಿಕ ಸನ್ನಿಧಿಗೆ ಹಿಂತಿರುಗಿ ವಿವಿಧ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸುವುದರೊಂದಿಗೆ ಉತ್ಸವ ಸಂಪನ್ನಗೊಂಡಿತು. ಈ ಸಂದರ್ಭ ಭಕ್ತ ಜನಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ, ಉಪಾಧ್ಯಕ್ಷ ಪರದಂಡ ಜಾಲಿ, ಕಾರ್ಯದರ್ಶಿ ಲಲಿತಾನಂದಕುಮಾರ್, ಡಾ. ಸಣ್ಣುವಂಡ ಕಾವೇರಪ್ಪ, ಬಡಕ್ಕಡ ಸುರೇಶ್, ಕಲಿಯಂಡ ಸುನಂದ, ಕೋಡಿ ಮಣಿಯಂಡ ಸುರೇಶ್, ನಾಟೋಳಂಡ ದಿಲೀಪ್, ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಾಚರಂಡ ಲವಚಿಣ್ಣಪ್ಪ, ಕಲಿ ಯಂಡ ಸಂಪಅಯ್ಯಪ್ಪ, ಬೊಳ್ಳಂಡ ಗಿರಿ, ಕೇಟೋಳಿರ ಶಾರದಾಅಯ್ಯಪ್ಪ, ಕೇಟೋಳಿರ ಡಾಲಿ, ಪಾರುಪತ್ತೆಗಾರ ಪರದಂಡ ಪ್ರಿನ್ಸ್ ತಮ್ಮಯ್ಯ, ವ್ಯವಸ್ಥಾಪಕ ಕಾಳಿಂಗ ಪಾಲ್ಗೊಂಡಿ ದ್ದರು. ಮುಖ್ಯ ಅರ್ಚಕರಾದ ಕುಶಭಟ್ ಹಾಗೂ ಲವಭಟ್ ಪೂಜಾ ವಿಧಿವಿಧಾನ ಗಳನ್ನು ನೆರವೇರಿಸಿದರು.

Translate »