ವಿದ್ಯಾರ್ಥಿಗಳಿಗೆ ಜೀವನದಲ್ಲಿ ಗುರಿ ಇರಬೇಕು
ಕೊಡಗು

ವಿದ್ಯಾರ್ಥಿಗಳಿಗೆ ಜೀವನದಲ್ಲಿ ಗುರಿ ಇರಬೇಕು

March 21, 2019

ವಿರಾಜಪೇಟೆ: ವಿದ್ಯಾರ್ಥಿ ಜೀವನದಲ್ಲಿ ಯಾವುದೇ ಯೋಜನೆಗಳು ಮುಂದಿದ್ದರು ಅದಕ್ಕೆ ನಿಗದಿತ ಗುರಿ ಇರಬೇಕು. ಆಗ ಮಾತ್ರ ಯಾವುದೇ ಉದ್ಯೋಗ ವ್ಯಾಪಾರಗಳಲ್ಲಿ ಯಶ ಗಳಿಸಲು ಸಾಧ್ಯ. ಹಣ ಹೂಡಿಕೆ ಹಣ ಪಡೆಯುವ ರೀತಿ ವೃತ್ತಿಪರತೆಯಿಂದ ಸ್ವ ಉದ್ಯೋಗದಲ್ಲಿ ತೊಡಗಿ ಮುಂದಿನ ಬದುಕು ರೂಪಿಸಿಕೊಳ್ಳು ವಂತೆ ವಿರಾಜಪೇಟೆ ಉದ್ಯಮಿ ಅತೀಪ್ ಮನ್ನಾ ಹೇಳಿದರು.

ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾ ರ್ಥಿಗಳ ಒಕ್ಕೂಟ ಮತ್ತು ಕಾಮರ್ಸ್ ವಿಭಾಗದ ವತಿಯಿಂದ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದ್ದ ‘ವಸ್ತು ಪ್ರದರ್ಶನ ಮಾರಾಟ ಎಕ್ಸ್‍ಪೋ 19’ನ್ನು ಉದ್ಘಾಟಿಸಿದ ಬಳಿಕ ಮಾತ ನಾಡಿದ ಅವರು, ಸರಕಾರಿ ಕಾಲೇಜಿನಲ್ಲಿ ಹೆಚ್ಚು ಬಡ ವಿದ್ಯಾ ರ್ಥಿಗಳೇ ಇದ್ದು ಯಾವುದೇ ಸಾಧನೆಗಳಿಗೆ ಪರಿಶ್ರಮವೇ ಮುಖ್ಯ. ಸಣ್ಣ ಮಟ್ಟದಿಂದ ದೊಡ್ಡ ಮಟ್ಟದತ್ತ ಸಾಗುವ ಸಂಕಲ್ಪ ಇರಬೇಕು. ಈ ಕಾರ್ಯಕ್ರಮ ನಿರೀಕ್ಷೆಗಿಂತ ಉತ್ತಮವಾಗಿದೆ. ಇದೇ ರೀತಿ ವರ್ಷಂಪ್ರತಿ ಕಾರ್ಯಕ್ರಮಗಳ ಹಮ್ಮಿಕೊಂಡು ತಮ್ಮ ಅನುಭವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಬದಕು ರೂಪಿಸಿಕೊಳ್ಳುವಂತಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ, ಟಿ.ಕೆ. ಬೋಪಯ್ಯ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಣ್ಣ ಬಂಡವಾಳ ಹಾಕಿ ದೊಡ್ಡ ಪ್ರತಿಫಲ ಪಡೆಯುವ ನಿಟ್ಟಿನಲ್ಲಿ ನಿರೀಕ್ಷೆ ಮಾಡಬೇಕು. ಹಾಗೂ ಆಧುನಿಕತೆಯನ್ನು ವಸ್ತುಗಳ ತಯಾರಿಕೆಯಲ್ಲಿ ಬಳಸಿಕೊಳ್ಳಬೇಕು. ಅನೇಕ ವರ್ಷಗಳ ಬಳಿಕ ಕಾಲೇಜಿನ ವಿದ್ಯಾರ್ಥಿಗಳು ತಿಂಡಿ ತಿನಿಸುಗಳನ್ನು ತಂದು ಮಾರಾಟ ಮಾಡುತ್ತಿರುವುದು ವಿಭಿನ್ನವಾಗಿದೆ. ಶಿಕ್ಷಣದ ಬಳಿಕ ಈ ರೀತಿ ಕಾರ್ಯಕ್ರಮಗಳ ಮೂಲಕ ತಮ್ಮ ಜ್ಞಾನವನ್ನು ಬೆಳೆಸಿಕೊಳ್ಳುವಂತಾ ಗಬೇಕು. ಹಿಂದಿನ ದಿನಗಳಲ್ಲಿ ಸಣ್ಣ ಹಾಗೂ ಗುಡಿ ಕೈಗಾರಿಕೆಗಳಿಗೆ ಒತ್ತು ನೀಡಲಾಗಿತ್ತು. ನಂತರ ಈ ಬದಲಾವಣೆಗಳನ್ನು ಕಂಡು ದೊಡ್ಡ ಕೈಗಾರಿಕೆಗಳು ಮುಂದೆ ಬಂದರು ಕೂಡ ಈಗ ಮತ್ತೆ ಸಣ್ಣ ಕೈಗಾರಿಕೆಗೆ ಮಹತ್ವ ನೀಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಮರ್ಸ್ ವಿಭಾಗದ ಅಧ್ಯಕ್ಷ ಹೆಚ್.ಬಿ.ಕಾರ್ತೀಕ್ ಕುಮಾರ್ ಹಾಗೂ ಕಾಮರ್ಸ್ ವಿಭಾಗದ ಸಹಾಯಕ ಪ್ರೊ ಎಂ.ಎಂ. ಸುನಿತಾ ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.

Translate »